6:18 AM Wednesday27 - November 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ

ಇತ್ತೀಚಿನ ಸುದ್ದಿ

ಮೂಡುಬಿದರೆ ಕ್ಷೇತ್ರ: ಕಾಂಗ್ರೆಸ್- ಬಿಜೆಪಿ- ಎಎಪಿ ನಡುವೆ ತ್ರಿಕೋನ ಸ್ಪರ್ಧೆ ಸಾಧ್ಯತೆ; ವಿಜಯನಾಥ ವಿಠಲ ಶೆಟ್ಟಿ ಮೊದಲ ಬಾರಿ ಕಣಕ್ಕೆ

01/04/2023, 09:23

ಮೂಡುಬಿದರೆ(reporterkarnataka.com): ರಾಜ್ಯ ವಿಧಾನಸಭೆ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಎರಡು ಪ್ರಬಲ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಹೊಸ ರಾಜಕೀಯ ಶಕ್ತಿ ಹೊರಹೊಮ್ಮಿದೆ. ಜನತಾ ದಳ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ಆಮ್ ಆದ್ಮಿ ಪಾರ್ಟಿ ಜೈನಕಾಶಿ ಮೂಡುಬಿದರೆ ಕ್ಷೇತ್ರ ಮಾತ್ರವಲ್ಲದೆ, ಜಿಲ್ಲೆಯಲ್ಲಿ ಚಿಗುರಲಾರಂಭಿದೆ.

ಬಿಜೆಪಿ ಹಾಗೂ ಕಾಂಗ್ರೆಸ್ ಈ ಎರಡೂ ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಳ್ಳುವ ನಾಗರಿಕರಿಗೆ ತೃತೀಯ ರಾಜಕೀಯ ಪಕ್ಷದ ಅಗತ್ಯವಿದೆ. ಅಂತಹ ವ್ಯಕ್ತಿಗಳು ಇದುವರೆಗೆ ಜನತಾ ದಳವನ್ನು ಬೆಂಬಲಿಸುತ್ತಿದ್ದರು. ಆದರೆ ಕರಾವಳಿಯಲ್ಲಿ ಜನತಾ ದಳವನ್ನು ಸಮರ್ಥವಾಗಿ ಕಟ್ಟಲು ದೇವೇ ಗೌಡರಾಗಲಿ, ಕುಮಾರಸ್ವಾಮಿ ಅವರಾಗಲಿ ವಿಫಲರಾದ ಹಿನ್ನೆಲೆಯಲ್ಲಿ ಆ ಬಾಗಿಲು ಅರವಿಂದ ಕೇಜ್ರಿವಾಲ್ ಅವರ ಎಎಪಿಗೆ ತೆರೆದುಕೊಂಡಿದೆ. ಅದಕ್ಕೆ ತಕ್ಕಂತೆ ದ.ಕ.ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಸಾಮಾಜಿಕ ಧುರೀಣರು, ಹೋರಾಟಗಾರರು ಅಖಾಡಕ್ಕಿಳಿದಿದ್ದಾರೆ. ಅಂಥವರಲ್ಲಿ ಮೊದಲ ಹೆಸರು ವಿಜಯನಾಥ ವಿಠಲ ಶೆಟ್ಟಿ.
ಸಾಮಾಜಿಕ, ಧಾರ್ಮಿಕ ಮುಂದಾಳು ಆದ ವಿಜಯನಾಥ ವಿಠಲ ಶೆಟ್ಟಿ ಅವರು ಮೂಡುಬಿದರೆ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕಿಳಿದಿದ್ದಾರೆ.
