ಇತ್ತೀಚಿನ ಸುದ್ದಿ
ಮೂಡಿಗೆರೆ: ಕುಡಿತದ ಮತ್ತಿನಲ್ಲಿದ್ದ ಪತಿಯಿಂದ ಪತ್ನಿಯ ಕೊಲೆ; ಬೆಳಗಾದ ಬಳಿಕವೇ ಹತ್ಯೆ ಬೆಳಕಿಗೆ, ಆರೋಪಿಯ ಬಂಧನ
14/10/2023, 23:12
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕುಡಿದ ಮತ್ತಿನಲ್ಲಿದ್ದ ಪತಿ ತನ್ನ ಪತ್ನಿಯನ್ನು ಕೊಡಲಿಯಿಂದ ಹೊಡೆದು, ಮನೆಯಿಂದ ಹೊರಗೆ ತಳ್ಳಿ ಕೊಲೆ ಮಾಡಿದ ಘಟನೆ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಪದ್ಮಾಕ್ಷಿ (40) ಎಂದು ಗುರುತಿಸಲಾಗಿದೆ.
ಕುಡಿಯದ ವಿಚಾರಕ್ಕೆ ಗಂಡ-ಹೆಂಡ್ತಿ ಮಧ್ಯೆ ಯಾವಾಗಲೂ ಜಗಳವಾಗುತ್ತಿತ್ತು. ಈ ಬಾರಿ ಜಗಳ ವಿಕೋಪಕ್ಕೆ ಹೋಗಿ ಪತಿ
ಕೊಡಲಿಯಿಂದ ಹೊಡೆದು ಮನೆಯಿಂದ ಹೊರ ತಳ್ಳಿ ಪತ್ನಿ ಯ ಹತ್ಯೆಗೈದಿದ್ದಾನೆ.
ಪತ್ನಿಯನ್ನು ಹೊಡೆದು ಹೊರಹಾಕಿ ಪತಿ ಮನೆಯೊಳಗೆ ಹಾಯಾಗಿ
ಮಲಗಿದ್ದ. ಬೆಳಗಾದ ನಂತರ ಪತ್ನಿ ಸಾವನ್ನಪ್ಪಿರುವ ವಿಷಯ ಬೆಳಕಿಗೆ ಬಂದಿದೆ.ಮೃತಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಕೊಲೆ ನಡೆಯುವಾಗ ಮನೆಯಲ್ಲಿ ಯಾರೂ ಇರಲಿಲ್ಲ. ಗೋಣಿಬೀಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಪತಿ ವಶಕ್ಕೆ ಪಡೆದಿದ್ದಾರೆ.