ಇತ್ತೀಚಿನ ಸುದ್ದಿ
ಮೂಡಿಗೆರೆ: ವಿದ್ಯುತ್ ತಂತಿ ತಗುಲಿ ರಾಷ್ಟ್ರಪಕ್ಷಿ ನವಿಲು ಸಾವು; ಅರಣ್ಯ ಇಲಾಖೆಯಿಂದ ಅಂತ್ಯ ಸಂಸ್ಕಾರ
05/01/2025, 22:03
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಕೆಳಗೂರು ಬಳಿ
ವಿದ್ಯುತ್ ತಂತಿ ತಗುಲಿ ರಾಷ್ಟ್ರಪಕ್ಷಿ ನವಿಲು ಸಾವನ್ನಪ್ಪಿದ ಘಟನೆ ನಡೆದಿದೆ.
ಮರದಿಂದ ಹಾರುವಾಗ ಜೋತು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ನವಿಲು ಪ್ರಾಣ ಕಳೆದುಕೊಂಡಿದೆ. ನವಿಲಿನ ಮೃತದೇಹವನ್ನ ಅರಣ್ಯ ಇಲಾಖೆಗೆ ಸ್ಥಳೀಯರು ಒಪ್ಪಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಅಂತ್ಯ ಸಂಸ್ಕಾರ ನಡೆಸಿದ್ದಾರೆ.
ಸಾರ್ವಜನಿಕರ ಎದುರು ನವಿಲಿನ ಅಂತ್ಯ ಸಂಸ್ಕಾರ ನಡೆದಿದೆ.