10:59 PM Sunday22 - September 2024
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ 30 ಅಡಿ ಎತ್ತರದಿಂದ ಗ್ರಾಪಂ ಆವರಣಕ್ಕೆ ಕಾರು… ವಿಶ್ವ ವಿಜ್ಞಾನಿಗಳ ಪಟ್ಟಿ: ಬಳ್ಳಾರಿಯ ವಿಎಸ್‌ಕೆಯುನ ಮೂವರು ಪ್ರಾಧ್ಯಾಪಕರಿಗೆ ಸ್ಥಾನ ​ ಸರಕಾರದ ನೇಮಕಾತಿಯಲ್ಲಿ ಮೀಸಲಾತಿ ಪರಿಗಣಿಸಿ: ಪಂಪಾಪತಿ ಆಗ್ರಹ ನಂಜನಗೂಡು: 20 ಕೋಟಿ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಚಾಲನೆ ಬೆಂಗಳೂರಿನ ಇಸ್ಕಾನ್ ಶ್ರೀರಾಧಾಕೃಷ್ಣ ದೇವಸ್ಥಾನದಲ್ಲಿ ಬಾಲ್ಯದ ಕ್ಯಾನ್ಸರ್ ಜಾಗೃತಿ ಮಾಸಕ್ಕೆ ಚಿನ್ನದ ಹೊಳಪು ತೀರ್ಥಹಳ್ಳಿ: ಹಿಂದೂ- ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಛತ್ರಕೇರಿ ಗಣೇಶೋತ್ಸವ ಶೋಭಾಯಾತ್ರೆ ಮಿಸ್ಟರ್ ಕರಾವಳಿ, ಮಿಸ್ ಕರಾವಳಿ ಪ್ರಶಸ್ತಿ ರಂಜಿತ್ ಗಾಣಿಗ ಹಾಗೂ ರಿಷಾ ಟಾನ್ಯಾ… ಮೇಯರ್ ಆಯ್ಕೆ ಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್ ವಾಕ್ಸಮರ: ಕೊನೆಗೆ ನಿರಾಳ, ಕೂಲ್ ಕೂಲ್!! ತೀರ್ಥಹಳ್ಳಿ: ಸರ್ವಧರ್ಮ ಸಮನ್ವಯತೆಯಲ್ಲಿ ಸಂಭ್ರಮ- ಸಡಗರದ ಈದ್ ಮಿಲಾದ್ ಆಚರಣೆ ನಂಜನಗೂಡು: ಮುನಿರತ್ನ ವಿರುದ್ಧ ಜನ ಸಂಗ್ರಾಮ ಪರಿಷತ್ ಪ್ರತಿಭಟನೆ: ಶಾಸಕ ಸ್ಥಾನದಿಂದ ವಜಾಗೊಳಿಸಲು…

ಇತ್ತೀಚಿನ ಸುದ್ದಿ

ಮೇಲಿನಕುರುವಳ್ಳಿ ನ್ಯಾಯಬೆಲೆ ಅಂಗಡಿ ಸಿಬ್ಬಂದಿಗಳ ದರ್ಪ !: ಪಡಿತರ ಅಕ್ಕಿಯನ್ನು ಫಲಾನುಭವಿಗಳೇ ಹಾಕಿಕೊಳ್ಳಬೇಕಂತೆ! ಇದ್ಯಾವ ಕಾನೂನು?

