12:23 PM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಮಕ್ಕಳ ಪ್ರೇಮ ವಿವಾಹಕ್ಕೆ ಶೇ. 76ರಷ್ಟು ಮಂದಿ ತಾಯಂದಿರ ಒಲವು: ಟ್ರೂಲಿಮ್ಯಾಡಿ ಸಮೀಕ್ಷೆಯಿಂದ ಬಹಿರಂಗ

08/10/2021, 19:40

ಬೆಂಗಳೂರು(reporterkarnataka.com): ಬೆಂಗಳೂರಿನ ಶೇ. 76ರಷ್ಟು ಮಂದಿ ತಾಯಂದಿರು ತಮ್ಮ ಮಕ್ಕಳ ಪ್ರೇಮ ವಿವಾಹದ ಪರವಾಗಿದ್ದಾರೆ. ಟ್ರೂಲಿಮ್ಯಾಡಿ ಇತ್ತೀಚಿಗೆ ದೇಶದಾದ್ಯಂತದ ನಡೆಸಿದ ಸಮೀಕ್ಷೆ ಇದನ್ನು ರುಜುವಾತು ಮಾಡಿದೆ.

ಟ್ರೂಲಿಮ್ಯಾಡಿ ಇತ್ತೀಚಿಗೆ ದೇಶದಾದ್ಯಂತದ ನಡೆಸಿದ ಸಮೀಕ್ಷೆಯ ಪ್ರಕಾರ ಯುವಕ -ಯುವತಿಯರ ತಾಯಂದಿರು ಈಗ ಬದಲಾವಣೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಬದಲಾವಣೆಯ ಗಾಳಿಯನ್ನು ಸ್ವೀಕರಿಸುತ್ತಿದ್ದಾರೆ. 

ಡೇಟಿಂಗ್ ಆ್ಯಪ್‍ಗಳ ಮೂಲಕ ತಮ್ಮ ಮಕ್ಕಳು ಅವರ ಶಾಶ್ವತ ಸಂಗಾತಿಯನ್ನು ಕಂಡುಕೊಳ್ಳುವುದನ್ನು ಸ್ವೀಕರಿಸುತ್ತಾರೆ.
ಸಮೀಕ್ಷೆಯಿಂದ ಕಂಡು ಬಂದ ಕೆಲ ಪ್ರಮುಖ ಅಂಶಗಳು ಹೀಗಿವೆ:

* ತಂದೆಗಿಂತ ಶೇಕಡ 45 ಕ್ಕಿಂತ ಹೆಚ್ಚಿನ ತಾಯಂದಿರು ತಮ್ಮ ಮಕ್ಕಳ ವಿವಾಹದ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ

* 1ನೇ ಮತ್ತು 2ನೇ ಸ್ತರದ ನಗರಗಳ ಸುಮಾರು ಶೇಕಡ 70ರಷ್ಟು ಮಹಿಳೆಯರು ಮತ್ತು ಶೇಕಡ 80 ರಷ್ಟು ಪುರುಷರು ತಮ್ಮ ತಾಯಂದಿರು ಪ್ರೇಮ ವಿವಾಹಕ್ಕೆ ಒಲವು ತೋರಿದ್ದಾರೆ. ಸಹಸ್ರಮಾನದ ಮಹಿಳೆಯರು ಜೀವನದಲ್ಲಿ ನೆಲೆ ನಿಲ್ಲುವ ದೃಷ್ಟಿಯಿಂದ ಶಿಕ್ಷಣ ಮತ್ತು ವೃತ್ತಿಯ ಮೇಲೆ ಗಮನಹರಿಸಲು ತಮ್ಮ ವಿವಾಹವನ್ನು ಮುಂದೂಡುತ್ತಾರೆ.

*ಶೇಕಡ 60ರಷ್ಟು ತಾಯಂದಿರು ವೃತ್ತಿ ಮತ್ತು ಶಿಕ್ಷಣಕ್ಕಿಂತ ತಮ್ಮ ಮಗಳ ಮದುವೆಗೆ ಆದ್ಯತೆ ನೀಡುತ್ತಾರೆ ಮತ್ತು ಶೇಕಡ 46 ರಷ್ಟು ಮಹಿಳೆಯರು ತಮ್ಮ ಮಕ್ಕಳ ವೃತ್ತಿ ಮತ್ತು ಶಿಕ್ಷಣಕ್ಕಿಂತ ಪುತ್ರರ ವಿವಾಹಕ್ಕೆ ಆದ್ಯತೆ ನೀಡುತ್ತಾರೆ. ಶೇಕಡ 54ರಷ್ಟು ತಾಯಂದಿರು ತಮ್ಮ ಮಗನ ವೃತ್ತಿ ಮತ್ತು ಶಿಕ್ಷಣಕ್ಕಾಗಿ ಹೆಚ್ಚು ಚಿಂತೆ ಮಾಡುತ್ತಾರೆ.

ಭಾರತದಲ್ಲಿ ಡೇಟಿಂಗ್ ಬಗ್ಗೆ ಇರುವ ಕಳಂಕ ಮತ್ತು ಆತಂಕಗಳನ್ನು ಅರ್ಥಮಾಡಿಕೊಳ್ಳಲು ಹೊರಟೆವು, ಆದರೆ ಯುವ ಪೀಳಿಗೆ ಮಾತ್ರವಲ್ಲದೆ ಅವರ ಪೋಷಕರ ಸಂಪೂರ್ಣ ರೂಪಾಂತರಗೊಂಡ ಮನಸ್ಥಿತಿಯ ಮೇಲೆ ಮುಗ್ಗರಿಸಿದೆ. ನಮ್ಮ ಸಮಾಜದಲ್ಲಿ ಮಹಿಳೆಯರ ಹಕ್ಕುಗಳನ್ನು ಪ್ರತಿಪಾದಿಸಲು, ಲಿಂಗ ತಾರತಮ್ಯವನ್ನು ಕಡಿಮೆ ಮಾಡಲು ಮತ್ತು ಲಿಂಗದ ರೂಢಿಯ ವಿರುದ್ಧ ಜಾಗೃತಿ ಮೂಡಿಸಲು ನಿರಂತರ ಪ್ರಯತ್ನಗಳನ್ನು ನಡೆಸಿದ ಫಲವಾಗಿ ಈ ವಿಕಸನವು ಬಹಳಷ್ಟು ಬಂದಿದೆ ಎಂದು ನಾನು ನಂಬುತ್ತೇನೆ. ಅಲ್ಲದೆ, ಚಲನಚಿತ್ರಗಳು ಮತ್ತು ಸಮಾಜ ಮಾಧ್ಯಮಗಳ ಮೂಲಕ ಹೆಚ್ಚು ಮುಕ್ತಗೊಳಿಸಿದ ವಿಷಯದ ಸೇವನೆಯು ತಾಯಂದಿರು ತಮ್ಮ ಮಕ್ಕಳಿಗೆ ಜೀವನ ಸಂಗಾತಿಯನ್ನು ಹುಡುಕುವಲ್ಲಿ ಬೆಂಬಲ ನೀಡುವಾಗ ಹೊಂದಾಣಿಕೆ ಮತ್ತು ನಂಬಿಕೆಗೆ ಆದ್ಯತೆ ನೀಡಲು ಸಹಾಯ ಮಾಡಿದೆ. 

ಇತ್ತೀಚಿನ ಸುದ್ದಿ

ಜಾಹೀರಾತು