ಇತ್ತೀಚಿನ ಸುದ್ದಿ
ಗುರುಪುರ ನದಿಗೆ ಹಾರಿ ಮೂಡುಬಿದಿರೆಯ ಯುವತಿ ಆತ್ಮಹತ್ಯೆ: ಕಾರಣ ಇನ್ನೂ ನಿಗೂಢ
05/01/2026, 21:31
ಮಂಗಳೂರು(reporterkarnataka.com): ಇಲ್ಲಿಗೆ ಸಮೀಪದ ಗುರುಪುರ ನದಿಗೆ ಹಾರಿ ಮೂಡುಬಿದಿರೆಯ ಯುವತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಮೂಡುಬಿದಿರೆ ಗಾಂಧಿನಗರ ನಿವಾಸಿ ಅಲಂಕಾರ್ ಟೆಕ್ಸ್‌ಟೈನ್ಸ್‌ನ ಉದ್ಯೋಗಿ ನವ್ಯಾ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡವಳು.
ನವ್ಯಾಳ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ನವ್ಯಾಳೊಂದಿಗೆ ನಿಡ್ಡೋಡಿ ಮೂಲದ ಮತ್ತೋರ್ವಳು ಯುವತಿ ಕೂಡಾ ಇದ್ದಳೆನ್ನಲಾಗಿದ್ದು, ಈ ಘಟನೆಗೆ ಕಾರಣವೇನೆಂದು ಇನ್ನಷ್ಟೇ ತಿಳಿದು ಬರಬೇಕಿದೆ. ಬಜಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗುರುಪುರದಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರಿಗೆ ಈ ವಿಷಯ ಗೊತ್ತಾಗಿ ಕೂಡಲೇ ತಮ್ಮ ಬೆಂಬಲಿಗರೊಂದಿಗೆ ಶವ ಮೇಲಕ್ಕೆತ್ತಲು ಬೇಕಾದ ವ್ಯವಸ್ಥೆ ಮಾಡಿದ್ದಾರೆ.














