1:45 AM Saturday23 - November 2024
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ… ಫೆಸ್ಟಿವಲ್ ಆಫ್ ಆಸ್ಟ್ರೇಲಿಯಾ: ಶಿಕ್ಷಣದ ಶ್ರೇಷ್ಠತೆ ಮತ್ತು ಪ್ರಿಮಿಯಂ ಎಫ್ & ಬಿ… ತೇಜಸ್ವಿ ಅವರು ನಡೆನುಡಿಯಲ್ಲಿ ಬಹುತೇಕ ಒಂದೇ ಎಂಬಂತೆ ಬದುಕಿದ ಅಪರೂಪದ ಲೇಖಕರು; ಡಾ.ಸಂಪತ್…

ಇತ್ತೀಚಿನ ಸುದ್ದಿ

ಮುಂದೆ ಗುರಿ, ಹಿಂದೆ ಗುರು ಇದ್ದರೆ ಮಾತ್ರ ಯಶಸ್ಸು ಸಾಧ್ಯ: ಆದರೆ ಆಧುನಿಕ ಕಾಲಘಟ್ಟದಲ್ಲಿ ಏನಾಗುತ್ತದೆ ಬದಲಾವಣೆ?

29/12/2021, 19:24

ಶಾಲೆ ಎಂಬುದು ವಿದ್ಯಾದೇಗುಲ.ಇಲ್ಲಿ ಪ್ರತಿನಿತ್ಯ ಶಿಕ್ಷಕರ ಮಾರ್ಗದರ್ಶನದಲ್ಲಿ ಜ್ಞಾನಾರ್ಜನೆಯ ಜೊತೆಗೆ ಜೀವನ ಮೌಲ್ಯಗಳು, ಕೌಶಲ್ಯಗಳು ,ನಾಯಕತ್ವ ಗುಣ , ತಾಳ್ಮೆ, ನೈತಿಕತೆ,ಶಿಸ್ತು ,ಉತ್ತಮ ಗುಣನಡತೆ , ಸ್ನೇಹಪರತೆ, ಭಾವೈಕ್ಯತೆ ,ರಾಷ್ಟ್ರಪ್ರೇಮ , ಪಠ್ಯೇತರ ಚಟುವಟಿಕೆ ಇನ್ನೂ ಅನೇಕ ವಿಚಾರಗಳನ್ನು ವಿದ್ಯಾರ್ಥಿ ಕಲಿಯುತ್ತಾನೆ.

ಗುರು ಇಲ್ಲದೆ ಗುರಿಯನ್ನು ತಲುಪುವುದು ಕಷ್ಟ. ಅಂತೆಯೇ ಶಿಕ್ಷಣಾರ್ಥಿಗಳಿಗೆ ಜ್ಞಾನ ,ಸಾಮರ್ಥ್ಯ, ಕೌಶಲ್ಯ,ಮೌಲ್ಯಗಳನ್ನು ಪಡೆಯಲು ಸಹಾಯ ಮಾಡುವ ವ್ಯಕ್ತಿಯೇ ಶಿಕ್ಷಕ. ಇಲ್ಲಿ ವೈಯುಕ್ತಿಕ ಯಶಸ್ಸು ವಿದ್ಯಾರ್ಥಿಯ ಆಂತರಿಕ ಗುರಿಯಾಗಿದೆ . ಒಬ್ಬವಿದ್ಯಾರ್ಥಿ ಡಾಕ್ಟರ್, ಇಂಜಿನಿಯರ್ , ವಿಜ್ಞಾನಿ, ಸೈನಿಕ, ಕ್ರೀಡೆ ಹೀಗೆ ಯಾವುದೇ ಕ್ಷೇತ್ರದಲ್ಲಿದ್ದರೂ ಅಲ್ಲಿ ವಿದ್ಯಾರ್ಥಿ ಪರಿಶ್ರಮದ ಜೊತೆಗೆ ಗುರುಗಳು ಪೋಷಕರ ಪಾತ್ರ ಖಂಡಿತ ಇರುತ್ತದೆ.

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಎಂಬ ಶ್ಲೋಕದ ತಾತ್ಪರ್ಯ ದಂತೆ ಶಾಲೆಯಲ್ಲಿ ಶಿಕ್ಷಣ ನೀಡುವ ಗುರುಗಳು ನಮಗೆ ದೇವರು ಇದ್ದಹಾಗೆ .ಹೆತ್ತವರಿಗೆ ಮಕ್ಕಳು ಆಲಿಸದಿದ್ದ ರೂ ಅದೆಷ್ಟೋ ಸಂದರ್ಭಗಳಲ್ಲಿ ಶಾಲಾ ಶಿಕ್ಷಕರಿಗೆ ತಲೆಬಾಗುತ್ತಾರೆ ಗೌರವ ನೀಡುತ್ತಾರೆ, ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾರೆ.

ಶಾಲೆಯಲ್ಲಿ ವಿದ್ಯಾರ್ಥಿ-ಶಿಕ್ಷಕರ ಸಂಬಂಧ ಅತಿ ಪಾವಿತ್ರ್ಯತೆಯನ್ನು ಹೊಂದಿದೆ . ಉತ್ಸಾಹ ಭರಿತ ಶಿಕ್ಷಕ ವಿದ್ಯಾರ್ಥಿಗಳೊಂದಿಗೆ ಧನಾತ್ಮಕ ,ಪ್ರಯೋಜನಕಾರಿ ಸಂಬಂಧಗಳನ್ನು ಹೊಂದುವಲ್ಲಿ ಯಶಸ್ವಿಯಾಗುತ್ತಾರೆ. ಜೊತೆಗೆ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಕಾರಣಕರ್ತರಾಗುತ್ತಾರೆ.

ಕಾಲ ಬದಲಾದಂತೆ ವಿದ್ಯಾರ್ಥಿ-ಶಿಕ್ಷಕರ ಸಂಬಂಧವೂ ಬದಲಾಗುತ್ತಾ ಬಂದಿದೆ .ನಾವೆಲ್ಲಾ ವಿದ್ಯಾರ್ಥಿಗಳಾಗಿದ್ದಾಗ ಶಿಕ್ಷಕರಿಗೆ ನಮಸ್ತೆ ಹೇಳಲು ಹೆದರುತ್ತಿದ್ದ ಕಾಲ .ಶಾಲೆಯಿಂದ ಹೊರಗೆ ಅದೆಷ್ಟೋ ಸಂದರ್ಭಗಳಲ್ಲಿ ದೂರದಲ್ಲಿ ಶಿಕ್ಷಕರ ತಲೆ ಕಂಡರೂ ಅಡಗಿ ಕೂರುತ್ತಿದ್ದ ಸಮಯ. ಅಂದರೆ ಶಿಕ್ಷಕರ ಕಂಡರೆ ಅಷ್ಟೇ ಭಯ ಭಕ್ತಿ ಇರುತ್ತಿತ್ತು ಕಾಲ ಬದಲಾದಂತೆ ವಿದ್ಯಾರ್ಥಿ-ಶಿಕ್ಷಕರ ಸಂಬಂಧವೂ ಬದಲಾಗುತ್ತಾ ಬಂದಿದೆ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಶಿಕ್ಷೆ ಇಲ್ಲದೆ ಶಿಕ್ಷಣ ಇಲ್ಲ. ಹಾಗೆಂದ ಮಾತ್ರಕ್ಕೆ ಶಿಕ್ಷಕರು ಕೇವಲ ದಂಡನೆಯ ಮೂಲಕವೇ ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವುದು ಎಂದಲ್ಲ. ಜ್ಞಾನಾರ್ಜನೆಯ ಜೊತೆಗೆ ಶಿಕ್ಷಕರು ಸೂಕ್ತ ಮಾರ್ಗದರ್ಶನ ಸಮಾಲೋಚನೆಗಳ ಮೂಲಕ ವಿದ್ಯಾರ್ಥಿಗಳನ್ನು ತಿದ್ದುವ ಕೆಲಸ ಕೂಡ ಮಾಡುತ್ತಿದ್ದಾರೆ.

ಇತ್ತೀಚಿನ ಬದಲಾದ ಸನ್ನಿವೇಶದಲ್ಲಿ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಆತ್ಮೀಯ ರಾಗಿರುವುದು ಕಂಡುಬರುತ್ತಿದೆ .ಅದು ಹಿತಮಿತವಾಗಿದ್ದರೆ ಉತ್ತಮ . ಆಧುನಿಕ ತಂತ್ರಜ್ಞಾನದಿಂದಾಗಿ ,ಸಾಮಾಜಿಕ ಜಾಲತಾಣಗಳಿಂದಾಗಿ ವಿದ್ಯಾರ್ಥಿಗಳು -ಶಿಕ್ಷಕರು -ಪೋಷಕರು ಹೀಗೆ ಪರಸ್ಪರರ ಬಗ್ಗೆ ಹೆಚ್ಚು ತಿಳಿದುಕೊಂಡಿರುತ್ತಾರೆ.

