ಇತ್ತೀಚಿನ ಸುದ್ದಿ
ಮಂಗಳೂರು ಬಂದರಿಗೆ ಆಗಮಿಸಿದ ಎಂ.ಎಸ್. ನಾರ್ವೇಜಿಯನ್ ಐಷಾರಾಮಿ ಹಡಗು: 1,876 ಪ್ರಯಾಣಿಕರು 861 ಸಿಬ್ಬಂದಿಗಳು!
05/04/2025, 22:49

ಮಂಗಳೂರು(reporterkarnataka.com):ನವ ಮಂಗಳೂರು ಬಂದರು ಪ್ರಾಧಿಕಾರವು ಈ ಋತುವಿನ 5ನೇ ವಿಹಾರ ನೌಕೆಯನ್ನು ಸ್ವಾಗತಿಸಿತು.
ಎಂ.ಎಸ್. ನಾರ್ವೇಜಿಯನ್ ಕ್ರೂಸ್ ಶನಿವಾರ ನವ ಮಂಗಳೂರು ಬಂದರಿಗೆ ಪ್ರವೇಶಿಸಿತು. ಇದು ಅದರ
ಮೊದಲ ಯಾನವಾಗಿತ್ತು.
ಬಹಾಮಾಸ್ ಧ್ವಜದಡಿಯಲ್ಲಿ ಐಷಾರಾಮಿ ಹಡಗು 1,876 ಪ್ರಯಾಣಿಕರು ಮತ್ತು 861 ಸಿಬ್ಬಂದಿಗಳ ಹೊತ್ತು ಆಗಮಿಸಿತು. 258.6 ಮೀಟರ್ ಉದ್ದದ ಕ್ರೂಸ್ ಹಡಗು ಗಾಲೆ, ಕೊಚ್ಚಿನ್, ಮಂಗಳೂರು, ಗೋವಾ, ಮುಂಬೈ ಮತ್ತು ಅಬುಧಾಬಿ ಬಂದರುಗಳನ್ನು ಒಳಗೊಂಡಿರುವ ಅಂತಾರಾಷ್ಟ್ರೀಯ ಪ್ರಯಾಣ ನಡೆಸಲಿದೆ. ಕ್ರೂಸ್ ಹಡಗು ಕೊಚ್ಚಿನ್ ಬಂದರಿನಿಂದ ಬಂತು.