6:58 AM Thursday18 - December 2025
ಬ್ರೇಕಿಂಗ್ ನ್ಯೂಸ್
ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ಮುಳಬಾಗಿಲು ಅಂಜನಾದ್ರಿ ಬೆಟ್ಟದಲ್ಲಿ ಬೆಚ್ಚಿಬೀಳಿಸುವ ಘಟನೆ: ಹೆತ್ತಬ್ಬೆಯಿಂದಲೇ ಇಬ್ಬರು ಹೆಣ್ಣು ಮಕ್ಕಳಿಗೆ ಬೆಂಕಿ; ಓರ್ವ ಬಾಲಕಿ ಸಾವು

08/12/2022, 10:33

ಶಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಇಬ್ಬರು ಮಕ್ಕಳಿಗೆ ತಾಯಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಹೃದಯ ವಿದ್ರಾವಕ ಘಟನೆ ತಡರಾತ್ರಿ ನಡೆದಿದ್ದು , ಓರ್ವ ಪುತ್ರಿ ಸುಟ್ಟು ಕರಕಲಾಗಿದ್ದು , ಮತ್ತೊಬ್ಬ ಮಗಳ ಸ್ಥಿತಿ ಚಿಂತಾಜನಕವಾಗಿದೆ .

ಓರ್ವ ಮಗಳು ಅಕ್ಷಯ ( ೮ ) ಸ್ಥಳದಲ್ಲೇ ಮೃತಪಟ್ಟಿದ್ದು , ಮತ್ತೊಬ್ಬ ಮಗಳು ಉದಯಶ್ರೀ ( ೬ ) ಸಾವು ಬದುಕಿನ ನಡುವೆ ಹೋರಾಡುತ್ತಿದ್ದು , ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಬುಧವಾರ ಮುಂಜಾನೆ ವಾಯುವಿಹಾರಕ್ಕೆಂದು ತೆರಳಿದವರು ಅಂಜನಾದ್ರಿ ಬೆಟ್ಟದ ಬಳಿ ಜನ ಹೋದಾಗ ಚೀರಾಡುವ ಶಬ್ದ ಕೇಳಿಸಿದ್ದು , ಸಮೀಪಕ್ಕೆ ಹೋದಾಗ ಸುಟ್ಟ ಗಾಯಗಳಿಂದ ಓರ್ವ ಬಾಲಕಿ ನರಳಾಡುತ್ತ ರೋಧಿಸುತ್ತಿರುವ ಮತ್ತು ಮತ್ತೊಬ್ಬ ಬಾಲಕಿಯ ಸುಟ್ಟು ಕರಕಲಾದ ಶವ ಕಂಡು ಬಂದಿದೆ . ಈ ದೃಶ್ಯ ಕಂಡ ಬೆಚ್ಚಿಬಿದ್ದ ಸ್ಥಳೀಯರು ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು , ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತಾಯಿಯನ್ನು ವಶಕ್ಕೆ ಪಡೆದು ನರಳಾಡುತ್ತಿದ್ದ ಬಾಲಕಿಯನ್ನು ಪಿಎಸ್‌ಐ ಮಂಜುನಾಥ್ ಬೆಟ್ಟದಿಂದ ಎತ್ತಿಕೊಂಡೇ ಓಡಿ ಬಂದು ಆಸ್ಪತ್ರೆಗೆ ದಾಖಲಿಸಿದ ದೃಶ್ಯ ಹೃದಯ ಕಲುಕುವಂತಿತ್ತು .


ಮಕ್ಕಳಿಗೆ ಬೆಂಕಿ ಹಚ್ಚಿದ ತಾಯಿಯ ಹೆಸರು ಜ್ಯೋತಿ , ಈಕೆ ಆಂಧ್ರ ಪ್ರದೇಶದ ಪಲಮನೇನು ಬಳಿಯ ಬುಸಾನಿ ಕುರುಪಲ್ಲಿ ನಿವಾಸಿಯಾಗಿದ್ದು ,ಈಕೆ ಆಂಧ್ರದ ತಿರುಮೇಶ್ ಎಂಬಾತನನ್ನು ಮದುವೆಯಾಗಿದ್ದರು . ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು , ಕೌಟುಂಬಿಕ ಕಲಹದಿಂದ ಮನನೊಂದ ಜ್ಯೋತಿ ತನ್ನಿಬ್ಬರು ಮಕ್ಕಳೊಂದಿಗೆ ಮುಳಬಾಗಿಲಿಗೆ ಮಂಗಳವಾರ ಆಗಮಿಸಿದ್ದು , ಆತ್ಮಹತ್ಯೆಗೆ ನಿರ್ಧರಿಸಿ ಪೆಟ್ರೋಲ್ ತೆಗೆದುಕೊಂಡು ಹೋಗಿದ್ದಾಳೆ . ಮೊದಲು ಮಕ್ಕಳನ್ನು ಕೊಂದು ನಂತರ ತಾನು ಸಾಯಲು ನಿರ್ಧರಿಸಿದ್ದು , ಇಬ್ಬರು ಹೆಣ್ಣು ಮಕ್ಕಳಿಗೆ ಬೆಂಕಿ ಹಚ್ಚಿದ್ದಾಳೆ ಎನ್ನಲಾಗಿದೆ . ಮಕ್ಕಳ ಚೀರಾಟ ನೋಡಿ ಕಣ್ಣೀರು ಸುರಿಸುತ್ತಾ ಪಕ್ಕದಲ್ಲೇ ಕುಳಿತಿದ್ದಾಳೆ . ಘಟನೆ ರಾತ್ರಿ ನಡೆದಿದ್ದರಿಂದ ಸಾರ್ವಜನಿಕರಿಗೆ ವಿಷಯ ಗೊತ್ತಾಗಿಲ್ಲ , ಮುಳಬಾಗಿಲು ಪೊಲೀಸರು ಪ್ರಕರಣ ದಾಖಲಿಸಿದ್ದು , ತಾಯಿ ಜ್ಯೋತಿಯನ್ನು ಬಂಧಿಸಿದ್ದಾರೆ .

ಇತ್ತೀಚಿನ ಸುದ್ದಿ

ಜಾಹೀರಾತು