ಇತ್ತೀಚಿನ ಸುದ್ದಿ
ಮೂಡಿಗೆರೆಯ ನಿಡುವಳೆ ಗ್ರಾಮ: ಇಲ್ಲಿ ‘ಇಲ್ಲವೇ’ ಎಲ್ಲ!: ರಸ್ತೆ ದುರಸ್ತಿ ಆಗ್ರಹಿಸಿ ಬಾಳೆಗಿಡ ನೆಟ್ಟ ಗ್ರಾಮಸ್ಥರು!!
27/07/2022, 10:13

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲ್ಲೂಕಿನ ನಿಡುವಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರೆಕುಡಿಗೆ ಮೆಕ್ಕಿಮನೆ ಭಾಗದಲ್ಲಿ ವಾಸವಿರುವ ಮಧ್ಯಮ ವರ್ಗದ ಜನರು ತಮಗೆ ಸರ್ಕಾರದ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಅದರಲ್ಲೂ ಮುಖ್ಯವಾಗಿ ತಿರುಗಾಡಲು ರಸ್ತೆಯೇ ಸರಿ ಇಲ್ಲ. ಶಾಲೆ ಮಕ್ಕಳನ್ನು ಕಳಿಸಲು ತೊಂದರೆಯಾಗುತ್ತಿದೆ.
ಗ್ರಾಮಕ್ಕೆ ಕಾಂಕ್ರೇಟ್ ರಸ್ತೆ ಇರಲಿ, ಸ್ವಲ್ಪ ಜಲ್ಲಿಯನ್ನಾದರು ಹಾಕಿ ರಸ್ತೆ ದುರಸ್ತಿ ಮಾಡಬೇಕೆಂದು ಆಗ್ರಹಿಸಿ ರಸ್ತೆಯಲ್ಲಿ ಬಾಳೆ ಗಿಡವನ್ನು ನೆಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯರಾದ ಅಣ್ಣೇಗೌಡ ನಿತನ್ ಯಶ್ವಂತ ರಮೇಶ್ ಸುಂದರ ಮತ್ತಿತರರು ಇದ್ದರು.