11:39 PM Monday2 - December 2024
ಬ್ರೇಕಿಂಗ್ ನ್ಯೂಸ್
ಜೀ ಕನ್ನಡ ಡ್ರಾಮಾ ಜೂನಿಯರ್ಸ್ ವಿಜೇತೆ ರಿಷಿಕಾ ಕುಂದೇಶ್ವರಗೆ ಮುಖ್ಯಮಂತ್ರಿ ಮೆಚ್ಚುಗೆ ಫೆಂಗಲ್ ಚಂಡಮಾರುತ: ದ.ಕ., ಉಡುಪಿ ಜಿಲ್ಲೆಯ ಶಾಲೆ ಹಾಗೂ ಪಿಯು ಕಾಲೇಜಿಗಳಿಗೆ ನಾಳೆ… ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ವೈಭವದ ಲಕ್ಷದೀಪೋತ್ಸವ ಸಂಪನ್ನ: ದಾಖಲೆ ಸಂಖ್ಯೆಯಲ್ಲಿ ನೆರೆದ… ಸಂಘ ಪರಿವಾರದ ಕೈಗೊಂಬೆಯಂತೆ ವರ್ತಿಸುವ ಪೊಲೀಸ್ ಕಮಿಷನರ್ ವರ್ಗಾಯಿಸಿ: ಪ್ರತಿಭಟನೆಯಲ್ಲಿ ಮುನೀರ್ ಕಾಟಿಪಳ್ಳ… ನಿಡುವಾಳೆ ಶ್ರೀ ರಾಮೇಶ್ವರ ಕ್ಷೇತ್ರದಲ್ಲಿ ಕಾರ್ತಿಕ ದೀಪೋತ್ಸವ: ಬೆಳಗಿದ 3 ಸಾವಿರಕ್ಕೂ ಹೆಚ್ಚು… ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಂದ ಅರಣ್ಯ ಒತ್ತುವರಿ: ರೈತ ಸಂಘದಿಂದ ಆರೋಪ;… ನನ್ನ ವಿರುದ್ಧ ಏನೇ ದಾಖಲೆಗಳಿದ್ದರೂ ಯತ್ನಾಳ್ ಬಿಡುಗಡೆ ಮಾಡಲಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಂಜನಗೂಡು: ಪವಾಡ ಪುರುಷ ಶ್ರೀ ಮಹದೇವ ತಾತ ಗದ್ದುಗೆಯಲ್ಲಿ ವಿಶೇಷ ಪೂಜೆ ಕಳಪೆ ಔಷಧ ಕೊಟ್ಟು ಸರಕಾರವೇ ಬಾಣಂತಿಯರ ಕೊಂದಿದೆ: ಪ್ರತಿಪಕ್ಷದ ನಾಯಕ ಆರ್‌. ಅಶೋಕ್… ಮಂಗಳೂರನ್ನು ರಾಜ್ಯದ 2ನೇ ನಗರವಾಗಿ ಅಭಿವೃದ್ಧಿಪಡಿಸುವ ಕನಸಿದೆ: ಗೃಹ ಸಚಿವ ಡಾ. ಪರಮೇಶ್ವರ್

ಇತ್ತೀಚಿನ ಸುದ್ದಿ

ಮೆರಿಲ್ ಚಿಕಿತ್ಸೆ ಅಗತ್ಯವಿದೆ: ಜಾಗೃತಿ ಅಭಿಯಾನದಲ್ಲಿ ಖ್ಯಾತ ಕ್ರಿಕೆಟಿಗ ಎಂ.ಎಸ್. ಧೋನಿ

23/10/2024, 23:46

ಬೆಂಗಳೂರು(reporterkarnataka.com): ವೈದ್ಯಕೀಯ ಉಪಕರಣಗಳ ಉತ್ಪಾದನೆಯ ಸಂಸ್ಥೆಯಾದ ಮೆರಿಲ್ “ಚಿಕಿತ್ಸೆಯ ಅಗತ್ಯವಿದೆ” ಎಂಬ ವೀಡಿಯೊ ಅಭಿಯಾನ ಆರಂಭಿಸಿದೆ. ಖ್ಯಾತ ಕ್ರಿಕೆಟಿಗರಾದ ಎಂಎಸ್ ಧೋನಿಯ ಸಂದೇಶಗಳಿಂದ ಕೂಡಿದ ಎಐ (AI) ಚಾಲಿತ ವೀಡಿಯೊಗಳನ್ನು ಪರಿಚಯಸುತ್ತಿದೆ. ಈ ನವೀನ ಚಿಕಿತ್ಸಾ ವಿಧಾನಗಳು ರೋಗಿಗಳಿಗೆ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವಲ್ಲಿ ಮತ್ತು ವಿವಿಧ ಚಿಕಿತ್ಸೆಗಳಿಗೆ ಸಂಬಂಧಿಸಿದ ಗೊಂದಲ ಮತ್ತು ಭಯವನ್ನು ನಿವಾರಿಸುವಲ್ಲಿ ರೋಗಿಗಳಿಗೆ ಸಹಾಯಕವಾಗಿದೆ. ಎಐ-ಚಾಲಿತ ತಂತ್ರಜ್ಞಾನವನ್ನು ಬಳಸುವ ಮೂಲಕ ಮೆರಿಲ್ ಸಂಸ್ಥೆ ರೋಗಿಗಳಿಗೆ ಆರೋಗ್ಯಕ್ಷೇತ್ರದಲ್ಲಿ ಬದಲಾಗುತ್ತಿರುವ ಚಿಕಿತ್ಸಾ ವಿಧಾನಗಳು ಮತ್ತು ನವೀನ ಚಿಕಿತ್ಸಾ ಕ್ರಮಗಳನ್ನು ತಿಳಿಸುವ ಮೂಲಕ, ರೋಗಿಗಳಿಗೆ ತಮ್ಮ ಯೋಗಕ್ಷೇಮ ಕಾಪಾಡಕೊಳ್ಳಲು ಉತ್ತೇಜಿಸುತ್ತದೆ.

