8:52 PM Tuesday2 - September 2025
ಬ್ರೇಕಿಂಗ್ ನ್ಯೂಸ್
ಕೊಡಗಿನಾದ್ಯoತ ಕೈಲೂ ಮುಹೂರ್ತ ಹಬ್ಬ ಸಂಭ್ರಮ: ಮಾಂಸ ಖರೀದಿ ಜೋರು ಮಗು ಹೊಟ್ಟೆಯಲ್ಲಿರುವಾಗಲೇ ವಾಕ್ ಮತ್ತು ಶ್ರವಣ ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರುವುದು ನಿಜಕ್ಕೂ… Kaali river | ಸೂಪಾ ಅಣೆಕಟ್ಟು ಪ್ರದೇಶದಲ್ಲಿ ಭಾರೀ ಮಳೆ: ಪ್ರವಾಹದ ಕುರಿತು… ಸಿದ್ದರಾಮನಹುಂಡಿಯಲ್ಲಿ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಉದ್ಘಾಟನೆ: ಸಿಎಂ ಚಾಲನೆ ಧರ್ಮಸ್ಥಳ ಯಾತ್ರೆಯಿಂದ ಬಿಜೆಪಿಗೆ ರಾಜಕೀಯ ಲಾಭ ಸಿಗಲಾರದು: ಸಿಎಂ ಸಿದ್ದರಾಮಯ್ಯ ಗಣೇಶ ವಿಸರ್ಜನೆ: ಕುಶಾಲನಗರದಲ್ಲಿ ನಿಯಮ ಉಲ್ಲಂಘಿಸಿದ 5 ಡಿಜೆ ವಾಹನ ಪೊಲೀಸ್ ವಶಕ್ಕೆ ದಂತ ವೈದ್ಯಕೀಯ ಸೇವೆ ಹಳ್ಳಿ ಹಳ್ಳಿಗಳಿಗೂ ತಲುಪಲಿ: ಡೆಂಟಿಸ್ಟ್‌ ಶೃಂಗಸಭೆ-2025 ಸಮಾವೇಶದಲ್ಲಿ ಸಚಿವ… ಗೂಡ್ಸ್ ವಾಹನದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ಮಾಲು ಸಹಿತ ಆರೋಪಿ ಬಂಧನ Kodagu | ‘ಹುಡುಗಿ, ಆಂಟಿ ಸರ್ವಿಸ್…’ ಎಂದು ಜಾಲತಾಣದಲ್ಲಿ ಹರಿಯ ಬಿಟ್ಟ: ಮಡಿಕೇರಿ… Kerala | ವಯನಾಡು ತಮರಶೆರಿ ಘಾಟ್ ಬಳಿ ಭೂಕುಸಿತ: ಬದಲಿ ಮಾರ್ಗಕ್ಕೆ ಸಲಹೆ

ಇತ್ತೀಚಿನ ಸುದ್ದಿ

ಮುಂಬೈ: ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮದಲ್ಲಿ ಪ್ರವೀಣ್ ಕುಮಾರ್  ಕೊಡಿಯಾಲ್ ಬೈಲ್ ಗೆ ಸನ್ಮಾನ

19/07/2022, 18:29

ಮುಂಬಯಿ(reporterkarnataka.com): ಕನ್ನಡ ನಾಡು- ನುಡಿ- ಸಂಸ್ಕೃತಿಯನ್ನು ಬಿಂಬಿಸುವ ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮ- 2022 ಕುರ್ಲಾದ ಬಂಟರ ಭವನದಲ್ಲಿ ನಡೆದಿದ್ದು,ಸಮಾರಂಭದಲ್ಲಿ ಕರ್ನಾಟಕ ಜನಪದ ಅಕಾಡೆಮಿಯ ದ.ಕ. ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಸೇರಿದಂತೆ 9 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.

ಮಂಗಳೂರು ವಿವಿ ತುಳು ಅಧ್ಯಯನ ಪೀಠದ ಸದಸ್ಯರೂ, ಮುಂಚೋಣಿಯ ದಾನಿಗಳು ಆದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಅವರನ್ನು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ ಸನ್ಮಾನಿಸಿದರು. ಪಮ್ಮಿ ಕೊಡಿಯಾಲ್ ಬೈಲ್ ಎಂದೇ ಖ್ಯಾತರಾಗಿರುವ ಪ್ರವೀಣ್ ಕುಮಾರ್ ಅವರು ಅಖಿಲ ಭಾರತ ಓಬಿಸಿ ಮಹಾಸಭಾದ ದ.ಕ. ಜಿಲ್ಲಾಧ್ಯಕ್ಷರೂ ಕೂಡ ಹೌದು. ರಂಗಾಸಕ್ತರು ಆಗಿರುವ ಅವರು ಸಿನಿಮಾ ಕ್ಷೇತ್ರದಲ್ಲಿಯೂ ಅಪಾರ ಒಲವು ಹೊಂದಿದ್ದಾರೆ.


ಈ ಸಂದರ್ಭದಲ್ಲಿ ಮುಂಬಯಿ ಸಾಹಿತ್ಯ ಕ್ಷೇತ್ರದ ಬಹುದೊಡ್ಡ ಹೆಸರು, ಕವಯತ್ರಿ, ಲೇಖಕಿ ಡಾ. ಸುನೀತಾ ಶೆಟ್ಟಿ, ವೈದ್ಯಕೀಯ ಕ್ಷೇತ್ರದ ಡಾ. ಸುರೇಶ್ ರಾವ್, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಸಮಾಜ ಸೇವಕ ವಿಶು ಕುಮಾರ್ ಶೆಟ್ಟಿ ಅಂಬಲಪಾಡಿ, ಪ್ರಗತಿಪರ ಕೃಷಿಕ ಪ್ರಭಾಕರ ಕಲ್ಲೂರಾಯ ಹಾಗೂ ವಾಸ್ತು ತಜ್ಞ ಮಾರ್ತಾಂಡ ಪಂಡಿತ್ ನವೀನ್ ಚಂದ್ರ ಸನಿಲ್ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ರಾಷ್ಟಭಕ್ತಿ, ನಾಡಪ್ರೀತಿ ಮೊಳಗಿತು. ಕನ್ನಡದ ಕಂಪು ಎಲ್ಲೆಡೆ ಹರಡಿತು.

ಇತ್ತೀಚಿನ ಸುದ್ದಿ

ಜಾಹೀರಾತು