3:28 PM Thursday16 - January 2025
ಬ್ರೇಕಿಂಗ್ ನ್ಯೂಸ್
ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ… ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ…

ಇತ್ತೀಚಿನ ಸುದ್ದಿ

ಎಂಸಿಸಿ ಬ್ಯಾಂಕ್ ಸುರತ್ಕಲ್ ಶಾಖೆಯ ಹೊಸ ಆವರಣದ ಉದ್ಘಾಟನೆ: ರಜತ ಮಹೋತ್ಸವ ಆಚರಣೆ

26/01/2024, 20:28

ಮಂಗಳೂರು(reporterkarnataka.com): ಎಂಸಿಸಿ ಬ್ಯಾಂಕ್ ಲಿಮಿಟೆಡ್‌ನ ಸುರತ್ಕಲ್ ಶಾಖೆಯನ್ನು ಬ್ಯಾಂಕ್‌ನ ಗೌರವಾನ್ವಿತ ಗ್ರಾಹಕರ ಅನುಕೂಲಕ್ಕಾಗಿ ಶುಕ್ರವಾರ ಸುರತ್ಕಲ್ ನ ಸರ್ವಿಸ್ ರಸ್ತೆಯಲ್ಲಿರುವ ಲ್ಯಾಂಡ್ ಲಿಂಕ್ಸ್ ಪರ್ಲ್ ನೆಲ ಮಹಡಿಯಲ್ಲಿರುವ ಸಂಪೂರ್ಣ ಹವಾನಿಯಂತ್ರಿತ ಆವರಣಕ್ಕೆ ಸ್ಥಳಾಂತರಿಸಲಾಯಿತು.
ಇದೇ ಸಂದರ್ಭದಲ್ಲಿ ಸುರತ್ಕಲ್ ಶಾಖೆಯ ಬೆಳ್ಳಿಹಬ್ಬವನ್ನು ಆಚರಿಸಲಾಯಿತು.


