ಇತ್ತೀಚಿನ ಸುದ್ದಿ
ಮುಳಿಯ ಗೋಲ್ಡ್ & ಡೈಮಂಡ್ಸ್ ನಿಂದ ಕುರಿಯ ಶಾಲೆಗೆ ಕಂಪ್ಯೂಟರ್, ಪ್ರಿಂಟರ್ ಹಸ್ತಾಂತರ
30/10/2025, 22:51
ಪುತ್ತೂರು(reporterkarnataka.com): ಮುಳಿಯ ಗೋಲ್ದ್ ಅಂಡ್ ಡೈಮಂಡ್ಸ್ ನ ಪುತ್ತೂರು ಮಳಿಗೆ ವತಿಯಿಂದ ಇಂದು ಕುರಿಯದಲ್ಲಿರುವ ದ.ಕ.ಜಿ.ಪಂ. ಸರಕಾರಿ ಉ ಹಿ ಶಾಲೆಗೆ ಕಂಪ್ಯೂಟರ್ ಮತ್ತು ಪ್ರಿಂಟರ್ ಅನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನ ಶಾಖಾ ಪ್ರಬಂಧಕರಾದ ರಾಘವೇಂದ್ರ ಪಾಟೀಲ್ ಅವರು ಶಾಲಾ ಮುಖ್ಯ ಶಿಕ್ಷಕರಾದ ನವೀನ್ ಕುಮಾರ್ ಅವರಿಗೆ ಕಂಪ್ಯೂಟರ್ ಮತ್ತು ಪ್ರಿಂಟರ್ ಅನ್ನು ಹಸ್ತಾಂತರಿಸಿದರು.
ಶಾಲಾ ಅಧ್ಯಕ್ಷರಾದ ಅಬ್ದುಲ್ ಜಬ್ಬಾರ್, ಎಸ್. ಡಿ ಎಂ ಸಿ ಯ ನಾಮನಿರ್ದೇಶಿತ ಸದಸ್ಯರಾದ ಬುಡಿಯಾರ್ ಪುರುಷೋತ್ತಮ ರೈ ಅವರು ಉಪಸ್ಥಿತರಿದ್ದರು.












