ಇತ್ತೀಚಿನ ಸುದ್ದಿ
ಮೂಡಿಗೆರೆ ಮೀಸಲು ಕ್ಷೇತ್ರ: ಬ್ಯಾನರ್ ಕಸರತ್ತು ಶುರು; ಹಾಲಿ ಶಾಸಕರು ಬಿಜೆಪಿಯವರೇ ಆದರೂ ಟಿಕೆಟ್ ಗೆ ಐವರು ಆಕಾಂಕ್ಷಿಗಳು!!
10/01/2023, 13:21

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.ಕಾಂ
ಮೂಡಿಗೆರೆ ವಿಧಾನಸಭೆ ಮೀಸಲು ಕ್ಷೇತ್ರದಲ್ಲಿ ಆಕ್ಷಾಂಕಿಗಳ ಪೈಪೋಟಿ ಬಲು ಜೋರಾಗಿ ಆರಂಭವಾಗಿದೆ. ಕ್ಷೇತ್ರದುದ್ಧಕ್ಕೂ ಬ್ಯಾನರ್ , ಕಟೌಟ್ ಹಾಕಿ ಆಕ್ಷಾಂಕಿಗಳಿಂದ ಮತದಾರರನ್ನು ತಮ್ಮತ್ತ ಸೆಳೆಯುವ ಕಸರತ್ತು ಶುರುವಾಗಿದೆ.
ಮೂಡಿಗೆರೆ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಆಕ್ಷಾಂಕಿಗಳು ಜನರಿಗೆ ಶುಭಾಶಯ ಕೋರಿಯುವ ನೆಪದಲ್ಲಿ ಬ್ಯಾನರ್ ಹಾಕತೊಡಗಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್, ಕಟೌಟ್ ಗಳು ರಾರಾಜಿಸುತ್ತಿದೆ. ಬ್ಯಾನರ್, ಕಟೌಟ್ ಹಾಕಲು ಮೂರೂ ಪ್ರಮುಖ ರಾಜಕೀಯ ಪಕ್ಷಗಳ ನಡುವೆ ಪೈಪೋಟಿ ನಡೆದಿದೆ.
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಲ್ಲೂ ಆಕಾಂಕ್ಷಿಗಳ ಪೈಪೋಟಿ ಶುರುವಾಗಿದೆ.
ಬಿಜೆಪಿಯಲ್ಲಿ ಹಾಲಿ ಶಾಸಕರಿದ್ದರೂ ಐವರು ಆಕ್ಷಾಂಕಿಗಳು ಬಿಜೆಪಿ ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ನಿವೃತ್ತ ಹೊಂದಿರುವ ಶ್ರೀರಂಗಯ್ಯ ಕಾಂಗ್ರೆಸ್ ಪಕ್ಷದಿಂದ ಆಕ್ಷಾಂಕಿಯಾಗಿದ್ದಾರೆ.