ಇತ್ತೀಚಿನ ಸುದ್ದಿ
75 ಕೋಟಿ ಮೌಲ್ಯದ ಎಂಡಿಎಂಎ ಮಾದಕ ದ್ರವ್ಯ ವಶ: ಮಂಗಳೂರು ಪೊಲೀಸರಿಗೆ ಉಸ್ತುವಾರಿ ಸಚಿವರ ಅಭಿನಂದನೆ
16/03/2025, 21:56

ಮಂಗಳೂರು(reporterkarnataka.com):ಮಂಗಳೂರು ನಗರ ಪೊಲೀಸರು 75 ಕೋಟಿ ರೂ.ಮೌಲ್ಯದ 37 ಕೆಜಿ ಎಂಡಿಎಂಎ ಮಾದಕ ದ್ರವ್ಯ ವಶಪಡಿಸಿಕೊಂಡಿರುವ ಘಟನೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮಾದಕ ದ್ರವ್ಯ ಹಿಂದಿರುವ ಪ್ರತಿಯೊಬ್ಬರನ್ನು ಮಟ್ಟ ಹಾಕಲು ಸರಕಾರ ಬದ್ಧವಾಗಿದೆ. ಯುವಜನತೆ, ವಿದ್ಯಾಥಿ೯ಗಳನ್ನು ಇಂತಹ ಮಾದಕತೆಗಳಿಂದ ರಕ್ಷಿಸಲು ನಿರಂತರವಾಗಿ ಕಾಯಾ೯ಚರಣೆ ಮುಂದುವರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.