11:15 AM Wednesday17 - December 2025
ಬ್ರೇಕಿಂಗ್ ನ್ಯೂಸ್
Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ…

ಇತ್ತೀಚಿನ ಸುದ್ದಿ

ಮೂಡಿಗೆರೆ: ಯುಗಾದಿಯಂದೇ ಸೂತಕದ ಛಾಯೆ; ವರದಕ್ಷಿಣೆಗೆ ನವವಿವಾಹಿತೆ ಬಲಿ.!

02/04/2022, 23:32

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಆಕೆ ಹತ್ತಾರು ಕನಸುಗಳನ್ನ ಹೊತ್ತು ಕೇವಲ ವರ್ಷದ ಹಿಂದೆಯಷ್ಟೇ ಗಂಡನ ಮನೆಯ ಹೊಸಲನ್ನ ತುಳಿದಿದ್ದಳು. ಆದರೆ ಸುಂದರ ಬದುಕಿನ ಕನಸು ಕೇವಲ ಮೂರೇ ಮೂರು ತಿಂಗಳಲ್ಲಿ ನುಚ್ಚು ನೂರಾಯ್ತು. ನಾನು ಮದ್ವೆಯಾಗಿದ್ದು ಗಂಡನಲ್ಲ, ಬದಲಾಗಿ ದುಡ್ಡಿನ ಪಿಶಾಚಿ ಅನ್ನೋದು ಆಕೆಗೆ ಅರಿವಾಗತೊಡಗಿತ್ತು. ಯಾಕಂದ್ರೆ ಸಾಕಷ್ಟು ಹಣ, ಚಿನ್ನಾಭರಣ ಕೊಟ್ಟು ಮದ್ವೆಯಾದ್ರೂ ಆಗಾಗ ಹಣ ತರುವಂತೆ ಗಂಡನ ಮನೆಯವರು ಕೊಡ್ತಿದ್ದ ಟಾರ್ಚರ್ ಕಡಿಮೆಯಾಗಿರಲಿಲ್ಲ. ಇನ್ಮೇಲೆ ಮಾಡೋದ್ ಅಂತಾ ಕಿರುಕುಳಕ್ಕೆ ಬೇಸತ್ತು ಮದುವೆಯ ಬಳಿಕವೂ ಲಕ್ಷ ಲಕ್ಷ ಹಣ ಕೊಟ್ಟಿದ್ದೂ ಆಯ್ತು, ಇದೀಗ ಪಾಪಿಗಳು ಆಕೆಯ ಜೀವವನ್ನೇ ಬಲಿಪಡೆದಿದ್ದಾರೆ. ಸಂತೋಷ-ನೆಮ್ಮದಿ ತರಬೇಕಿದ್ದ ಯುಗಾದಿ ಆಕೆಯ ಪೋಷಕರ ಬಾಳಲ್ಲಿ ಸೂತಕ ತಂದೊಡ್ಡಿದೆ.

