6:44 PM Wednesday17 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ಮಾಯೊದಪ್ಪೆ ಮಂತ್ರದೇವತೆಗೆ ಮುಹೂರ್ತ: ಕಲಾವಿದೆರ್‌ ಕುಡ್ಲ ತಂಡದಿಂದ ಪೌರಾಣಿಕ ನಾಟಕ

15/06/2022, 20:51

ಮಂಗಳೂರು(reporterkarnataka.com): ಪ್ರಾಪ್ತಿ ಕಲಾವಿದೆರ್‌ ಕುಡ್ಲ ಪ್ರದರ್ಶಿಸಲಿರುವ ಕಲಾ ಸವ್ಯಸಾಚಿ ಪ್ರಶಾಂತ್‌ ಸಿ.ಕೆ. ರಚಿಸಿ ನಿರ್ದೇಶಿಸಿರುವ ಮಾಯೊದಪ್ಪೆ ಮಂತ್ರದೇವತೆ ತುಳು ಪೌರಾಣಿಕ ನಾಟಕದ ಮುಹೂರ್ತ ಕದ್ರಿಮಂಜುನಾಥೇಶ್ವರ ಕ್ಷೇತ್ರದಲ್ಲಿ ನಡೆಯಿತು.

ಪೌರಾಣಿಕ ರಂಗಭೂಮಿಯ ದಿಗ್ಗಜರಾದ ಜಿ.ಕೆ.ರೈ, ಸತೀಶ್‌ ಕದ್ರಿ, ಉದಯ್‌ ಆಚಾರ್‌, ಮಾಧವ ಇರುವೈಲ್‌ ಜತೆ ಸುಹಾನ್‌ ಕುಳಾಯಿ ಮೊದಲಾದ ಯುವ ಕಲಾವಿದರ ಸೇರ್ಪಡೆಯೊಂದಿಗೆ ನಾಟಕ ರಂಗಭೂಮಿ ಪಯಣಕ್ಕೆ ಸಜ್ಜಾಗುತ್ತಿದೆ.


ಮುಹೂರ್ತ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಂಗಭೂಮಿ ನಿರ್ದೇಶಕ ಕಿಶೋರ್‌ ಡಿ.ಶೆಟ್ಟಿ ಮಾತನಾಡಿ, ಪೌರಾಣಿಕ ನಾಟಕದ ಕುರಿತು ಪ್ರೇಕ್ಷಕರ ನಿರೀಕ್ಷೆಯೂ ಬೆಟ್ಟದಷ್ಟಿರುತ್ತದೆ, ಖರ್ಚುವೆಚ್ಚ, ಕಷ್ಟ ನಷ್ಟಗಳೂ ಹೆಚ್ಚು, ಕಷ್ಟ ಪಟ್ಟು ದುಡಿದರೆ ರಂಗಭೂಮಿಯಲ್ಲಿ ಹೆಸರು ಅಚ್ಚಳಿಯದೆ ಉಳಿಯುತ್ತದೆ ಎಂದರು.

ಉದ್ಘಾಟಿಸಿದ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಮಾತನಾಡಿ, ಸಮೃದ್ಧವಾದ ತುಳು ರಂಗಭೂಮಿಯಲ್ಲಿ ಯುವ ಕಲಾವಿದರಿಗೆ, ಪ್ರಯೋಗಶೀಲರಿಗೆ ಹೆಚ್ಚಿನ ಅವಕಾಶ ಇದೆ, ಇದನ್ನು ಇತ್ತೀಚೆಗೆ ಪೌರಾಣಿಕ ನಾಟಕಗಳು ಮಾಡುತ್ತಿರುವ ಪ್ರದರ್ಶನಗಳ ದಾಖಲೆಯೇ ಹೇಳುತ್ತದೆ ಎಂದರು.

ಕ್ಯಾಟ್ಕ ಸಂಘದ ಅಧ್ಯಕ್ಷ ಮೋಹನ ಕೊಪ್ಪಲ ಮಾತನಾಡಿ, ಕರೋನಾ ಬಳಿಕ ಕಲಾವಿದರಿಗೆ ಮತ್ತೆ ಒಳ್ಳೆಯ ಅವಕಾಶಗಳು ಸಿಗುತ್ತಿದ್ದು, ಸದುಪಯೋಗಪಡಿಸಿಕೊಳ್ಳಿ, ನಾಟಕ ಅತಿ ಹೆಚ್ಚು ಪ್ರದರ್ಶನಗಳನ್ನು ನೀಡಲಿ ಎಂದು ಹಾರೈಸಿದರು.

ನಿರ್ದೇಶಕ ಪ್ರಶಾಂತ್‌ ಸಿ.ಕೆ. ಸ್ವಾಗತಿಸಿದರು. ವಿಜೆ ಮಧುರಾಜ್‌ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು