ಇತ್ತೀಚಿನ ಸುದ್ದಿ
Kodagu |ಪೊನ್ನಂಪೇಟೆ: ವ್ಯಾಘ್ರನ ಸೆರೆಗೆ 75 ಮಂದಿ ಅರಣ್ಯ ಸಿಬ್ಬಂದಿಗಳ ಕೂಂಬಿಂಗ್ ಕಾರ್ಯಾಚರಣೆ ಆರಂಭ
19/07/2025, 13:16

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಜಾನುವಾರ ಹಂತಕ ಹುಲಿಯ ಸೆರೆಗೆ ಬೆಳ್ಳೂರು ಪ್ರಾಥಮಿಕ ಶಾಲಾ ಆವರಣದಿಂದ ಕೂಂಬಿಂಗ್ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.
ಮತ್ತಿಗೂಡು ಹಾಗೂ ಬೆಳ್ಳ ಆನೆ ಶಿಬಿರದ ಮಹೀಂದ್ರ ಹಾಗೂ ಭೀಮ ಆನೆ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ. ಒಟ್ಟು 75 ಅರಣ್ಯ ಸಿಬ್ಬಂದಿಗಳ ತಂಡ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಇತ್ತೀಚಿಗೆ ಹುದಿಕೇರಿ ಹರಿಹರ, ಶೆಟ್ಟಿಗೇರಿ ಬೆಳ್ಳೂರು ಭಾಗದಲ್ಲಿ ಹುಲಿಯ ಉಪಟಳ ಹೆಚ್ಚಾಗಿದ್ದು ಇದರ ಸೆರೆಗಾಗಿ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ, ಡಿಸಿಎಫ್ ಜಗನ್ನಾಥ್, ಎಸಿಎಫ್ ಗೋಪಾಲ್, ಪೊನ್ನಂಪೇಟೆ ಅರಣ್ಯ ವಲಯ ಅಧಿಕಾರಿ ಬಿ.ಎಂ. ಶಂಕರ್, ರಂಜನ್, ಅರವಳಿಕೆ ತಜ್ಞರಾದ ರಮೇಶ್, ಮಾದಪ್ಪ, ಮಾವುತರಾದ ಗುಂಡಣ್ಣ ಮಲ್ಲಿಕಾರ್ಜುನ. ಚೆಕ್ಕೇರ ತಿಮ್ಮಯ್ಯ, ಉಪ ಅರಣ್ಯ ಪಾಲಕರಾದ ದಿವಾಕರ್,ನಾಗೇಶ್, ಶ್ರೀಧರ್ ಮತಿತರು ಹಾಗೂ ಇಟಿಎಫ್ ಎಸ್ ಟಿ ಎಫ್, ಆರ್ ಆರ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.