ಇತ್ತೀಚಿನ ಸುದ್ದಿ
ಮೊಬೈಲ್ ಸಂಭಾಷಣೆ ವೇಳೆ ಜಗಳ: ಮದುವೆ ನಿಶ್ಚಿತಾರ್ಥವಾಗಿದ್ದ ಯುವ ಜೋಡಿ ಆತ್ಮಹತ್ಯೆ
13/08/2022, 18:58
ರಾಯಚೂರು(reporterkarnataka.com): ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವ ಜೋಡಿಯೊಂದು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ರಾಯಚೂರಿನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದವರನ್ನು ಸಿಂಗನೋಡಿ ಗ್ರಾಮದ ಸರಸ್ವತಿ(21) ಹಾಗೂ ಮಂಡಲಗೇರಾ ಗ್ರಾಮದ ವಿನೋದ(24)ಎಂದು ಗುರುತಿಸಲಾಗಿದೆ.
ವಿನೋದ್ ಮತ್ತು ಸರಸ್ವತಿ ಅವರ ಮನೆಯವರೆಲ್ಲ ಸೇರಿ ವಿವಾಹ
ನಿಶ್ಚಿತಾರ್ಥ ಮಾಡಿದ್ದರು. ಬಳಿಕ ಮದುವೆಗೆ ಸಿದ್ಧವಾಗಿದ್ದ ಜೋಡಿ ಮೊಬೈಲ್ನಲ್ಲಿ ದಿನಾ ಪರಸ್ಪರ ಮಾತನಾಡುತ್ತಿದ್ದರು. ಹಾಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಜಗಳವಾಡಿಕೊಂಡಿದ್ದರು. ಇದರಿಂದ ಮನನೊಂದು ಯುವತಿ ಸರಸ್ವತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿಷಯ ತಿಳಿದ ಯುವಕ ವಿನೋದ್ ಕೂಡ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾರೆ.
ಘಟನಾ ಸ್ಥಳಕ್ಕೆ ಯಾಪಲದಿನ್ನಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.