22/09/2024, 20:57

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ತೀರ್ಥಹಳ್ಳಿ ತಾಲೂಕಿನ ಅತೀ ದೊಡ್ಡ ಗ್ರಾಮಪಂಚಾಯಿತಿಯಾಗಿರುವ ಮೇಲಿನಕುರುವಳ್ಳಿಯಲ್ಲಿರುವ ಹರಿಜನ ಗಿರಿಜನ ಕಲ್ಲುಕುಟಿಕರ ಸಂಘದ ಕಟ್ಟಡದಲ್ಲಿರುವ ಪಡಿತರ ನ್ಯಾಯಬೆಲೆ ಅಂಗಡಿಯಲ್ಲಿ ನೀಡುವ ಅಕ್ಕಿಯನ್ನು ಸಾರ್ವಜನಿಕರೇ ತುಂಬಿಸಿಕೊಳ್ಳಬೇಕಂತೆ. ಕೇಳಿದರೆ ದರ್ಪದ ಮಾತುಗಳನ್ನು ಅಲ್ಲಿನ ಸಿಬ್ಬಂದಿಗಳು ಆಡುತ್ತಾರೆ.
ಹೌದು,ಸರ್ಕಾರ ನೀಡುವ ಅಕ್ಕಿಯನ್ನು ಸಾರ್ವಜನಿಕರೇ ಹಾಕಿಕೊಳ್ಳಬೇಕಂತೆ, ಇದನ್ನು ಪ್ರೆಶ್ನೆ ಮಾಡಿದಕ್ಕೆ ಅಕ್ಕಿ ಸರಿ ಇಲ್ಲ ಎಂದು ಹೇಳುತ್ತೀರಾ? ನಿಮಗೆ ಯಾವ ಅಕ್ಕಿ ಬೇಕೋ ಅದನ್ನು ಹಾಕಿಕೊಳ್ಳಿ ನಾನು ತೂಕ ಮಾಡಿ ಕೊಡುತ್ತೇನೆ ಎಂದು ಅಲ್ಲಿನ ಸಿಬ್ಬಂದಿಯೊಬ್ಬರು ಅತ್ಯಂತ ದರ್ಪದಿಂದ ಮಾತನಾಡುತ್ತಾರೆ. ಅಕ್ಕಿಯನ್ನು ಚೀಲದಿಂದ ನೆಲಕ್ಕೆ ಸುರಿದು ಹಾಕಿದ್ದು ಅದರಲ್ಲಿ ಇಲಿ ಪಿಕ್ಕಿ ಸೇರಿ ಇತರ ಕಸ ಇದ್ದು ಅದನ್ನು ನೋಡಿದವರು ಬೇರೆ ಅಕ್ಕಿ ಕೊಡಿ ಎನ್ನುವುದು ಸಹಜ. ಆದರೆ ಅಲ್ಲಿನ ಸಿಬ್ಬಂದಿಯೊಬ್ಬರು ನಿಮಗೆ ಬೇಕಾದ ಅಕ್ಕಿ ನೀವೇ ಹಾಕಿಕೊಳ್ಳಿ ಎಂದು ನ್ಯಾಯಬೆಲೆ ಅಂಗಡಿಗೆ ಬರುವ ಪಡಿತರ ಪಲಾನುಭವಿಗಳಿಗೆ ಸಾರ್ವಜನಿಕರಿಗೆ ದರ್ಪದಿಂದ ಹೇಳುತ್ತಾರೆ ಎಂದು ಅನೇಕ ಪಲಾನುಭವಿಗಳು ದೂರಿದ್ದಾರೆ.

ಸಿಬ್ಬಂದಿಗಳ ಕೊರತೆ ಇದ್ದರೆ ಮತ್ತೊರ್ವ ಪುರುಷ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು ಅದನ್ನು ಬಿಟ್ಟು ನ್ಯಾಯ ಬೆಲೆ ಅಂಗಡಿಗೆ ಬಂದಂತಹ ಪಡಿತರ ಫಲಾನುಭವಿಗಳಿಗೆ ದರ್ಪದಿಂದ ಮಾತನಾಡುವುದು ಪ್ರಶ್ನೆ ಮಾಡಿದರೆ ಅಕ್ಕಿ ಸರಿ ಇಲ್ಲ ಎನ್ನುತ್ತಾರೆ ಎಂದು ಸಾರ್ವಜನಿಕರನ್ನೇ ದೂರುವುದು ನ್ಯಾಯವೇ? ಈ ಹಿಂದೆಯೂ ಕೂಡ ಇದೆ ನ್ಯಾಯಬೆಲೆ ಅಂಗಡಿಯಲ್ಲಿ ಸಿಬ್ಬಂದಿಗಳು ದರ್ಪದ ಮಾತುಗಳನ್ನಾಡಿದ ದೂರುಗಳು ಕೇಳಿ ಬಂದಿತ್ತು ಎಂದು ಸಾರ್ವಜನಿಕವಾಗಿ ಮಾತು ಕೇಳಿ ಬರುತ್ತಿದೆ. ಇದರ ಬಗ್ಗೆ ಆಹಾರ ನಿರೀಕ್ಷಕರು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಅನೇಕ ಸಾರ್ವಜನಿಕರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು