ಇತ್ತೀಚಿನ ಸುದ್ದಿ
ಸುಗ್ರಿವಾಜ್ಞೆ ಜಾರಿಯಾದರೂ ನಿಲ್ಲದ ಮೈಕ್ರೋ ಫೈನಾನ್ಸ್ ಕಿರುಕುಳ: ಗೃಹ ಸಚಿವರ ತವರಿನಲ್ಲೇ ಇಬ್ಬರು ಆತ್ಮಹತ್ಯೆ!
22/02/2025, 22:01

ತುಮಕೂರು(reporterkarnataka.com): ರಾಜ್ಯ ಸರಕಾರ ಸುಗ್ರೀವಾಜ್ಞೆ ಜಾರಿಗೊಳಿಸಿದರೂ
ಮೈಕ್ರೋ ಫೈನಾನ್ಸ್ ಗಳ ಕಿರುಕುಳ ಇನ್ನೂ ತಪ್ಪಿಲ್ಲ.
ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ತವರು ಕ್ಷೇತ್ರದಲ್ಲೇ ಮೈಕ್ರೋ ಫೈನಾನ್ಸ್ ಹಾವಳಿಗೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಬ್ಬ ಆಟೋ ಚಾಲಕ ಹಾಗೂ ಒಬ್ಬರು ಮಹಿಳೆ ಆತ್ಮಹತ್ಯೆಗೆ ಶರಣಾದವರು. ಮೃತಪಟ್ಟವರನ್ನು ಅಂಜನಮೂರ್ತಿ (35) ಹಾಗೂ ಅಜೀಜ್ ಉನಿಸಾ ಎಂದು ಗುರುತಿಸಲಾಗಿದೆ.
ಅಂಜನಮೂರ್ತಿ ಅವರು ಬಟವಾಡಿಯ ಮಹಾಲಕ್ಷ್ಮೀ ನಗರದ ನಿವಾಸಿ ಎಂದು ತಿಳಿದು ಬಂದಿದೆ.
ಅಜೀಜ್ ಉನಿಸಾ ಅವರು ಕುಣಿಗಲ್ ತಾಲೂಕಿನ ಕುತ್ತಿಪುರದ ನಿವಾಸಿ.
ಅಜೀಜ್ ಉನಿಸಾ ಅವರು ಇಬ್ಬರು ಹೆಣ್ಣುಮಕ್ಕಳ ಮದುವೆಗೆ 12 ಲಕ್ಷ ರೂಪಾಯಿ ಸಾಲವನ್ನು ಬೇರೆ ಬೇರೆ ಫೈನಾನ್ಸ್ ಗಳಿಂದ ತೆಗೆದಿದ್ದರು.
ಆಶೀರ್ವಾದ, ಸೂರ್ಯೋದಯ, ಬಜಾಜ್ ಸೇರಿದಂತೆ ವಿವಿಧ ಫೈನಾನ್ಸ್ ನಿಂದ ಉನ್ನಿಸಾ ಸಾಲವನ್ನು ಪಡೆದಿದ್ದರು. ಕಳೆದ ಕೆಲವು ತಿಂಗಳಿಂದ ಸಾಲ ಮರುಪಾವತಿ ಮಾಡಿರಲಿಲ್ಲ. ಮನೆಗೆ ಬಂದು ಹಣ ಕಟ್ಟುವಂತೆ ನಿಂದಿಸಿರುವ ಆರೋಪ ಕೇಳಿ ಬಂದಿದೆ.
ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.