ವ್ಯವಸ್ಥೆಗಳು ಹೇಗೆ ಇರಲಿ ಕಾರಣಗಳು ಏನೇ ಇರಲಿ ವಿದ್ಯಾರ್ಥಿಗಳಿಗೆ ಕೂಡ ಕೆಲವು ಕಟ್ಟುಪಾಡುಗಳಿವೆ ,ಮಿತಿಗಳಿವೆ. ಜ್ಞಾನ ಗಳಿಕೆಯ ಜೊತೆಗೆ ಗುರು ಹಿರಿಯರನ್ನು ಗೌರವಿಸುವುದು, ಜೀವನ ಮೌಲ್ಯಗಳನ್ನು ಅರಿಯುವುದು ,ಉತ್ತಮ ಗುಣನಡತೆ ಗಳನ್ನು ಪಾಲಿಸುವುದು,ತನ್ನ ಗುರಿ ಸಾಧನೆಯ ಕಡೆಗೆ ಗಮನನೀಡುವುದು ಇತ್ಯಾದಿ ವಿದ್ಯಾರ್ಥಿಗಳ ಜವಾಬ್ದಾರಿ ಗಳಾಗಿರುತ್ತದೆ .ಆದರೆ ಇಂದಿನ ದಿನಗಳಲ್ಲಿ ನಾವು ಶ್ರೇಷ್ಠ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಶಿಕ್ಷಕರ ಮೇಲೆ ವಿದ್ಯಾರ್ಥಿಗಳೇ ದೌರ್ಜನ್ಯ ಎಸಗುತ್ತಿರುವುದನ್ನು ಕಾಣುತ್ತಿದ್ದೇವೆ. ಶಿಕ್ಷಕರ ಸ್ನೇಹ ಶೀಲ ಗುಣ ,ಮೃದುಧೋರಣೆ ,ಸೌಮ್ಯ ಸ್ವಭಾವವನ್ನು ತನ್ನ ಸ್ವಾರ್ಥಕ್ಕೋಸ್ಕರ ಬಳಸಿಕೊಳ್ಳುತ್ತಿದ್ದಾನೆ .ಇಂತಹ ಅತಿರೇಕದ ವರ್ತನೆ ಖಂಡನೀಯ .ಶಿಕ್ಷಕ ಸಮುದಾಯಕ್ಕೆ ಸಿಗಬಹುದಾದ ಗೌರವ ವೃತ್ತಿ ಸ್ಥಾನದಲ್ಲಿ ಇಲ್ಲ ಎಂದಮೇಲೆ ಶಿಕ್ಷಕರ ಪಾಡೇನು ? ಇದಕ್ಕೆ ಕಾರಣಗಳು ಏನೇ ಇರಬಹುದು ವಿದ್ಯಾರ್ಥಿ ಜೀವನದಲ್ಲಿ ಇಂತಹ ದೌರ್ಜನ್ಯ ಎಸಗುತ್ತಿರುವ ಅದೂ ವಿದ್ಯೆ ನೀಡುವ ಗುರುಗಳಿಗೆ ಅವಮಾನ ಮಾಡುವ ವಿದ್ಯಾರ್ಥಿಗಳಿಂದ ಸಮಾಜ ಏನನ್ನು ನಿರೀಕ್ಷಿಸಬಹುದು ?ಇಂತಹ ವಿದ್ಯಾರ್ಥಿಗಳು ಸಮಾಜಘಾತುಕ ಶಕ್ತಿಗಳಾಗಿ ಪರಿವರ್ತಿತ ರಾಗುತ್ತಾರೆ .ಸಮಾಜದ ಅಭಿವೃದ್ಧಿಗೆ ಕಂಕಣ ಪ್ರಾಯರಾದ ಬೇಕಾದ ವಿದ್ಯಾರ್ಥಿಗಳು ಸಮಾಜಕ್ಕೆ ಕಂಟಕರಾಗುವ ಸನ್ನಿವೇಶ ರೂಪುಗೊಂಡಂತೆ ಆಗುತ್ತದೆ.

ಒಟ್ಟಿನಲ್ಲಿ ತನ್ನ ಜ್ಞಾನದ ಬೆಳಕನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆದು ಅವರ ಬಾಳಿನಲ್ಲಿ ಆಶಾ ಜ್ಯೋತಿಯನ್ನು ಬೆಳಗಿಸುವ ಗುರುಗಳಿಗೆ ದ್ರೋಹ ಬಗೆದರೆ ಅದು ಅವನ ಅವನತಿಗೆ ಕಾರಣವಾಗುತ್ತದೆ .ಆದುದರಿಂದ ಎಲ್ಲರೂ ಸಮಾಜದಲ್ಲಿ ಪ್ರತಿಯೊಬ್ಬರನ್ನು ಗೌರವಿಸುವುದು ಅತಿಮುಖ್ಯ.

✍️

ಇತ್ತೀಚಿನ ಸುದ್ದಿ

ಜಾಹೀರಾತು