ಮಗಳ ಮೃತದೇಹವನ್ನ ನೋಡಿ ಕಣ್ಣೀರು ಹಾಕುತ್ತಿರೋ ಪೋಷಕರು..! ಯುಗಾದಿ ದಿನದಂದೇ ಸೂತಕ ಆವರಿಸಿ ಬಿಟ್ತಲ್ಲಾ ಅನ್ನೋ ನೋವಿನಲ್ಲಿ ಸಂಬಂಧಿಕರು, ಕುಟುಂಬಸ್ಥರು.! ಬೆಂಕಿಯಲ್ಲಿ ಧಗಧಗ ದಹಿಸ್ತಿರೋ ಜೀವವನ್ನ ನೋಡಿ ಕಣ್ಣೀರಿಡ್ತಿರೋ ಜನರು..! ಎಲ್ಲರ ಬಾಯಲ್ಲಿ ಒಂದೇ ಮಾತು, ಛೇ.. ಹೀಗಾಗಬಾರದಿತ್ತು.. ಹೌದು, ಎಲ್ಲರೂ ಕಣ್ಣೀರಿಡ್ತಿರೋದು, ಮಾತನಾಡಿಕೊಳ್ತಿರೋದು ಈ ಗೊಂಬೆ ಬಗ್ಗೆನೇ.. ಅಂದಾಗೆ, ಅಂದಕ್ಕೂ ಸೆಡ್ಡು ಹೊಡೆಯೋ ಹಾಗೇ ಇದ್ದ ಈ ಸುಂದರಿಯ ಹೆಸ್ರು ಗಾನವಿ. ಆದ್ರೆ ಸುಂದರಿಯ ಬಾಳು ಒಬ್ಬ ಗಿಡುಗನ ಕೈಗೆ ಸಿಕ್ಕಿ ಅರಳುವ ಮುನ್ನವೇ ಬಾಡಿ ಹೋಗಿದೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ತಾಲೂಕಿನ ಬನ್ನೂರು ಗ್ರಾಮದ ಗಾನವಿಯನ್ನ ಒಂದು ವರ್ಷದ ಹಿಂದೆಯಷ್ಟೇ ಮೂಡಿಗೆರೆ ತಾಲೂಕಿನ ಕಾರಬೈಲ್ ಗ್ರಾಮದ ನಂದಿಪ್ ಎಂಬಾತನಿಗೆ ಮದುವೆ ಮಾಡಿ ಕೊಡಲಾಗಿತ್ತು. ಎಂಎ ಓದಿಕೊಂಡಿದ್ದ ಗಾನವಿ, ಬೆಂಗಳೂರಿನಲ್ಲಿ ಕೆಲಸ ಕೂಡ ಮಾಡ್ತಿದ್ಳು. ಆದರೆ ಮದುವೆ ನಿಶ್ಚಯ ಆದ್ಮೇಲೆ ಕೆಲಸಕ್ಕೆ ಗುಡ್ ಬೈ ಹೇಳಿ, ಮುಂದೆ ಒಳ್ಳೆ ಜೀವನ ಸಿಗುತ್ತೆ ಅನ್ನೋ ಕನಸನ್ನ ಕಟ್ಟಿಕೊಂಡಿದ್ಳು. ಒಳ್ಳೆ ಹುಡುಗ ಅಂತಾ ಗಾನವಿ ಪೋಷಕರು ಅದ್ದೂರಿಯಾಗಿಯೇ ಮದುವೆ ಮಾಡಿಕೊಟ್ರು. ಆದ್ರೆ ಬರೀ ಮೂರೇ ತಿಂಗಳಲ್ಲಿ ನಂದೀಪನ ಅಸಲಿ ಮುಖ ಬಯಲಾಗ ತೊಡಗಿತು. ಪ್ರತಿನಿತ್ಯ ಹಣಕ್ಕಾಗಿ ಪೀಡಿಸುತ್ತಿದ್ದ ಪತಿರಾಯ, ಮದುವೆ ಸಮಯದಲ್ಲಿ ಕೊಟ್ಟಿರೋ ವರದಕ್ಷಿಣೆ ಸಾಕಾಗಿಲ್ಲ ಅಂತಾ ಪೀಡಿಸುತ್ತಿದ್ನಂತೆ. ಮಗಳನ್ನ ಕೊಟ್ಟಾಗಿದೆ, ಇನ್ ಏನ್ ಮಾಡೋದು ಅಂತ್ಹೇಳಿ ಕಳೆದ ನಾಲ್ಕು ತಿಂಗಳ ಹಿಂದೆ 2 ಲಕ್ಷ ಹಣವನ್ನ ನಂದೀದಪನಿಗೆ ಗಾನವಿ ಪೋಷಕರು ನೀಡಿದ್ದಾರೆ. ಆದ್ರೂ ಸುಮ್ಮನಾಗದ ಧನಪಿಶಾಚಿಗಳು, ಹಣಕ್ಕಾಗಿ ಬರೀ ಪೀಡಿಸೋದು ಮಾತ್ರವಲ್ಲ, ದೈಹಿಕವಾಗಿ ಗಾನವಿ ಮೇಲೆ ಹಲ್ಲೆ ಮಾಡುತ್ತಿದ್ದಾರಂತೆ. ಹೀಗಾಗಿ ಗಂಡ, ಆತನ ಮನೆಯವರಿಂದ ಬೇಸತ್ತ ಗಾನವಿ ಕಳೆದ ಮೂರು ತಿಂಗಳ ಮನೆಗೆ ಹೋಗಿ ನಾನ್ ಬಿಲ್ ಕುಲ್ ಗಂಡನ ಮನೆಗೆ ಹೋಗಲ್ಲ, ನನ್ನ ಸಾಯಿಸ್ತಾರೆ ಅಂತಾ ತವರು ಮನೆಗೆ ಹೋಗಿದ್ದಾಳೆ. ಅಲ್ಲಿಗೆ ಹೋದ್ರೂ ಬಿಡದ ಪಾಪಿ ನಂದೀಪ, ಇನ್ಮೇಲೆ ಸರಿಯಾಗಿ ನೋಡ್ಕೋಳ್ತೀನಿ ಅಂತಾ ಕರೆದುಕೊಂಡು ಬಂದಿದ್ನಂತೆ.

