ಇತ್ತೀಚಿನ ಸುದ್ದಿ
ಆಸ್ತಿ ಪಾಲು ಮಾಡಿ ಕೊಡಲು ಒಪ್ಪದ ತಾಯಿ: ಮಲಗಿದ್ದಾಗ ಹೆತ್ತಬ್ಬೆಗೆ ಕಲ್ಲು ಎತ್ತಿ ಹಾಕಿ ಕೊಂದ ಪಾಪಿ ಮಗ
30/01/2026, 17:13
ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಆಸ್ತಿ ಪಾಲು ಮಾಡದ ಹೆತ್ತ ತಾಯಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಜಕ್ಕೇರುಮಡಗು ತಾಂಡಾದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಚಂದವ್ವ (55) ಎಂದು ಗುರುತಿಸಲಾಗಿದೆ.
ಕೊಲೆ ಮಾಡಿದವನು ಚಂದವ್ವ ಅವರ ಪುತ್ರ ಕುಮಾರ ಎಂದು ಪೊಲೀಸರು ತಿಳಿಸಿದ್ದಾರೆ.
ಪಿತ್ರಾರ್ಜಿತವಾಗಿ ದೊರೆತ ಮೂರು ಎಕರೆ ಭೂಮಿಯನ್ನು ಪಾಲು ಮಾಡುವಂತೆ ಕುಮಾರ ತಾಯಿಯ ಮೇಲೆ ನಿರಂತರವಾಗಿ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಆಸ್ತಿ ಪಾಲು ಮಾಡಿ, ನನ್ನ ಪಾಲು ನನಗೆ ನೀಡಬೇಕು ಎಂದು ಕುಮಾರ ಒತ್ತಡ ಹೇರಿದ್ದಾನೆ. ಆದರೆ, ನಾನು ಬದುಕಿರುವವರೆಗೆ ಆಸ್ತಿ ಪಾಲು ಮಾಡುವುದಿಲ್ಲ ಎಂದು ತಾಯಿ ಚಂದವ್ವ ಹಠ ಹಿಡಿದಿದ್ದಾಳೆ.
ಇದೇ ಕಾರಣದಿಂದ ಕೋಪಗೊಂಡ ಕುಮಾರ ಮದ್ಯ ಸೇವಿಸಿ, ನಶೆಯಲ್ಲಿದ್ದ ಕುಮಾರ, ಮಲಗಿದ್ದ ತನ್ನ ತಾಯಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.