ಮೂಡುಬಿದರೆ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್- ಬಿಜೆಪಿ- ಎಎಪಿ ನಡುವೆ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. ಎಎಪಿಯಿಂದ ವಿಜಯನಾಥ ವಿಠಲ ಶೆಟ್ಟಿ ಅವರು ಸ್ಪರ್ಧಿಸಿದರೆ, ಕಾಂಗ್ರೆಸ್ ನಿಂದ ಮಿಥುನ್ ರೈ ಕಣಕ್ಕಿಳಿದ್ದಾರೆ. ಹಾಗೆ ಬಿಜೆಪಿಯಿಂದ ಹಾಲಿ ಶಾಸಕ ಉಮಾನಾಥ ಕೋಟ್ಯಾನ್ ಅಥವಾ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಅವರು ಸ್ಪರ್ಧಿಸುವ ಸಾಧ್ಯತೆಯಿದೆ.
ಮೂಡುಬಿದರೆ ಕ್ಷೇತ್ರದಲ್ಲಿ ನಾವು ಕಾಂಗ್ರೆಸ್, ಬಿಜೆಪಿ ಮತ್ತು ಜನತಾ ಪರಿವಾರದ ಆಡಳಿತ ನೋಡಿದ್ದೇವೆ. ಈ ಹಿನ್ನೆಲೆಯಲ್ಲಿ ಜನತಾ ದಳದ ಸಾಲಿಗೆ ಬಂದು ನಿಂತಿರುವ ತೃತೀಯ ಶಕ್ತಿಯಾದ ಎಎಪಿಯತ್ತ ಜನರು ಒಲವು ತೋರಿಸಿದರೆ ಅತಿಶಯೋಕ್ತಿಯಾಗಲಾರದು ಎಂದು ಮೂಡುಬಿದರೆಯ ಪ್ರಜ್ಞಾವಂತ ನಾಗರಿಕರು ಹೇಳುತ್ತಾರೆ. ಎಎಪಿ ಈಗಾಗಲೇ ಭ್ರಷ್ಟಾಚಾರ ರಹಿತ ಸ್ವಚ್ಛ, ಪಾರದರ್ಶಕ ಆಡಳಿತದ ಬಗ್ಗೆ ಭರವಸೆ ನೀಡಿ ದಿಲ್ಲಿ ಹಾಗೂ ಪಂಜಾಬಿನಲ್ಲಿ ಅಧಿಕಾರಕ್ಕೆ ಬಂದಿದೆ. ದಿಲ್ಲಿ ಎಎಪಿ ಸರಕಾರವು ಸರಕಾರಿ ಶಾಲೆ ಹಾಗೂ ಸರಕಾರಿ ಆಸ್ಪತ್ರೆಗಳ ಸುಧಾರಣೆಯ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ ಅರವಿಂದ ಕೇಜ್ರಿವಾಲ್ ಅವರ ಮಂತ್ರವಾಗಿದೆ. ಇದೇ ಧ್ಯೇಯವಾಕ್ಯವನ್ನು ಮುಂದಿಟ್ಟುಕೊಂಡು ಮೂಡುಬಿದರೆ ಕ್ಷೇತ್ರದಿಂದ ಎಎಪಿ ಅಭ್ಯರ್ಥಿಯಾಗಿ ವಿಜಯನಾಥ ವಿಠಲ ಶೆಟ್ಟಿ ಅವರು ಕಣಕ್ಕಿಳಿದಿದ್ದಾರೆ.
ಮೂಡುಬಿದರೆ ಕ್ಷೇತ್ರದ ಇತಿಹಾಸವನ್ನು ಅವಲೋಕಿಸಿದಾಗ ಇಲ್ಲಿ ಕೆಲವು ದಶಕಗಳ ಕಾಲ ಕಾಂಗ್ರೆಸ್ ಮತ್ತು ಜನತಾ ಪರಿವಾರದ ನಡುವಿನ ಸ್ಪರ್ಧೆಯನ್ನು ಗಮನಿಸಬಹುದು. ಅದು ಬಿಟ್ಟರೆ ಆರಂಭದಲ್ಲಿ ಇಲ್ಲಿ ಸ್ವತಂತ್ರ ಅಭ್ಯರ್ಥಿಗಳು ಜಯ ಸಾಧಿಸಿದನ್ನು ಕಾಣಬಹುದು. ಕಳೆದ ಚುನಾವಣೆಯಲ್ಲಷ್ಟೇ ಬಿಜೆಪಿಗೆ ಇಲ್ಲಿ ಗೆಲ್ಲಲು ಸಾಧ್ಯವಾಯಿತು.