ಎಲ್ಲಾ ಸರಿ ಹೋಗುತ್ತೆ ಅಂತಾ ಗಾನವಿ ಪೋಷಕರು ಅಂದುಕೊಳ್ಳುವಾಗಲೇ ನಂದೀಪ್ ಮನೆಯವರೆಲ್ಲರೂ ಸೇರಿ ಮತ್ತೆ ಹಣ ತರುವಂತೆ ಕಿರುಕುಳ ನೀಡಿ, ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಇದನ್ನ ಗಾನವಿ ಮೊಬೈಲ್ನಲ್ಲಿ ಚಿತ್ರೀಕರಿಸಿಟ್ಟುಕೊಂಡಿರೋದು ಗೊತ್ತಾದ ಮೇಲೆ ಆಕೆಯಿಂದ ಮೊಬೈಲ್ ಕಿತ್ತಿಟ್ಟುಕೊಂಡು, ಕಳೆದ ಶನಿವಾರ ಇಲಿ ಪಾಶಣವನ್ನ ಪತಿ ನಂದೀಪ್, ಅತ್ತೆ ಮಾವ ಎಲ್ಲರೂ ಸೇರಿ ಗಾನವಿಗೆ ತಿನ್ನಿಸಿದ್ದಾರೆ. ಕೊನೆಗೆ ಆಕೆ ಸುಸ್ತಾದ ಮೇಲೆ ಆಸ್ಪತ್ರೆಗೆ ಕರೆದುಕೊಂಡು ಬರುವ ನಾಟಕವಾಡಿದ್ದಾರೆ, ಮೂರು ದಿನ ಆದ ಮೇಲೆ ಗಾನವಿ ಮನೆಯವರಿಗೆ ವಿಚಾರ ತಿಳಿಸಿ, ಗಾನವಿಗೆ ಜಾಂಡೀಸ್ ಆಸ್ಪತ್ರೆಗೆ ಅಡ್ಮೀಟ್ ಮಾಡಿದ್ದೇವೆ ಅಂತಾ ಹೇಳಿದ್ದಾರೆ. ಮನೆಯಲ್ಲಿ ನಡೆದ ವಿಚಾರವನ್ನೆಲ್ಲಾ ಗಾನವಿ ಪೋಷಕರಿಗೆ ತಿಳಿಸಿದ್ದಾಳೆ, ಅಷ್ಟರಲ್ಲಿ ಆಸ್ಪತ್ರೆಯಿಂದ ಜೂಟ್ ಹೇಳಿದ ಪತಿ ನಂದೀಪ್ ಹಾಗೂ ಮಾವ ಚಂದ್ರೇಗೌಡನನ್ನ ಮೂಡಿಗೆರೆ ಪೊಲೀಸರು ಬಂಧಿಸಿದ್ದಾರೆ.

ಲೋಕಪ್ಪಗೌಡ, (ಗಾನವಿ ತಂದೆ)

ಗಾನವಿ ಮದುವೆಗೂ ಮುನ್ನ ಹುಡುಗಿಯೊಬ್ಬಳನ್ನ ಲವ್ ಮಾಡಿದ್ದ ನಂದೀಪ, ಆಕೆಯನ್ನ ಕೂಡ ಕೊಲೆ ಮಾಡಲು ಪ್ರಯತ್ನ ಪಟ್ಟಿದ್ದ. ಹಾಗಾಗೀ ಆತನ ಮೇಲೆ ಪೊಲೀಸ್ ಠಾಣೆಯಲ್ಲಿ ಹಾಫ್ ಮರ್ಡ್ ಕೇಸ್ ಕೂಡ ಬುಕ್ಕಾಗಿದೆ. ಆದ್ರೆ ಈ ಎಲ್ಲಾ ವಿಚಾರಗಳು ಗೊತ್ತಿಲ್ಲದೇ ಗಾನವಿ, ನಂದೀಪನನ್ನ ಕೈ ಹಿಡಿದಿದ್ಳು. ಚೆನ್ನಾಗಿ ಓದಿಕೊಂಡಿದ್ರೂ ಕೆಲಸಕ್ಕೂ ಗುಡ್ ಬೈ ಹೇಳಿ, ಸುಂದರ ಭವಿಷ್ಯದ ಕನಸನ್ನ ಕಂಡಿದ್ಳು. ಆದ್ರೆ ಸುಂದರ ಭವಿಷ್ಯದ ಕನಸನ್ನ ಕಂಡ ಸುಂದರಿ, ಗಿಡುಗನ ತೆಕ್ಕೆಗೆ ಸಿಕ್ಕ ಪರಿಣಾಮ ಇದೀಗ ತನ್ನ ಪ್ರಾಣವನ್ನೇ ಬಿಡಬೇಕಾಗಿದೆ. ಸಂತೋಷ-ನೆಮ್ಮದಿಯನ್ನ ತರಬೇಕಾಗಿದ್ದ ಯುಗಾದಿ ಗಾನವಿ ಪೋಷಕರು, ಸಂಬಂಧಿಕರಿಗೆ ಸೂತಕದ ಛಾಯೆ ಆಗಿ ಆವರಿಸಿದ್ದು ಮಾತ್ರ ನಿಜಕ್ಕೂ ದುರಂತ.

ಗಾನವಿ ಸಂಬಂಧಿಕರು

ಇತ್ತೀಚಿನ ಸುದ್ದಿ

ಜಾಹೀರಾತು