ಇತ್ತೀಚಿನ ಸುದ್ದಿ
ಮೇರು ಕಲಾವಿದ, ಮಾತಿನ ಮಾಂತ್ರಿಕ, ಮಾಜಿ ಶಾಸಕ ಕುಂಬಳೆ ಸುಂದರ ರಾವ್ ಇನ್ನಿಲ್ಲ
30/11/2022, 15:24

ಮಂಗಳೂರು(reporterkarnataka.com): ಮೇರು ಕಲಾವಿದ, ಪ್ರಸಿದ್ಧ ಅರ್ಥದಾರಿ, ಮಾಜಿ ಶಾಸಕ ಕುಂಬಳೆ ಸುಂದರ್ ರಾವ್(88) ಬುಧವಾರ ಮುಂಜಾನೆ ನಿಧನರಾದರು
ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಸುಂದರ ರಾವ್ ಅವರ ಅಂತ್ಯ ಸಂಸ್ಕಾರ ನಾಳೆ ನೆರವೇರಲಿದೆ. ಪಾರ್ಥಿವ ಶರೀರವನ್ನು ಸಾರ್ವಜನಿಕರಿಗೆ ವೀಕ್ಷಣೆಗೆ ಮಂಗಳೂರು ಪಡೀಲ್ ಬಳಿ ಇರುವ ಅವರ ಮನೆಯಲ್ಲಿ ಇರಿಸಲಾಗುವುದು. ಯಕ್ಷಗಾನ ಕಲಾರಂಗದ ಇಡೀ ತಂಡ ಅವರ ಅಗಲಿಕೆಗೆ ತೀವ್ರ ಸ್ವಂತ ವ್ಯಕ್ತಪಡಿಸಿದೆ.
ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ವೇಷದಾರಿಯಾಗಿ ದಶಕಗಳ ಕಾಲ ಯಕ್ಷ ಪ್ರೇಮಿಗಳ ಮನಸ್ಸು ಗೆದ್ದಿದ್ದ ಕುಂಬಳೆ ಸುಂದರ ರಾವ್ ಅವರು ಇಳಿ ವಯಸ್ಸಿನಲ್ಲಿ ಬಿಜೆಪಿ ಮೂಲಕ ರಾಜಕೀಯ ರಂಗ ಪ್ರವೇಶಿಸಿದ್ದರು. ನಂತರ ಅಂದಿನ ಸುರತ್ಕಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಮಾಜಿ ಶಾಸಕರಾದ ಬಳಿಕ ರಾಜಕೀಯ ಚಟುವಟಿಕೆಗಳಿಂದ ದೂರವಾಗಿದ್ದರು.