1962ರ ಮೊದಲ ಚುನಾವಣೆಯಲ್ಲಿ ಗೋಪಾಲ ಎಸ್. ಅವರು ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. 1967ರಲ್ಲಿ ಕೆ. ಆರ್. ಶೆಟ್ಟಿ(ಸ್ವತಂತ್ರ), 1972 ಮತ್ತು 1978ರಲ್ಲಿ ದಾಮೋದರ ಮುಲ್ಕಿ(ಕಾಂಗ್ರೆಸ್), 1983 ಮತ್ತು 1985ರಲ್ಲಿ ಕೆ. ಅಮರನಾಥ ಶೆಟ್ಟಿ(ಜನತಾ ಪಕ್ಷ), 1989ರಲ್ಲಿ ಕೆ. ಸೋಮಪ್ಪ ಸುವರ್ಣ(ಕಾಂಗ್ರೆಸ್), 1994ರಲ್ಲಿ ಕೆ. ಅಮರನಾಥ ಶೆಟ್ಟಿ(ಜನತಾ ದಳ), 1999, 2004, 2008 ಮತ್ತು 2013ರಲ್ಲಿ ಅಭಯಚಂದ್ರ ಜೈನ್ (ಕಾಂಗ್ರೆಸ್) ಆಯ್ಕೆಯಾಗಿದ್ದರು.
ಜನತಾ ಪರಿವಾರದ ಕೆ. ಅಮರನಾಥ ಶೆಟ್ಟಿ ಹಾಗೂ ಕಾಂಗ್ರೆಸ್ ನ ಕೆ. ಅಭಯಚಂದ್ರ ಜೈನ್ ಅವರು ಅನುಕ್ರಮವಾಗಿ ಮೂರು ಮತ್ತು ನಾಲ್ಕು ಅವಧಿಗೆ ಮೂಡುಬಿದ್ರೆ ಕ್ಷೇತ್ರದಿಂದ ಗೆದ್ದು ಬಂದಿದ್ದರು. ಇಡೀ ದ‌.ಕ. ಜಿಲ್ಲೆಯಲ್ಲಿ ಜನತಾ ಪರಿವಾರಕ್ಕೆ(ಆಗಿನ ಜನತಾ ಪಕ್ಷ ಮತ್ತು ಈಗಿನ ಜನತಾ ದಳ)
ಮೂಡುಬಿದ್ರೆ ಮಾತ್ರ ಭದ್ರ ನೆಲೆಯಾಗಿತ್ತು. ಅಮರನಾಥ ಶೆಟ್ಟಿ ಅವರ ವೈಯಕ್ತಿಕ ವರ್ಚಸ್ಸು ಕೂಡ ಇದಕ್ಕೆ ಕಾರಣವಾಗಿತ್ತು. ಪ್ರಸ್ತುತ ಇಲ್ಲಿ ಪ್ರಬಲ ಪಕ್ಷಗಳೆಂದರೆ ಕಳೆದ ಚುನಾವಣೆಯಲ್ಲಿ ಚಿಗುರಿದ ಬಿಜೆಪಿ ಹಾಗೂ ಹಳೆ ತಲೆಮಾರಿನ ಕಾಂಗ್ರೆಸ್. ಆದರೆ ಈ ಎರಡೂ ಪಕ್ಷಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಆಮ್ ಆದ್ಮಿ ಪಾರ್ಟಿಯ ವಿಜಯನಾಥ ವಿಠಲ ಶೆಟ್ಟಿ ಅವರು ಅಖಾಡಕ್ಕಿಳಿದಿದ್ದಾರೆ. ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ವಿಜಯನಾಥ ವಿಠಲ ಶೆಟ್ಟಿ ಅವರು ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದ್ದಾರೆ ಎನ್ನುವ ವಿಶ್ವಾಸವನ್ನು ಕ್ಷೇತ್ರದ ಜನತೆ ರಿಪೋರ್ಟರ್ ಕರ್ನಾಟಕದ ಮುಂದೆ ವ್ಯಕ್ತಪಡಿಸಿದ್ದಾರೆ.