“ಚಿಕಿತ್ಸೆ ಅಗತ್ಯವಿದೆ” ಎಂಬ ಅಭಿಯಾನ ಹೃದಯ ರೋಗಗಳು, ಕೃತಕ ಕೀಲು ಅಳವಡಿಕೆ, ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗಳ ಮೇಲೆ ಗಮನಹರಿಸುತ್ತದೆ, ಚಿಕಿತ್ಸೆ ಮಾಡದೆ ಇರುವ ಕಾಯಿಲೆ ರೋಗಿಗಳಲ್ಲದೇ ತಮ್ಮ ಕುಟುಂಬದವರಿಗು ತೊಂದರೆ ಆಗಬಹುದು ಎಂಬ ವಿಷಯದಲ್ಲಿ ಪ್ರಾಮುಖ್ಯತೆ ಕೊಡುತ್ತದೆ. ಎಂಎಸ್ ಧೋನಿ ಒಳಗೊಂಡ ವೀಡಿಯೊಗಳು ರೋಗಿಗಳಲಿನ ನವೀನ ಚಿಕಿತ್ಸಾ ವಿಧಾನಗಳಲ್ಲಿರುವ ಆತಂಕ ಮತ್ತು ಸಂದೇಹಗಳನ್ನು ಹೋಗಲಾಡಿಸುವ ಗುರಿಯನ್ನು ಹೊಂದಿದೆ.
ಎರಡನೇ ಹಂತದ “ಚಿಕಿತ್ಸೆ ಆಗತ್ಯವಿದೆ” ಎಂಬ ಅಭಿಯಾನವು ಎಐ ತಂತ್ರಜ್ಞಾನದೊಂದಿಗೆ ಜೋಡಿಸಿದ್ದು ಚಿಕಿತ್ಸಾ ಕ್ರಮ ಅನುಗುಣವಾಗಿ ಸಂದೇಶಗಳನ್ನು ರೋಗಿಯೋಂದಿಗೆ ಎಂ ಎಸ್ ಧೋನಿ ವ್ಯಕ್ತಿಕವಾಗಿ ಸಂದೇಶಿಸುವ ರೀತಿಯಲ್ಲಿ ಎಐ ತಂತ್ರಜ್ಞಾನದೊಂದಿಗೆ ಈ ಅಭಿಯಾನದ ಸಂದೇಶಗಳನ್ನು ಸಂಯೋಜಿಸಲಾಗಿದೆ. ರೋಗಿಗಳು ವ್ಯಕ್ತಿಕವಾಗಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸುವ ಉದ್ದೇಶವಾಗಿದೆ. ಉತ್ತಮ ಚಿಕಿತ್ಸಾ ವಿಧಾನಗಳನ್ನು ಆಯ್ಕೆ ಮಾಡಲು ಅವಕಾಶಗಳ ಭರವಸೆ ನೀಡಲಾಗಿದೆ. ಎಐ ಚಾಲಿತ ವೀಡಿಯೊಗಳು ವಿವಿಧ ರೋಗ ಲಕ್ಷಣಗಳ ವಿಚಾರವನ್ನು ಒಂದಿದ್ದು, ರೋಗಿಯ ಅವಶ್ಯಕತೆ ಮತ್ತು ಕಾಳಜಿಗೆ ಅನುಗುಣವಾಗಿವೆ.
ಚಿಕಿತ್ಸೆ ನಿಡದ ಆರೋಗ್ಯ ಸಮಸ್ಯೆಗಳು ತಮ್ಮ ಮೇಲೆ ಅಲ್ಲದೆ ತಮ್ಮ ಪ್ರೀತಿ ಪಾತ್ರರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎನ್ನುವ ವಿಷಯದ ಬಗ್ಗೆ ಈ ಅಭಿಯಾನವು ಒಂದು ನಿರ್ಣಾಯಕ ಸಂದೇಶ ನೀಡಲು ಹೊರಟಿದೆ. ‘ನಿಮ್ಮ ಸಮಸ್ಯೆ ನಿಮ್ಮ ಸಮಸ್ಯೆ ಮಾತ್ರವಲ್ಲ, ಹಾಗಾಗಿ ಚಿಕಿತ್ಸೆ ಅಗತ್ಯ’.