ಇತ್ತೀಚಿನ ಸುದ್ದಿ
ಮೊಸರು ಕುಡಿಕೆ: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಾಳೆ ಮದ್ಯ ನಿಷೇಧ
18/08/2022, 21:59

ಮಂಗಳೂರು(reporterkarnataka.com): ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಪ್ರಯುಕ್ತ ಆಗಸ್ಟ್ 19ರಂದು ಮದ್ಯ ಮಾರಾಟಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
19ರಂದು ಬೆಳಗ್ಗೆ 6 ಗಂಟೆಯಿಂದ 20ರಂದು ಬೆಳಗ್ಗೆ 10ರ ತನಕ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವೈನ್ ಶಾಪ್ ಮತ್ತು ಬಾರ್ ಗಳನ್ನು ಮತ್ತು ಎಲ್ಲ ವಿಧದ ಅಮಲು ಪದಾರ್ಥಗಳ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.
ಆದೇಶ ಹೊರಡಿಸಿದ್ದಾರೆ.