ಇತ್ತೀಚಿನ ಸುದ್ದಿ
ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ದೇಶ ನಂ1 ಆಗೋದೂ ಖಚಿತ: ಕೂಡ್ಲಿಗಿಯಲ್ಲಿ ಶ್ರೀರಾಮುಲು ಭವಿಷ್ಯ
02/03/2024, 22:25
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಬಿಜೆಪಿ ಪಕ್ಷದಿಂದ ಯಾರೇ ಸ್ಪರ್ಧೆ ಮಾಡಿದರೂ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸಿ ಎಂದು ಮಾಜಿ ಸಚಿವ ಶ್ರೀರಾಮುಲು ಕರೆ ನೀಡಿದರು. ಅವರು ತಾಲೂಕಿನ ಬಣವಿಕಲ್ಲು ಗ್ರಾಮದ ಹೊರವಲಯದ ತೋಟವೊಂದರಲ್ಲಿ, ಪಕ್ಷದ ಮುಖಂಡರು ಕಾರ್ಯಕರ್ತರಿಗಾಗಿ ಆಯೋಜಿಸಿದ್ದ ಸಮಾಲೋಚನಾ ಸಭೆ ಹಾಗೂ ಭೋಜನಾ ಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಜೆಪಿ ಪಕ್ಷದಲ್ಲಿ ಬಿ.ಎಸ್. ಯಡ್ಯೂರಪ್ಪರವರು, ಮುಖ್ಯ ಮಂತ್ರಿಯಾಗಿದ್ದಾಗ ರಾಜ್ಯವನ್ನು ಸರ್ವತೋಮುಖ ಅಭಿವೃದ್ದಿಯತ್ತ ತಂದಿದ್ದಾರೆ. ಹಾಗೇಯೇ ರಾಷ್ಟ್ರವನ್ನು ಪ್ರಧಾನಿ ನರೇಂದ್ರ ಮೋದಿಯವರು ಅಭಿವೃದ್ಧಿಗೊಳಿಸಿ, ಈಗ ವಿಶ್ವದಲ್ಲಿ ಮೂರನೇ ಸ್ಥಾನಕ್ಕೆ ತಂದಿದ್ದಾರೆ. ಇನ್ನೊಮ್ಮೆ ಗೆದ್ದು ಪ್ರಧಾನಿಯಾದರೆ ರಾಷ್ಟ್ರ ವಿಶ್ವದಲ್ಲಿಯೇ ಮೊದಲನೇ ಸ್ಥಾನಗಳಿಸಲಿದೆ. ಕಾರಣ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾಗಿ ಸ್ಪರ್ಧಿಸಿರಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿ ಹಾಗೂ ಹಾಕಿಸಿ ಗೆಲ್ಲಿಸಬೇಕಿದೆ, ಈ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಗಳನ್ನಾಗಿ ಮಾಡಬೇಕಿದೆ. 60 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೇಸ್ ಸರ್ಕಾರ ಬಗೆಹರಿಸಲಾಗದ ಜಮ್ಮುಕಾಶ್ಮೀರ ಸಮಸ್ಯೆ, ಬಿಜೆಪಿಯು ಅಧಿಕಾರಕ್ಕೆ ಬಂದು ಕೆಲವೇ ಕೆಲ ತಿಂಗಳಲ್ಲಿ ಬಗೆಹರಿಸಿದೆ. 370J ಕಾಲಂನ್ನು ಜಾರಿ ತಂದು ಅಲ್ಲಿಯ ವಾಸಿಗಳಿಗೆ ಸಂವಿಧಾನಬದ್ದವಾಗಿ, ಸಕಲ ಸೌಕರ್ಯಗಳನ್ನು ಹಾಗೂ ಸೂಕ್ತ ನ್ಯಾಯವನ್ನು ಒದಗಿಸಿಕೊಡಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೇ ರಾಷ್ಟ್ರೀಯ ಹೆದ್ಧಾರಿಗಳು, ಉನ್ನತೀಕರಣಗೊಂಡು ಅಭಿವೃದ್ಧಿಯಾಗಿವೆ ಹಾಗೂ ಎಂದೂ ಕಾಣದ ಸುಧಾರಣೆ ಕಂಡಿವೆ. ನದಿಗಳ ಜೋಡಣೆ ಯೋಜನೆ ಹಾಗೂ ಮಿಲಿಟರಿ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಿ, ಸೇನೆಯನ್ನು ವಿಶ್ವ ಮಟ್ಟದಲ್ಲಿ ಸದೃಢಗೊಳಿಸಲಾಗಿದೆ. ಕಿಸಾನ್ ಸಮ್ಮಾನ್, ಮಹಿಳೆಯರ ಸ್ವಾಲಂಭನೆಗೆ ಆರ್ಥಿಕ ನೆರವು ನೀಡುವ ಹತ್ತಾರು ಯೋಜನೆಗಳನ್ನು ಜಾರಿತರಲಾಗಿದೆ. ಇಂತಹ ಅಸಂಖ್ಯಾತ ಜನಪರ ಕಾಳಜಿಯುಳ್ಳ ಯೋಜನೆಗಳನ್ನು, ಬಿಜೆಪಿ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಜಾರಿತಂದು ರಾಷ್ಟ್ರವನ್ನು ಅಭಿವೃದ್ಧಿಯತ್ತ ಕೊಂಡ್ಯೊಯ್ಯುತ್ತಿದೆ. ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದಾಗಿನಿಂದ, ಬಿಜೆಪಿ ಪಕ್ಷ ಇನ್ನೂ ವಿನೂತನ ನೂರಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ, ಬಿಜೆಪಿ ಪಕ್ಷಕ್ಕೆ ಮತ ಹಾಕಿ ಹಾಗೂ ಹಾಕಿಸಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ. ಬಿಜೆಪಿ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ಮತ್ತೊಮ್ಮೆ ತರಬೇಕಿದೆ. ಈ ಮೂಲಕ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಗಳನ್ನಾಗಿ ಮಾಡಿ, ವಿಶ್ವದಲ್ಲಿ ದೇಶವನ್ನು ನಂ1 ಸ್ಥಾನಕ್ಕೆ ಕೊಂಡೊಯ್ಯಲು ಬಿಜೆಪಿ ಪಕ್ಷಕ್ಕೆ ಒಲವು ತೋರಬೇಕೆಂದು ಅವರು ಕೋರಿದರು. ಬಿಜೆಪಿ ಜಿಲ್ಲಾ ಮುಖಂಡರು, ತಾಲೂಕು ಮುಖಂಡರು, ಮಂಡಲ ಮುಖಂಡರು, ವಿವಿಧ ಘಟಕಗಳ ಮುಖಂಡರು. ಮಹಿಳಾ ಮುಖಂಡರು.ಪಕ್ಷದ ಅಸಂಖ್ಯಾತ ಕಾರ್ಯಕರ್ತರು , ಹಾಗೂ ವಿವಿದ ಜನಪ್ರತಿನಿಧಿಗಳು ಇದ್ದರು.