ಇತ್ತೀಚಿನ ಸುದ್ದಿ
ಮೂಡಿಗೆರೆ: ಜಪಾವತಿ ನದಿಯ ಅಬ್ಬರಕ್ಕೆ ಕೊಚ್ಚಿ ಹೋದ ಕಾಫಿ ಹಾಗೂ ಅಡಿಕೆ ತೋಟ
13/09/2022, 20:33
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದ್ದು, ಜಪಾವತಿ ನದಿಯ ಅಬ್ಬರಕ್ಕೆ ಕಾಫಿ ಹಾಗೂ ಅಡಿಕೆ ತೋಟ ಕೊಚ್ಚಿ ಹೋಗಿದೆ.
ಸುಮಾರು ಒಂದು ಎಕರೆ ಕಾಫಿ-ಅಡಿಕೆ ತೋಟ ನಾಶವಾಗಿದೆ.
ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಜಪಾವತಿ ನದಿಯಲ್ಲಿ ಅಡಿಕೆ ಮರಗಳು ತೇಲುತ್ತಿದೆ.
ಹೆಗ್ಗರವಳ್ಳಿ ಗ್ರಾಮದ ಸುಪ್ರಿಮ್ ಎಂಬುವರಿಗೆ ಸೇರಿದ ತೋಟ ಇದಾಗಿದೆ. ತೋಟದ ಸ್ಥಿತಿ ಕಂಡು ಸುಪ್ರಿಮ್ ಕುಟುಂಬ ಕಂಗಾಲಾಗಿದೆ. ನೊಂದ ಕುಟುಂಬ ಸೂಕ್ತ ಪರಿಹಾರಕ್ಕೆ ಆಗ್ರಹಿಸಿದೆ.