ಇತ್ತೀಚಿನ ಸುದ್ದಿ
ಮುಚ್ಚೂರುನಲ್ಲಿ ದೀಪಾವಳಿ ಸಂಭ್ರಮ: ಮಕ್ಕಳಿಂದ ಆಕರ್ಷಕ ಗೂಡುದೀಪ ಪ್ರದರ್ಶನ
02/11/2024, 12:05
ಸುರತ್ಕಲ್(reporterkarnataka.com): ಶ್ರೀ ರಾಮ ಬಾಲ ಗೋಕುಲ ಕೇಂದ್ರ ಮುಚ್ಚೂರು ಕಾನ ಹಾಗೂ ಶ್ರೀ ರಾಮ ಯುವಕ ಸಂಘ ಮುಚ್ಚೂರು ಕಾನ ಆಯೋಜನೆಯಲ್ಲಿ ನಡೆದ ದೀಪಾವಳಿ ಸಂಭ್ರಮದಲ್ಲಿ ಶಾಸಕ ಡಾ. ವೈ ಭರತ್ ಶೆಟ್ಟಿ ಭಾಗವಹಿಸಿದರು .
ಗೂಡುದೀಪ ಪ್ರದರ್ಶನದಲ್ಲಿ ವಿವಿಧ ರೀತಿಯ ಆಕರ್ಷಕ ಗೂಡುದೀಪವನ್ನು ಶ್ರೀ ರಾಮ ಬಾಲ ಗೋಕುಲ ಕೇಂದ್ರದ ಮಕ್ಕಳು ಪ್ರದರ್ಶನಕ್ಕೆ ಇಟ್ಟಿದ್ದರು. ಸ್ಥಳೀಯ ಭಾಗದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ಗೌಡ ಅವರ ನೇತೃತ್ವದಲ್ಲಿ ಬಾಲ ಗೋಕುಲ ಕೇಂದ್ರದಲ್ಲಿ ಸುಶಿಕ್ಷಣ ಪಡೆಯುತ್ತಿರುವ ಹಿಂದೂ ಸಮಾಜದ ಮಕ್ಕಳ ಹಾಗೂ ಕಾರ್ಯಕರ್ತರ ಪ್ರಯತ್ನ ಸಮಾಜಕ್ಕೆ ಮಾದರಿಯೇ ಸರಿ ಎಂದು ಶಾಸಕರು ಸಂತಸ ವ್ಯಕ್ತ ಪಡಿಸಿದರು.