ಸುರತ್ಕಲ್ ಶಾಖೆಯ ನೂತನ ಆವರಣವನ್ನು ಅಧ್ಯಕ್ಷರಾದ ‘ಸಹಕಾರ ರತ್ನ’ ಅನಿಲ್ ಲೋಬೊ ಉದ್ಘಾಟಿಸಿದರು. ಸುರತ್ಕಲ್‌ನ ಸೇಕ್ರೆಡ್ ಹಾರ್ಟ್ ಚರ್ಚ್‌ ಧರ್ಮಗುರುಗಳಾದ ರೆ| ಫಾ| ಆಸ್ಟಿನ್ ಪೀಟರ್ ಪೆರಿಸ್ ಅವರು ನೂತನ ಆವರಣವನ್ನು ಆಶೀರ್ವಚಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಎಂಸಿಸಿ ಬ್ಯಾಂಕ್ ಲಿಮಿಟೆಡ್, ಮಂಗಳೂರು ಇದರ ಮಾಜಿ ಜನರಲ್ ಮ್ಯಾನೇಜರ್ ಜೋಸೆಫ್ ಕ್ವಾಡ್ರಸ್ ಮತ್ತು ಗೌರವಾನ್ವಿತ ಅತಿಥಿಯಾಗಿ ಉದ್ಯಮಿ ರಾಜೇಶ್ ಶೆಟ್ಟಿಗಾರ್ ಹಾಜರಿದ್ದರು. ಸೇಫ್ ರೂಮನ್ನು ಮುಖ್ಯ ಅತಿಥಿಗಳಾದ ಜೋಸೆಫ್ ಕ್ವಾಡ್ರಸ್ ಉದ್ಘಾಟಿಸಿದರು. ಗೌರವ ಅತಿಥಿಗಳಾದ ರಾಜೇಶ್ ಶೆಟ್ಟಿಗಾರ್ ಇ-ಸ್ಟ್ಯಾಂಪ್ ಸೌಲಭ್ಯವನ್ನು ಉದ್ಘಾಟಿಸಿದರು. ಉದ್ಘಾಟನಾ ಮತ್ತು ರಜತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ಸಹಕಾರ ರತ್ನ’ ಅನಿಲ್ ಲೋಬೊ ವಹಿಸಿದ್ದರು. ಬ್ಯಾಂಕ್‌ನ ಅಧ್ಯಕ್ಷರಾದ ‘ಸಹಕಾರ ರತ್ನ’ ಅನಿಲ್ ಲೋಬೊ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಶಾಖೆಯನ್ನು ನೆಲಮಹಡಿಯಲ್ಲಿ ಹೆಚ್ಚು ಅನುಕೂಲಕರ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಕಳೆದ ವರ್ಷ ನಡೆದ ಗ್ರಾಹಕರ ಸಭೆಯಲ್ಲಿ ಆಡಳಿತ ಮಂಡಳಿ ನೀಡಿದ ಭರವಸೆಯನ್ನು ಸಭೆಗೆ ತಿಳಿಸಿದರು.
ಪಾರ್ಕಿಂಗ್ ಸೌಲಭ್ಯ ಪೂರೈಸಲಾಗಿದ್ದು, ಸದ್ಯ ಎಂಸಿಸಿ ಬ್ಯಾಂಕ್‌ನಲ್ಲಿ ಲಭ್ಯವಿರುವ ಎಲ್ಲಾ ಬ್ಯಾಂಕಿಂಗ್ ಸೇವೆಗಳು – ರಾಷ್ಟ್ರೀಕೃತ ಮತ್ತು ಇತರ ವಾಣಿಜ್ಯ ಬ್ಯಾಂಕ್‌ಗಳಿಗೆ ಸಮಾನವಾಗಿದ್ದು, ಗ್ರಾಹಕರ ಅಗತ್ಯತೆ ಮತ್ತು ಆಶೋತ್ತರಗಳಿಗೆ ಬ್ಯಾಂಕ್ ಸ್ಪಂದಿಸುತ್ತಿದೆ. ಗ್ರಾಹಕರ ಬ್ಯಾಂಕಿಂಗ್ ಅಗತ್ಯಗಳಿಗೆ ಆದ್ಯತೆ ನೀಡುವ ಮೂಲಕ ಹೆಚ್ಚು ಗ್ರಾಹಕ ಕೇಂದ್ರಿತವಾಗಿರಲು ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಬ್ಯಾಂಕನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ ಮತ್ತು ಬ್ಯಾಂಕ್‌ನೊಂದಿಗೆ ನಿಧಿಯ ಸುರಕ್ಷತೆಗಾಗಿ ಠೇವಣಿಗಳನ್ನು ಡಿಐಜಿಸಿಸಿ ವಿಮೆ ಮಾಡಲಾಗಿದೆ. 112 ವರ್ಷಗಳ ಸುಧೀರ್ಘ ಇತಿಹಾಸ ಹೊಂದಿರುವ ಬ್ಯಾಂಕನ್ನು ಬೆಂಬಲಿಸಿ ಬ್ಯಾಂಕ್‌ನ ಪ್ರಗತಿಯೊಂದಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲು ಸಹಕರಿಸುವಂತೆ ಗ್ರಾಹಕರಿಗೆ ಕರೆ ನೀಡಿದರು. ಸದಸ್ಯರು, ಗ್ರಾಹಕರು, ಆಡಳಿತ ಮಂಡಳಿಯವರು ತೋರಿದ ಬೆಂಬಲ ಮತ್ತು ವಿಶ್ವಾಸ ಹಾಗೂ ಸಿಬ್ಬಂದಿ ವರ್ಗದ ಪರಿಶ್ರಮದಿಂದ ತಾವು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾಗಲು ಸಹಕಾರಿಯಾಗಿದೆ ಹಾಗೂ ಬ್ಯಾಂಕ್‌ನ 1000 ಕೋಟಿ ವ್ಯವಹಾರ ವಹಿವಾಟಿನ ಮೈಲಿಗಲ್ಲು ಸಾಧನೆ ಮತ್ತು ಈ ಸಂದರ್ಭದಲ್ಲಿ ಪರಿಚಯಿಸಲಾದ ಕೊಡುಗೆಗಳ ಕುರಿತು ಅವರು ಸಭೆಗೆ ತಿಳಿಸಿದರು.
ನೂತನ ಆವರಣವನ್ನು ಆಶೀರ್ವದಿಸಿದ ರೆ| ಫಾ| ಆಸ್ಟಿನ್ ಪೀಟರ್ ಪೆರಿಸ್ ಅವರು ಶಾಖೆಯನ್ನು ಹೆಚ್ಚಿನ ಅನುಕೂಲಕ್ಕಾಗಿ ಸ್ಥಳಾಂತರಣೆ ಮತ್ತು ಸುರತ್ಕಲ್ ಶಾಖೆಯ ಬೆಳ್ಳಿಹಬ್ಬವನ್ನು ಆಚರಣೆಯ ಸಂದರ್ಭದಲ್ಲಿ ಅಭಿನಂದಿಸಿದರು. ಬ್ಯಾಂಕಿನ ಸುಧಾರಣೆಗಾಗಿ ನವೀನ ಉತ್ಪನ್ನಗಳು ಮತ್ತು ಸೇವೆಗಳನ್ನು ಜಾರಿಗೊಳಿಸುವ ಮೂಲಕ ಬ್ಯಾಂಕ್ ಸ್ಥಿರ ಗತಿಯಲ್ಲಿ ಸಾಗಬೇಕೆಂದು ಅವರು ಕರೆ ನೀಡಿದರು. ಜೋಸೆಫ್ ಕ್ವಾಡ್ರಸ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಗ್ರಾಹಕ ಸ್ನೇಹಿ ವಾತಾವರಣವನ್ನು ಒದಗಿಸಿದ್ದಕ್ಕಾಗಿ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ಬ್ಯಾಂಕಿನ ಬೆಳವಣಿಗೆಯಲ್ಲಿ ಅಧ್ಯಕ್ಷರ ದೂರದೃಷ್ಟಿ ಮತ್ತು ನಾಯಕತ್ವವನ್ನು ಅವರು ಶ್ಲಾಘಿಸಿದರು. ಕಳೆದ 5 ವರ್ಷಗಳಲ್ಲಿ ದ್ವಿಗುಣಗೊಂಡಿರುವ ಬ್ಯಾಂಕಿನ ಹಣಕಾಸು ವಿವರಗಳನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ಶಾಖೆ ಆರಂಭವಾದ ದಿನದಿಂದ ಇಲ್ಲಿಯವರೆಗೂ ಜೊತೆಗಿದ್ದ 25 ಗ್ರಾಹಕರನ್ನು ಬೆಳ್ಳಿಹಬ್ಬದ ಗ್ರಾಹಕರು ಎಂದು ಪರಿಗಣಿಸಿದರು. ಶಾಖೆಯ ಪ್ರಥಮ ವ್ಯವಸ್ಥಾಪಕರಾಗಿದ್ದ ಲೆಸ್ಲಿ ಪಾಯ್ಸ್ ಮತ್ತು ಹಿಂದಿನ ಆವರಣದ ಮ್ಹಾಲಕರಾದ ವಿಜಯ್ ಕುಮಾರ್ ಇಡ್ಯ ಮತ್ತು ಉದಯ ಶಂಕರ್ ರಾವ್ ಹಾಗೂ ನೂತನ ಆವರಣದ ಮ್ಹಾಲಕರಾದ ಕೇಶವ ಸಾಲಿಯಾನ್ ಮತ್ತು ಸಿವಿಲ್ ಇಂಜಿನಿಯರ್ ಕಾರ್ತಿಕ್ ಕಿರಣ್ ಇವರನ್ನು ಗೌರವಿಸಲಾಯಿತು.
ಅಧ್ಯಕ್ಷರು ಮುಖ್ಯ ಅತಿಥಿಗಳು ಮತ್ತು ಗೌರವಾನ್ವಿತ ಅತಿಥಿಗಳನ್ನು ಕೃತಜ್ಞತೆಯ ಸಂಕೇತವಾಗಿ ಸ್ಮರಣಿಕೆ ನೀಡಿ ಗೌರವಿಸಿದರು. ನಿರ್ದೇಶಕರಾದ ಡಾ ಜೆರಾಲ್ಡ್ ಪಿಂಟೊ, ಹೆರಾಲ್ಡ್ ಜಾನ್ ಮೊಂತೇರೊ, ಡೇವಿಡ್ ಡಿಸೋಜಾ, ಮೆಲ್ವಿನ್ ಅಕ್ವಿನಾಸ್ ವಾಸ್, ಸುಶಾಂತ್ ಸಲ್ಡಾನ್ಹಾ, ಫೆಲಿಕ್ಸ್ ಡಿಕ್ರೂಜ್, ಐರಿನ್ ರೆಬೆಲ್ಲೊ, ಜನರಲ್ ಮ್ಯಾನೇಜರ್ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು. ಶಾಖೆಯ ಶಾಖಾ ಸಹಾಯಕ ನಿರ್ದೇಶಕರಾದ ಅನಿಲ್ ಪತ್ರಾವೊ ಸ್ವಾಗತಿಸಿದರು. ಶಾಖಾ ಪ್ರಬಂಧಕಿ ಸುನೀತಾ ಡಿಸೋಜ ವಂದಿಸಿದರು. ಮನೋಜ್ ಫೆರ್ನಾಂಡಿಸ್, ಕಿರೆಂ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು