ಇತ್ತೀಚಿನ ಸುದ್ದಿ
ಮೂಡುಬಿದ್ರೆಯ ಮೌಂಟ್ ರೋಸರಿ ಆಸ್ಪತ್ರೆಗೆ ಕೇಂದ್ರದ ಪ್ರತಿಷ್ಠಿತ ಎನ್ಎಬಿಎಚ್ ಮಾನ್ಯತೆ: ಸರಳ ಸಂತೋಷ ಕೂಟ
21/11/2022, 21:28

ಮೂಡುಬಿದರೆ(reporter Karnataka.com): ಜಿಲ್ಲೆಯ ಮೂಡುಬಿದ್ರೆಯ ಮೌಂಟ್ ರೋಸರಿ ಆಸ್ಪತ್ರೆ, ಕೇಂದ್ರ ಕೊಡಮಾಡುವ ಪ್ರತಿಷ್ಠಿತ ಎನ್ಎಬಿಎಚ್ ಮಾನ್ಯತೆಗೆ ಆಯ್ಕೆಯಾಗಿದೆ.
ಕಳೆದ ಹಲವಾರು ವರ್ಷಗಳಿಂದ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮೌಂಟ್ ರೋಸರಿ ಆಸ್ಪತ್ರೆಯು ಈಗ ಸಂಪೂರ್ಣ ನವೀಕರಣಗೊಂಡು, ನುರಿತ ವೈದ್ಯರು, ದಾದಿಯರು, ಕಚೇರಿ ಸಿಬ್ಬಂದಿಯನ್ನು ಒಳಗೊಂಡು ಹಾಗೂ ಸಂಪೂರ್ಣ ಸುಸಜ್ಜಿತ ಮತ್ತು ಆಧುನಿಕ ಚಿಕಿತ್ಸೆ ಸಂಬಂಧಿಸಿದ ಯಂತ್ರೋಪಕರಣ ಮತ್ತು ಪರಿಕರಗಳನ್ನು ಅಲ್ಲದೆ ನುರಿತ ಕ್ಷಮತೆಯುಳ್ಳ ಸಿಬ್ಬಂದಿಗಳು, ಮೇಲ್ವಿಚಾರಕರು, ಆಸ್ಪತ್ರೆ ಸ್ವಚ್ಛತೆ, ಅನಾರೋಗ್ಯ ಪೀಡಿತರ ಜೊತೆ ಸೌಹಾರ್ದತೆ, ಸುಸಜ್ಜಿತ ವಾಹನ ಪಾರ್ಕಿಂಗ್, ದಿನದ 24 ಗಂಟೆಗಳು ಆಂಬುಲೆನ್ಸ್ ಸೇವೆ, ರೋಗಿಗೆ ಅಥವಾ ರೋಗಕ್ಕೆ ಸಂಬಂಧಿಸಿ ಅಗತ್ಯವಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ನಾಡಿನ ಖ್ಯಾತ ಹಾಗೂ ನುರಿತ ವೈದ್ಯರುಗಳ ವ್ಯವಸ್ಥೆ, ಆರೋಗ್ಯ ವಿಮೆ, ಅತಿ ಕಡಿಮೆ ದರದಲ್ಲಿ ರೋಗಿಗೆ ಉತ್ತಮ ಚಿಕಿತ್ಸೆ, ಹಾಗೂ ಇತರ ಮೂಲಭೂತ ಸೌಕರ್ಯಗಳನ್ನ ಗಣನೆಗೆ ತೆಗೆದುಕೊಂಡು, ಆಯ್ಕೆ ತಂಡ ಮೌಂಟ್ ರೋಸರಿ ಆಸ್ಪತ್ರೆಯನ್ನ ಪ್ರತಿಷ್ಠಿತ ಎನ್ ಎ ಬಿ ಎಚ್ ಮಾನ್ಯತೆಗೆ ಆಯ್ಕೆ ಮಾಡಿದೆ ಅಲ್ಲದೆ ಮೂಡಬಿದಿರೆಯ ಎನ್ ಎ ಬಿ ಎಚ್ ಮಾನ್ಯತೆಗೆ ಪಾತ್ರವಾದ ಮೊಟ್ಟಮೊದಲ ಆಸ್ಪತ್ರೆ ಎಂಬ ಹಿರಿಮೆಗೆ ಪಾತ್ರವಾಗಿದೆ ಈ ಸಂಬಂಧ ಆಸ್ಪತ್ರೆ ಆವರಣದಲ್ಲಿ ಸರಳ ಸಂತೋಷ ಕೂಟ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಆಸ್ಪತ್ರೆಗಳ ಮುಖ್ಯಸ್ಥರುಗಳು, ಖ್ಯಾತ ವೈದ್ಯರುಗಳು, ಸಮಾಜದ ಗಣ್ಯರು, ಔಷಧ ಮಾರಾಟ ಮಳಿಗೆ ಮುಖ್ಯಸ್ಥರುಗಳು, ಹಾಗೂ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಮತ್ತು ಹೊರರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಹಲವು ನಾಗರಿಕರು, ಹಲವು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳು, ಬ್ಯಾಂಕಿಂಗ್ ಕ್ಷೇತ್ರದ ಮುಖ್ಯಸ್ಥರುಗಳು, ಕ್ರೈಸ್ತ ಭಗನಿಯರು, ವಂದನೀಯ ಕ್ರೈಸ್ತ ಧರ್ಮಗುರುಗಳು, ಆಡಳಿತ ಮಂಡಳಿ ಮುಖ್ಯಸ್ಥರುಗಳು ಹಾಗೂ ಇನ್ನಿತರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಅಭಿವೃದ್ಧಿಗೆ ಕಾರಣಕರ್ತರಾದ ಗುರುತಿಸಿ ಸನ್ಮಾನಿಸಲಾಯಿತು, ಹಾಗೂ ಬಂದ ಎಲ್ಲಾ ಅತಿಥಿಗಳಿಗೆ ಆಸ್ಪತ್ರೆಯ ಆಡಳಿತ ಮಂಡಳಿ ಗೌರವ ಸ್ಮರಿಣಿಕೆ ನೀಡಿತು.
ಆಸ್ಪತ್ರೆಯ ನಿರ್ದೇಶಕರು ಕಾರ್ಯಕ್ರಮಕ್ಕೆ ಬಂದ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು, ಹಾಗೂ ಪ್ರಾಸ್ತಾವಿಕ ಮಾತುಗಳಾಡಿದರು ಆಸ್ಪತ್ರೆಯ ಸಿಬ್ಬಂದಿಗಳು ಕಾರ್ಯಕ್ರಮ ನಿರೂಪಣೆ ಮತ್ತು ವಂದನಾರ್ಪಣೆಗೈದರು.