ಇತ್ತೀಚಿನ ಸುದ್ದಿ
ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಹೆಸರು ಬಳಸಿ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಹೇಳಿಕೆ: ಜಿಎಂ ಸ್ಪಷ್ಟಿಕರಣ
18/12/2024, 19:04
ಮಂಗಳೂರು(reporterkarnataka.com): ಸಾಮಾಜಿಕ ಜಾಲ️ತಾಣದಲ್ಲಿ ಎಂಸಿಸಿ ಬ್ಯಾಂಕಿನ ಅಧ್ಯಕ್ಷರ ಹೆಸರು ಬಳಸಿ ಹರಿದಾಡುತ್ತಿರುವ ತಪ್ಪು ಹೇಳಿಕೆಗಳಿಗೆ ಸ್ಪಷ್ಟಿಕರಣವನ್ನು ಈ ಕೆಳಗಿನಂತೆ ನೀಡಲಾಗಿದೆ.
ವ್ಯಕ್ತಿಯೊಬ್ಬರು ಎಂ.ಸಿ.ಸಿ. ಬ್ಯಾಂಕಿನಿಂದ ಸಾಲ️ವನ್ನು ಪಡೆದಿದ್ದು, ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡದೇ ಇದ್ದರಿಂದ ಸಾಲ️ ವಸೂಲಾತಿಗಾಗಿ ಕಾನೂನಿನ ಅವಕಾಶದಡಿ ವಸೂಲಾತಿ ಕ್ರಮ ಕೈಗೊಳ್ಳಲಾಗಿತ್ತು. ಅದಲ️್ಲದೆ ಸಾಲ️ಗಾರರಿಗೆ ಬಡ್ಡಿಯಲ್ಲಿ ರಿಯಾಯಿತಿ ನೀಡಿ ಸಾಲ️ವನ್ನು ಮರುಪಾವತಿ ಮಾಡಲು ಒಂದು ಅವಕಾಶವನ್ನು ಸಹ ನೀಡಲಾಗಿತ್ತು. ಅದರೂ ಸಾಲ️ಗಾರರು ಸಾಲ️ವನ್ನು ಮರುಪಾವತಿ ಮಾಡಿರುವುದಿಲ್ಲ.
ಸಾಲ️ಗಾರರು ತಮ್ಮ ಉಳಿತಾಯ ಖಾತೆಯನ್ನು ವಯುಕ್ತಿಕ ನೆಲೆಯಲ್ಲಿ ವ್ಯವಹರಿಸುತ್ತಾ ಬಂದಿರುತ್ತಾರೆ. ಅದರಲ್ಲಿ ಯಾರು ಮಧ್ಯ ಪ್ರವೇಶಿಸಿರಿವುದಿಲ್ಲ. ಅವರು ತಮ್ಮ ವೈಯುಕ್ತಿಕ ಸಮಸ್ಯೆಯಿಂದ ಈ ಕೃತ್ಯವನ್ನು ಎಸಗಿದ್ದು, ಅನಾವಶ್ಯಕವಾಗಿ ಬ್ಯಾಂಕಿನ ಅಧ್ಯಕ್ಷರ ಹೆಸರನ್ನು ಬಳಸಿ ಅಧ್ಯಕ್ಷರ ಮತ್ತು ಬ್ಯಾಂಕಿನ ಹೆಸರು ಹಾಳು ಮಾಡುವ ಪ್ರಯತ್ನ ಮಾಡಲಾಗಿದೆ. ಅದ್ದರಿಂದ ಸಾರ್ವಜನಿಕರು ಹಾಗೂ ಬ್ಯಾಂಕಿನ ಗ್ರಾಹಕರು ಸಾಮಾಜಿಕ ಜಾಲ️ತಾಣದಲ್ಲಿ ಹರಿದಾಡುತ್ತಿರುವ ತಪ್ಪು ಹೇಳಿಕೆಗಳಿಗೆ ಕಿವಿಕೊಡಬಾರದಾಗಿ ಬ್ಯಾಂಕಿನ ಮಹಾ ಪ್ರಬಂಧಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.