1:17 PM Saturday5 - July 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ

ಇತ್ತೀಚಿನ ಸುದ್ದಿ

ಮೂಡಲಗಿ ಸಮೀಪದ ಹಳ್ಳೂರ ಗ್ರಾಮದ ನೂತನ ವೃತ್ತಕ್ಕೆ ಸಾವಿತ್ರಿಬಾಯಿ ಫುಲೆ ನಾಮಕರಣ: ಪುಷ್ಪನಮನ, ಗೌರವ ಸಲ್ಲಿಕೆ

02/07/2024, 19:35

ಸಂತೋಷ್ ಹನಮಂತ ಹೊಸಟ್ಟಿ ಬೆಳಗಾವಿ

info.reporterkarnataka@gmail.com

ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಹೊಸದಾಗಿ ವೃತ್ತಕ್ಕೆ ಸಾವಿತ್ರಿ ಬಾಯಿ ಫುಲೆ ನಾಮಕರಣ ಮಾಡಲಾಯಿತು.
ಬಡವ ದಿನ ದಲಿತರ ಹಿಂದುಳಿದ ವರ್ಗದ ಜನರಿಗೆ ಶಿಕ್ಷಣವನ್ನು ನೀಡಿ ಅವರ ಬಾಳಿಗೆ ಬೆಳಕು ನೀಡಿ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರು ವೃತ್ತಕ್ಕೆ ಹೆಸರು ಇಟ್ಟಿರುವುದು ಸಮಾಜಕ್ಕೆ ನೀಡಿರುವ ಅವರ ಕೊಡುಗೆ ಅಪಾರವಾದದ್ದು ಎಂದು ಭರತೇಶ ಉಪಾದ್ಯೆ ನುಡಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಂಗಣ್ಣ ಗುಜನಟ್ಟಿ ಮಾತನಾಡಿ, ಸಾವಿತ್ರಿ ಬಾಯಿ ಫುಲೆ ಅವರು ಜಾತಿ ಬೇಧ ಭಾವ ಮಾಡದೆ ಎಲ್ಲರಿಗೂ ಸಮಾಜದಲ್ಲಿ ಮಾದರಿಯಾಗಿದ್ದಾರೆ. ಶಾಲೆಯ ಹತ್ತಿರ ಸಾವಿತ್ರಿ ಬಾಯಿ ಫುಲೆ ವೃತ್ತ ಆದದ್ದು ಹೆಮ್ಮೆಯ ಸಂಗತಿಯಾಗಿದೆ. ಇವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.        ಗ್ರಾಮ ಆಡಳಿತ ಅಧಿಕಾರಿ ಸಂಜು ಅಗ್ನೆಪ್ಪಗೋಳ ಮಾತನಾಡಿ ಸಾವಿತ್ರಿ ಬಾಯಿ ಫುಲೆ ಅವರು ಶಿಕ್ಷಣ ಕಲಿಸಲು ದಾರಿಯಲ್ಲಿ ಹೊರಟಾಗ ಕೆಟ್ಟ ಜನರು ಸಗಣಿ, ಕಲ್ಲು ಎಸೆಯುತ್ತಿದ್ದರು. ಮಾನ ಅಪಮಾನಕ್ಕೆ ಹೆದರದೆ ಮುನ್ನಡೆದು ಶಿಕ್ಷಣ ನೀಡಿ ಶಿಕ್ಷಣದ ಕ್ರಾಂತಿಯನ್ನು ಮಾಡಿದ್ದಾರೆ ಎಂದು ಹೇಳಿದರು.              ಪ್ರಾರಂಭದಲ್ಲಿ ಸಾವಿತ್ರಿ ಬಾಯಿ ಫುಲೆ ಅವರ ವೃತ್ತ ಫಲಕದ ಅನಾವರಣ ಪೂಜಾ ಸಮಾರಂಭವು , ಪುಷ್ಪ ನಮನ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ನಡೆಯಿತು. ಈ ಸಮಯದಲ್ಲಿ  ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲವ್ವ ಹೊಸಟ್ಟಿ, ಮಾಜಿ ಜಿಪಂ ಸದಸ್ಯೆ ವಾಸಂತಿ ತೇರದಾಳ. ಮಾಜಿ ಜಿಪಂ ಸದಸ್ಯ ಭೀಮಶಿ ಮಗದುಮ. ಮಾ, ತಾ ಪಂ ಸದಸ್ಯೆ ಸವಿತಾ ಡಬ್ಬನ್ನವರ. ಸಾವಿತ್ರಿ ಬಾಯಿ ಫುಲೆ ಮಹಿಳಾ ಮಂಡಳ ಅಧ್ಯಕ್ಷೆ ಬಂದವ್ವ ಕಾಗೆ.ಉಪಾಧ್ಯಕ್ಷೆ ಕಸ್ತೂರಿ ನಿಡೋಣಿ.ಮಾ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಕತ್ತಿ, ಅರ್ಚಕ ಪಾವಡೆಪ್ಪ ಪೂಜೆರಿ, ಗ್ರಾಪಂ ಸದಸ್ಯ ಮಾದೇವ ಹೊಸಟ್ಟಿ, ಪಶು ವೈದ್ದಾಧಿಕಾರಿಗಳಾದ ವಿಶ್ವನಾಥ ಹುಕ್ಕೇರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ, ಮುಖಂಡರಾದ ಯಮನಪ್ಪ ನಿಡೋಣಿ, ಸಿದ್ದಪ್ಪ ಕೂಲಿಗೋಡಭೀಮಪ್ಪ ಹೊಸಟ್ಟಿ,ಅಡಿವೆಪ್ಪ ಪಾಲಬಾಂವಿ, ಹನಮಂತ ತೇರದಾಳ, ಶಂಕರ ಬೋಳನ್ನವರ, ಸುರೇಶ ಕತ್ತಿ, ಮುತ್ತಪ್ಪ ಲಿಗಾಡೆ, ಹನಮಂತ ಹಳ್ಳೂರ, ದುಂಡಪ್ಪ ಕುಲಿಗೋಡ, ಸತ್ಯೆಪ್ಪ ಮರಿಚಂಡಿ, ಪ್ರಧಾನ ಗುರುಗಳು‌ ಸರ್ಕಾರಿ ಶಾಲೆಯ ಎಸ್. ಎಚ್. ವಾಸನ,ದುಂಡಪ್ಪ ಕತ್ತಿ, ಶಾನೂರ ಹರಿಜನ,ರಾಮಣ್ಣ ಹೊಸೂರ,ಇಬ್ರಾಹಿಂ ಮುಜಾವರ, ಗೋಪಾಲ ಅಟ್ಟಮಟ್ಟಿ, ರಮೇಶ ಸವದಿ, ಲಕ್ಷ್ಮಣ ಕೌಜಲಗಿ, ಸೈದುಸಾಬ ಮುಜಾವರ,ಕಲ್ಲಪ್ಪ ಹುಬ್ಬಳ್ಳಿ ಸೇರಿದಂತೆ ಗ್ರಾಮದ ಗುರು ಹಿರಿಯರು ವಿದ್ಯಾರ್ಥಿಗಳು, ಶಿಕ್ಷಕ ಶಿಕ್ಷಕಿಯರು ಹಾಗೂ  ಸಾವಿತ್ರಿ ಬಾಯಿ ಫುಲೆ ಮಹಿಳಾ ಮಂಡಳ ಸದಸ್ಯರು ಉಪಸ್ಥಿತರಿದ್ದರು.
 

ಇತ್ತೀಚಿನ ಸುದ್ದಿ

ಜಾಹೀರಾತು