ಇತ್ತೀಚಿನ ಸುದ್ದಿ
ಮಸ್ಕಿ ಪ್ರಗತಿ ಪರಿಶೀಲಿನಾ ಸಭೆ: ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು ಶಾಸಕ ಬಸನಗೌಡ ತೂರುವಿಹಾಳ
15/05/2025, 00:40

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿ ತಾಲೂಕು ವಾಲ್ಮೀಕಿ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಸ್ಕಿ ಶಾಸಕ ಬಸನಗೌಡ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೃಷಿ ಸಹಾಯ ನಿರ್ದೇಶಕರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಕೃಷಿ ಹೊಂಡ ಸೌಲಭ್ಯ ನೀಡುವ ಯೋಜನೆಗೆ 32 ಫಲಾನುಭವಿಗಳನ್ನು ತಾನೇ ಆಯ್ಕೆ ಮಾಡಿದ್ದಕ್ಕೆ ಶಾಸಕರು ಕೆಂಡ ಮಂಡಲವಾದರು.ಎಲ್ಲ ನೀನು ಆಯ್ಕೆ ಮಾಡುವುದಾದರೆ, ನಮ್ಮದೇನು ಕೆಲಸ? ಎಷ್ಟು ಫ್ರಾಡ್ ಮಾಡಿದ್ದೀರಿ? 5 ಕೋಟಿ ಕಾಮಗಾರಿ ಮಾಹಿತಿ ನನಗೆ ನೀಡಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗೆ ಏ ಕತ್ತಿ ಕಾಯೋನು ಸರಿಯಾದ ಮಾಹಿತಿ ನನಗೆ ಕೊಡಿ. ಪ್ಯಾಂಟು ಶರ್ಟ್ ಹಾಕಿಕೊಂಡು ನೀಟಾಗಿ ಸರ್ಕಾರದ ಗೌರವ ತೆಗೆದುಕೊಂಡು ಆರಾಮ್ ಇದ್ದುಬಿಡು ಫಲಾನುಭವಿಗಳು ಹಾಳಾಗಿ ಹೋಗಲಿ. ಕಾರ್ಯನಿರ್ವಾಹಕ ಅಧಿಕಾರಿಗಳು ನಮಗೂ ಮಾಹಿತಿ ನೀಡದೆ ನಿನಗೆ ಆಯ್ಕೆ ಮಾಡಲು ಪವರ್ ಕೊಟ್ಟವರು ಯಾರು ಎಂದು ಅಧಿಕಾರಿಗಳ ಚಳಿ ಬಿಡಿಸಿದರು.
ಸರಿಯಾದ ರೀತಿಯಲ್ಲಿ ಕೆಲಸ ಮಾಡಿ. ಕುಡಿಯುವ ನೀರಿನ ಯೋಜನೆಯಲ್ಲಿ ಬಹಳ ಭ್ರಷ್ಟಾಚಾರ ಹೇಳಿ ಬರುತ್ತದೆ. ಕೆಲಸ ಕಾರ್ಯ ಆಗದೆ ಯಾವುದೇ ಬಿಲ್ ಮಾಡಬಾರದು ಎಂದು ಶಾಸಕರು ಎಚ್ಚರಿಸಿದರು.
ಮುಂದಿನ ಸಭೆಯಲ್ಲಿ ಮಾಹಿತಿ ನೀಡದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು..
ಎಲ್ಲಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರೆ ಕೆಲವೊಂದು ಅಧಿಕಾರಿಗಳು ಗೈರಾಗಿದ್ದರು. ಕಾರ್ಯನಿರ್ವಾಹಕ ಅಧಿಕಾರಿಗಳು ನಮಗೆ ಹೇಳಲಾರದೆ ಅಸಿಸ್ಟೆಂಟ್ ಅಧಿಕಾರಿಗಳನ್ನು ಕಳಿಸಿದರೆ ಅವರಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ಶಾಸಕರು ಎಚ್ಚರಿಸಿದರು.