ಇತ್ತೀಚಿನ ಸುದ್ದಿ
Metro ಪ್ರಯಾಣ ದರ ಏರಿಕೆಯಲ್ಲಿ ರಾಜ್ಯ ಸರಕಾರದ ಪಾತ್ರವಿಲ್ಲ, ಬಿಜೆಪಿಯವರು ಎಡೆಬಿಡಂಗಿಗಳು: ಸಚಿವ ರಾಮಲಿಂಗಾ ರೆಡ್ಡಿ
12/02/2025, 21:19
![](https://reporterkarnataka.com/wp-content/uploads/2025/02/DSC_6426_PQJ7vWLx42-1024x610.jpeg)
ಮಂಗಳೂರು(reporterkarnataka.com): ಬೆಂಗಳೂರು ಮೆಟ್ರೋ ಪ್ರಯಾಣ ದರ ಏರಿಕೆಯಲ್ಲಿ ರಾಜ್ಯ ಸರಕಾರದ ಪಾತ್ರವಿಲ್ಲ, ಕೇಂದ್ರ ಸರಕಾರದ ನಗರಾಡಳಿತ ಕಾರ್ಯದರ್ಶಿ ಮೆಟ್ರೋ ಅಧ್ಯಕ್ಷರು, ರಾಜ್ಯದ ಪ್ರತಿನಿಧಿ ಇರುತ್ತಾರೆ ಅಷ್ಟೇ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದ ಜತೆ ಮಾತನಾಡಿದ ಸಚಿವರು, ಇದೆಲ್ಲ ಮಾಜಿ ಸಚಿವ ಡಿ.ವಿ.ಸದಾನಂದ ಗೌಡರಿಗೆ, ಸಂಸದ ಪಿ.ಸಿ.ಮೋಹನ್ ಅವರಿಗೆ ಗೊತ್ತಾಗಿಲ್ವೇ?
ಬಿಜೆಪಿಯವರು ಎಡೆಬಿಡಂಗಿಗಳು. ಒಳ್ಳೆಯದಾದರೆ ತಾವು ಮಾಡಿದ್ದು ಜನರಿಗೆ ತೊಂದರೆ ಅದರೆ ಕಾಂಗ್ರೆಸ್ ಮಾಡಿದ್ದು ಎನ್ನುವ ಚಾಳಿ ಅವರದ್ದು ಎಂದು ಕಿಡಿಕಾರಿದರು.
ಮೆಟ್ರೋ ಪ್ರಯಾಣ ದರ ಏರಿಕೆಯಾದ ಬೆನ್ನಲ್ಲೇ ಪ್ರಯಾಣಿಕರು ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ್ದು, ಇದರ ಬೆನ್ನಲ್ಲೇ ಬಿಜೆಪಿ ನಾಯಕರು ಕೂಡಾ ರಾಜ್ಯ ಸರಕಾರದ ಮೇಲೆ ಬೊಟ್ಟು ಮಾಡಿದ್ದು ಈ ವಿಚಾರವಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಿ 3500 ಹೊಸ ಬಸ್ ಹಾಗೂ ಮೂರು ನೂತನ ಅರ್‌ಟಿಒ ಕಚೇರಿ ಕೇಳಿದ್ದೇವೆ. ಶಕ್ತಿ ಯೋಜನೆಯ 1500 ಕೋಟಿ ರೂ. ಬರುವುದು ಬಾಕಿ ಇದೆ. ರಾಜ್ಯದಲ್ಲಿ ಈ ವರ್ಷಾಂತ್ಯದ ಒಳಗೆ 43 ಸ್ವಯಂಚಾಲಿತ ಟೆಸ್ಟಿಂಗ್ ಸೆಂಟರ್‌ಗಳು, 11 ಸ್ವಯಂಚಾಲಿತ ಫಿಟೈಸ್ ಟೆಸ್ಟ್ ಸೆಂಟರ್‌ಗಳು ಕಾರ್ಯಾರಂಭಿಸಲಿವೆ. ಈ ಮೂಲಕ ಡಿಎಲ್, ಫಿಟೈಸ್ ಸರ್ಟಿಫಿಕೇಟ್ ಇತ್ಯಾದಿ ಕೆಲಸ ತ್ವರಿತಗೊಳ್ಳಲಿದೆ ಎಂದು ಅವರು ನುಡಿದರು.