ತೀರಾ ಸರಳ ನಡೆ ನುಡಿಯ ವಿಜಯನಾಥ ಶೆಟ್ಟಿ ಅವರು ಎಎಪಿಗೆ ಹೇಳಿ ಮಾಡಿಸಿದ ಅಭ್ಯರ್ಥಿ ಎಂದು ಕ್ಷೇತ್ರದ ಜನತೆ ಖುಷಿ ಹಂಚಿಕೊಳ್ಳುತ್ತಿದ್ದಾರೆ. ಸದಾ ಪಂಚೆ ಅಂಗಿಯಲ್ಲಿರುವ ವಿಜಯನಾಥ ಅವರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದ ಧುರೀಣ. ತುಳುನಾಡಿನ ಶಕ್ತಿ ಸ್ವರೂಪವಾದ ದೈವಗಳ ಮೇಲೆ ಅಪಾರ ಭಕ್ತಿ ಇಟ್ಟುಕೊಂಡವರು. ಸಮಾಜ ಸೇವೆಯ ಜನತೆ ಒಳ್ಳೆಯ ಸಂಘಟಕನೂ ಹೌದು. ಎಂಟರ್ ಟೈನ್ ಮೆಂಟ್ ಕ್ಷೇತ್ರದಲ್ಲಿಯೂ ಅವರಿಗೆ ಅಪಾರ ಒಲವಿದೆ. ತುಳು ಕಾಮಿಡಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಾರೆ. ಇವೆಲ್ಲ ಕಾರಣದಿಂದ ವಿಜಯನಾಥ ಶೆಟ್ಟಿ ಅವರು ಮೂಡುಬಿದ್ರೆ ಮಾತ್ರವಲ್ಲ ತುಳುನಾಡಿನ ಉದ್ದಗಲಕ್ಕೂ ಚಿರಪರಿಚಿತರು.
ಇದೀಗ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸಮಾನ ದೂರದಲ್ಲಿಟ್ಟು ಜನತಾ ಪರಿವಾರದ ಅಮರನಾಥ ಶೆಟ್ಟಿ ಅವರನ್ನು ಮೂರು ಬಾರಿ ವಿಧಾನಸಭೆಗೆ ಕಳುಹಿಸಿದ ಮಹಾಶಕ್ತಿ ಈ ಬಾರಿ ಎಎಪಿ ಅಭ್ಯರ್ಥಿ ವಿಜಯನಾಥ ವಿಠಲ ಶೆಟ್ಟಿ ಅವರನ್ನು ನಿಸ್ಸಂದೇಹವಾಗಿ ಬೆಂಬಲಿಸಲಿದೆ ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕುತ್ತಾರೆ. ಅಮರನಾಥ ಶೆಟ್ಟಿ ಅವರ ಜಾಗವನ್ನು ತುಂಬ ಬಲ್ಲ ನಾಯಕನ ಅಗತ್ಯ ಮೂಡುಬಿದ್ರೆ ಜನತೆಗಿದೆ. ಇದೀಗ ಎಎಪಿ ಮೂಲಕ ವಿಜಯನಾಥ ವಿಠಲ ಶೆಟ್ಟಿ ಅವರು ಮೂಡುಬಿದ್ರೆಗೆ ಎಂಟ್ರಿ ಕೊಟ್ಟಿದ್ದಾರೆ. ಪ್ರಬಲ ಸ್ಪರ್ಧೆ ಏರ್ಪಡಲಿದೆ. ಯಾವುದಕ್ಕೂ ಕೆಲವು ದಿನಗಳ ಕಾಲ ಕಾದು ನೋಡಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು