ಇತ್ತೀಚಿನ ಸುದ್ದಿ
ಮೊಗರ್ನಾಡು ದೇವ ಮಾತಾ ಚರ್ಚ್ ನಲ್ಲಿ ಸಂಭ್ರಮದ ಹೊಸ ವರ್ಷದ ಬಲಿಪೂಜೆ
03/01/2025, 15:55
ಬಂಟ್ವಾಳ(reporterkarnataka.com): 250 ವರ್ಷಗಳ ಸಾರ್ಥಕ ಸೇವೆಯನ್ನು ಪೂರ್ತಿಗೊಳಿಸಿ ಸಂಭ್ರಮಾಚರಣೆಯಲ್ಲಿರುವ ಬಂಟ್ವಾಳ ತಾಲೂಕಿನ ಮೊಗರ್ನಾಡು ದೇವ ಮಾತಾ ಚರ್ಚ್ ನಲ್ಲಿ ಹೊಸ ವರ್ಷದ ಬಲಿ ಪೂಜೆ ಸಂಭ್ರಮದಿಂದ ನಡೆಯಿತು.
ಬಲಿಪೂಜೆಯ ನೇತೃತ್ವವನ್ನು ಆಸ್ಟ್ರೇಲಿಯಾದ ಅತಿ ವಂದನೀಯ ಮೊನ್ಸಿಂಜೋರ್ ಆಲ್ಫ್ರೆಡ್ ರಾಯನ್ ಡಿ’ಸೋಜಾ ಅವರು ವಹಿಸಿ ಮೇರಿ ಮಾತೆ ದೇವ ಮಾತೆ ಆಗಿದ್ದರಿಂದ ಅವರು ನಮ್ಮೆಲ್ಲರ ಮಾತೆ. ಅವರ ಆದರ್ಶ ನಮಗೆ ದಾರಿದೀಪವಾಗಿದೆ ಎಂದರು. ಬಲಿಪೂಜೆಯಲ್ಲಿ ಚರ್ಚ್ ನ ಪ್ರಧಾನ ಧರ್ಮ ಗುರು ವಂದನೀಯ ಫಾ. ಅನಿಲ್ ಕೆನ್ಯೂಟ್ ಡಿ’ಮೆಲ್ಲೊ ಅವರು ಭಾಗವಹಿಸಿ ಭಕ್ತರಿಗೆ ಹೊಸ ವರ್ಷದ ಶುಭಾಶಯ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿ’ ಸೋಜಾ, ಕಾರ್ಯದರ್ಶಿ ವಿಲ್ಫ್ರೆಡ್ ಲೋಬೊ, ಆಯೋಗಗಳ ಸಂಯೋಜಕಿ ಎಮಿಲಿಯಾ ಡಿ’ ಕುನ್ಹಾ ಉಪಸ್ಥಿತರಿದ್ದರು.