ಇತ್ತೀಚಿನ ಸುದ್ದಿ
ಮುಂಬರುವ ಜಿಪಂ, ತಾಪಂ ಚುನಾವಣೆಗೆ ಸಿದ್ದರಾಗಿ: ಗುತ್ತಿಗಾರಿನಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಸಲಹೆ
27/07/2024, 16:19
ಗುತ್ತಿಗಾರು(reporterkarnataka.com): ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಅವರು ಗುತ್ತಿಗಾರು ವಲಯ ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗೆ
ತಯಾರಾಗುವಂತೆ ಸಲಹೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎನ್. ಜಯಪ್ರಕಾಶ್ ರೈ, ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಮುಖರಾದ ಗಿರೀಶ್ ಕೊರಂಬಟ, ಎಸ್. ಸಿ ಘಟಕದ ಅಧ್ಯಕ್ಷ ಪರಮೇಶ್ವರ ಕೆಂಬಾರೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಮುಖರಾದ ಹರ್ಷಿತ್ ಕೊರಂಬಟ, ಜಿಲ್ಲಾ ಕಾಂಗ್ರೆಸ್ ಎಸ್ ಟಿ ಘಟಕ ಉಪಾಧ್ಯಕ್ಷ ಭವಾನಿಶಂಕರ್ ಕಲ್ಮಡ್ಕ, ಡಿಸಿಸಿ ಸದಸ್ಯ ನಂದರಾಜ್ ಸಂಕೇಶ, ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ ಜೆ, ಸಾಮಾಜಿಕ ಜಾಲತಾಣ ಮಾಜಿ ಸಂಚಾಲಕ ಚೇತನ್ ಕಜೆಗದ್ದೆ ಭಾಗವಹಿಸಿದ್ದರು. ಗುತ್ತಿಗಾರು ವಲಯ ಕಾಂಗ್ರೆಸ್ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು. ದಿನೇಶ್ ಸರಸ್ವತಿ ಮಹಲ್ ಕಾರ್ಯಕ್ರಮ ನಿರೂಪಿಸಿದರು.
ಸಭೆಯ ಬಳಿಕ ಮರಕತ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ನಂತರ ತೀವ್ರ ಮಳೆ -ಗಾಳಿಗೆ ಅಪಾರ ನಷ್ಟ ಅನುಭವಿಸಿದ ವಲ್ಪಾರೆಯ ಕೃಷಿಕರ ಮನೆಗೆ ತೆರಳಿ ನಷ್ಟ ಸಂಭವಿಸಿದ ಅಡಿಕೆ ತೋಟ ವೀಕ್ಷಿಸಿ ಪರಿಹಾರ ಒದಗಿಸುವ ಭರವಸೆ ನೀಡಿದರು.