ಎಂಬ ಅಡಿಬರಹವಿರುವ ಈ ಅಭಿಯಾನವು ರೋಗಿಯ ಸಂಕಟದ ಪರಿಣಾಮವನ್ನು ರೋಗಿಯ ಪಾಲಕರು ಮತ್ತು ಕುಟುಂಬದ ಸದಸ್ಯರ ನಡುವೆ ಭಾವನಾತ್ಮಕ ವಾಸ್ತವದ ಅರಿವು ಮುಡಿಸುವ ಧ್ವನಿಯಾಗಿದೆ. ಸಕಾಲಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸಲಹೆ ನೀಡುವಂತಹ ದೇಶವ್ಯಾಪಿ ವೈದ್ಯರ ಜೊತೆಗೆ ಮತ್ತು ಆಸ್ಪತ್ರೆಗಳೊಂದಿಗೆ ಮೆರಿಲ್ ಸಂಸ್ಥೆಯು ಸಹಭಾಗಿತ್ವವನ್ನು ಹೊದಿದ್ದು. ವೃತ್ತಿಪರ ಆರೋಗ್ಯ ತಜ್ಞರೊಂದಿಗೆ ಸಹಕರಿಸುವ ಮೂಲಕ, ಮೆರಿಲ್ ಸಂಸ್ಥೆ ಸುಧಾರಿತ ಲಭ್ಯವಿರುವ ನವೀನ ಚಿಕಿತ್ಸಾ ಕ್ರಮಗಳ ಆಯ್ಕೆ ಬಗ್ಗೆ ತ್ವರಿತಾ ಚಿಕಿತ್ಸಾ ಅವಶ್ಯಕತೆಯ ಅರಿವನ್ನು ಮುಡಿಸುವ ಉದ್ದೇಶವನ್ನು ಒಳಗೊಂಡಿದೆ. ರೋಗಿಗಳ ಸುಧಾರಿತ ಆರೋಗ್ಯವಂತ ಗುಣಮಟ್ಟದ ಜೀವನ ಅವಶ್ಯಕತೆಯಾಗಿ ಈ ಸಂದೇಶವನ್ನು ತಮ್ಮ ಕುಟುಂಬದ ಒಳಿತಿಗಾಗಿ ಸಂಯೋಜಿಸಲಾಗಿದೆ ಎಂದು ಮೆರಿಲ್‌ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯ ಅಧಿಕಾರಿ ಆದ ಮನೀಶ್ ದೇಶಮುಖ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಧಾರಿತ ವೈದ್ಯಕೀಯ ಚಿಕಿತ್ಸಾ ಪರಿಹಾರಗಳನ್ನು ನೀಡುವ ಮೂಲಕ ಸದಾಕಾಲ ಒಂದು ಆರೋಗ್ಯಕರ ವಿಶ್ವವನ್ನು ಸೃಷ್ಟಿಸಬೇಕೆಂಬುದು ಮೆರಿಲ್‌ ಸಂಸ್ಥೆಯ ಮುಖ್ಯ ಗುರಿಯಾಗಿದೆ ಎಂದು ಅಭಿಪ್ರಾಯಪಡುತ್ತಾರೆ. “ಚಿಕಿತ್ಸೆ ಅಗತ್ಯವಿದೆ” (‘ಟ್ರೀಟ್‌ಮೆಂಟ್ ಜರೂರಿ ಹೈ’) ಎನ್ನುವ ಅಭಿಯಾನದೊಂದಿಗೆ, ದೇಶಾದ್ಯಂತ ರೋಗಿಗಳಿಗೆ ಚಿಕಿತ್ಸೆಯಬಗ್ಗೆ ಭರವಸೆ ಮತ್ತು ಧೈರ್ಯ ತುಂಬುವ ಒಂದು ಸಂದೇಶವನ್ನು ಹೊತ್ತುತರುವ ಗುರಿ ನಮಗಿದೆ. AI ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಎಂ.ಎಸ್. ಧೋನಿಯ ಸಹಭಾಗಿತ್ವದಲ್ಲಿ, ನಾವು ನಮ್ಮ ಸಂದೇಶವನ್ನು ಹೆಚ್ಚು ವೈಯಕ್ತಿಕವಾಗಿ ಮತ್ತು ಪ್ರಭಾವಶಾಲಿಯನ್ನಾಗಿ ಮಾಡುತ್ತಿದ್ದೇವೆ, ತಮ್ಮ ಆರೋಗ್ಯದ ಹೊಣೆಯನ್ನು ಹೊರುವಂತೆ ನಾವು ವ್ಯಕ್ತಿಗಳಿಗೆ ಬಲವರ್ಧನೆ ನೀಡುತ್ತಿದ್ದೇವೆ.

ಇತ್ತೀಚಿನ ಸುದ್ದಿ

ಜಾಹೀರಾತು