ಇತ್ತೀಚಿನ ಸುದ್ದಿ
ಮೂಡಿಗೆರೆ: ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಸ್ವಯಂ ಪ್ರೇರಿತ ಬಂದ್, ವಾರದ ಸಂತೆ ರದ್ದು
01/07/2022, 13:03
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ರಾಜಸ್ಥಾನದ ಟೈಲರ್ ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಮೂಡಿಗೆರೆ ಪಟ್ಟಣದಲ್ಲಿ ಇಂದು ಸ್ವಯಂ ಪ್ರೇರಿತ ಬಂದ್ ಆಚರಿಸಲಾಯಿತು.
ಮೂಡಿಗೆರೆ ಪಟ್ಟಣದಲ್ಲಿ ಎಲ್ಲಾ ಹೋಟೆಲ್, ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತರಾಗಿ ಬೆಳೆಗ್ಗೆ 6 ರಿಂದಾ ಸಂಜೆ 6 ಗಂಟೆವರೆಗೆ ಬಂದ್ ಮಾಡಲು ಬೆಂಬಲ ನೀಡಿವೆ.
ಶುಕ್ರವಾರದ ಸಂತೆ ಕೂಡ ರದ್ದಾಗಿದೆ. ಆಸ್ಪತ್ರೆ, ಬ್ಯಾಂಕ್ , ಇನ್ನಿತರ ಸರಕಾರಿ ಕಚೇರಿಗಳು ಎಂದಿನಂತೆ ನಡೆಯುತ್ತಿದೆ. ಸರಕಾರಿ ಬಸ್ಸುಗಳು, ವಾಹನಗಳು ಚಲಿಸುತ್ತಿವೆ. ಹಳ್ಳಿಗರಿಗೆ ಬಂದ್ ಮಾಹಿತಿ ಸಿಗದ ಕಾರಣ ಸಂತೆ, ಮತ್ತು ಅಂಗಡಿಗಳು ಮುಚ್ಚಿದ ಕಾರಣ ನಿರಾಸೆಯಿಂದ ವಾಪಾಸ್ ತೆರಳಿದರು.