ಇತ್ತೀಚಿನ ಸುದ್ದಿ
ಮೂಡಿಗೆರೆ: ಸ್ಕೂಟರ್ ನಲ್ಲಿ ಸಾಗಿಸುತ್ತಿದ್ದ 130 ಗ್ರಾಂ ಒಣ ಗಾಂಜಾ ವಶ; ಇಬ್ಬರ ಬಂಧನ
31/10/2021, 21:34

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ಪಟ್ಟಣ ಪಂಚಾಯಿತಿಯ ವಾಟರ್ ಪಂಪ್ ಹೌಸ್ ಬಳಿ ಸ್ಕೂಟರೊಂದರಲ್ಲಿ ಸಾಗಿಸುತ್ತಿದ್ದ 130 ಗ್ರಾಂ ಒಣ ಗಾಂಜವನ್ನು ವಶಪಡಿಸಿಕೊಳ್ಳಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಬಿಳಗುಳ ಗ್ರಾಮದ ಸಾಗರ್ ( 20) ಹಾಗೂ ಮೂಡಿಗೆರೆಯ ಕಸಬಾ ಹೋಬಳಿಯ ಬಿಳಗುಳ ಗ್ರಾಮದ ರಂಜನ್ ಡಿಸೋಜ
(19) ಎಂಬವರು ಅಕ್ರಮವಾಗಿ ಒಣ ಗಾಂಜವನ್ನು ಸಾಗಾಣಿಕೆ ಮಾಡುತ್ತಿದ್ದಾಗ ವಶಪಡಿಸಿಕೊಳ್ಳಲಾಗಿದೆ.
ಹೋಂಡಾ ಡಿಯೋ ಸ್ಕೂಟರ್ ಸೀಟಿನ ಕೆಳಭಾಗದಲ್ಲಿ ಪ್ಲಾಸ್ಟಿಕ್ ಕವರಿ ನೊಳಗೆ ಅಕ್ರಮವಾಗಿ ಬೀಜ ಮತ್ತು ತೆನೆ ಗಳನ್ನೊಳಗೊಂಡ ಸುಮಾರು 130 ಗ್ರಾಂ ನಷ್ಟು ಒಣ ಗಾಂಜಾವನ್ನು ಸಾಗಿಸಲಾಗುತ್ತಿತ್ತು.
ಆರೋಪಿಗಳ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆ 1985 ಕಾಲಂ 8( ಸಿ) 20 (ಬಿ)20(ii) ಮತ್ತು 25ರ ರೀತಿಯಲ್ಲಿ ಅಬಕಾರಿ ನಿರೀಕ್ಷಕರು ಲೋಕೇಶ್ ಅವರು ಮೊಕದ್ದಮೆ ದಾಖಲಿಸಿರುತ್ತಾರೆ.
ಚಿಕ್ಕಮಗಳೂರು ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಎಂ. ಸಿ. ಪ್ರದೀಪ್-(ಅಬಕಾರಿ ಉಪ ಅಧೀಕ್ಷಕರು), ಲೋಕೇಶ್
ಸಿ. (ಅಬಕಾರಿ ನಿರೀಕ್ಷಕರು), ಹೆಚ್. ಪಿ. ಸಂತೋಷ್-(ಅಬಕಾರಿ ಮುಖ್ಯಪೇದೆ), ಶಂಕರ್ ಗುರವ (ಅಬಕಾರಿ ಪೇದೆ) ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.