ಇತ್ತೀಚಿನ ಸುದ್ದಿ
ಮುಳ್ಳಯ್ಯನಗಿರಿ: 250 ಅಡಿ ಎತ್ತರದಿಂದ ಪ್ರಪಾತಕ್ಕೆ ಬಿದ್ದ ಕಾರು; 5 ಮಂದಿಗೆ ತೀವ್ರ ಗಾಯ
11/10/2024, 23:09

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಸಮೀಪದ ಕವಿಕಲ್ ಗಂಡಿ ಪ್ರಪಾತಕ್ಕೆ ಕಾರೊಂದು ಬಿದ್ದಿದ್ದು, 5 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಸುಮಾರು 250 ಅಡಿ ಎತ್ತರದ ಪ್ರದೇಶದಿಂದ ಕಾರು
ಕೆಳಗೆ ಬಿದ್ದಿದೆ. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ತೆಲಂಗಾಣ ಮೂಲದ ಕಾರು ಪ್ರಪಾತಕ್ಕೆ ಬಿದ್ದಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
250 ಅಡಿ ಎತ್ತರದಿಂದ ಬೀಳುವಾಗ ಮರ, ರೆಂಬೆ-ಕೊಂಬೆಗಳಿಗೆ ಸಿಲುಕಿದ ಪರಿಣಾಮ ಕಾರು ಬೀಳುವ ವೇಗ ಕಡಿಮೆಯಾಗಿ ಪ್ರಾಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಮರದ ರೆಂಬೆ-,ಕೊಂಬೆಗಳಿಗೆ ಸಿಲುಕಿ ಅಲ್ಲೇ ಕಾರು ನಿಂತಿದೆ.
ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.