9:21 PM Tuesday19 - August 2025
ಬ್ರೇಕಿಂಗ್ ನ್ಯೂಸ್
ಮಟ್ಟು ಗುಳ್ಳ ನಂಟು ಉಡುಪಿ ಮಠಕ್ಕೂ ಉಂಟು: ವಾದಿರಾಜ ತೀರ್ಥರು ಬದನೆಗೆ ಹೆಸರಿಟ್ಟರಂತೆ! Kodagu | ಸೋಮವಾರಪೇಟೆ: ಯುವಕನ ಆತ್ಮಹತ್ಯೆ; 3 ದಿನಗಳ ಹುಡುಕಾಟದ ಬಳಿಕ ಮೃತದೇಹ… ರಾಜ್ಯದ ಮೊದಲ ‘ವಿದೇಶ ಅಧ್ಯಯನ ಎಕ್ಸ್‌ಪೋ’ ಯಶಸ್ವಿ: 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು… ಸಂಸೆ ಯುವಕ ಆತ್ಮಹತ್ಯೆ ಪ್ರಕರಣ: ಕುದುರೆಮುಖ ಪೊಲೀಸ್ ಕಾನ್ ಸ್ಟೇಬಲ್ ಸಿದ್ದೇಶ್ ಗೋವಾದಲ್ಲಿ… ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆ: ಶೃಂಗೇರಿ ಅಕ್ಷರಶಃ ಜಲಾವೃತ; ನಾಳೆ ಶಾಲೆಗಳಿಗೆ ರಜೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಅಬ್ಬರ: ಮಲೆನಾಡು ಅಕ್ಷರಶಃ ಜಲಾವೃತ ಆರ್‌ಎಸ್‌ಎಸ್‌ನ್ನು ತಾಲಿಬಾನಿಗೆ ಹೋಲಿಸುತ್ತಿರುವ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಬಿಜೆಪಿಯವರಿಗೆ ರಾಜಕಾರಣಕ್ಕಾಗಿ ಧರ್ಮಸ್ಥಳ ಬೇಕಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ ವಿರಾಜಪೇಟೆ: ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿ; ನಾಡಿನಲ್ಲಿ ಬೀಡು ಬಿಟ್ಟಿದ್ದ 10ಕ್ಕೂ ಅಧಿಕ… ‘ಧರ್ಮಸ್ಥಳ ವಿರುದ್ಧ ಷಡ್ಯಂತರʼ ರಾಜ್ಯ ಸರ್ಕಾರದ್ದೇ?: ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಕೇಂದ್ರ ಸಚಿವ…

ಇತ್ತೀಚಿನ ಸುದ್ದಿ

ಮಟ್ಟು ಗುಳ್ಳ ನಂಟು ಉಡುಪಿ ಮಠಕ್ಕೂ ಉಂಟು: ವಾದಿರಾಜ ತೀರ್ಥರು ಬದನೆಗೆ ಹೆಸರಿಟ್ಟರಂತೆ!

19/08/2025, 21:13

ಗಿರಿಧರ್ ಕೊಂಪುಳಿರ ಉಡುಪಿ

info.reporterkarnata@gmaill.com

ಉಡುಪಿ ಜಿಲ್ಲೆಯ ಮಟ್ಟು ಗ್ರಾಮದಲ್ಲಿ ಹುಟ್ಟಿ ಕರಾವಳಿ ಭಾಗದ ತರಕಾರಿ ಸಾಂಬಾರಿಗೆ ಇನ್ನಷ್ಟು ರುಚಿ ತಂದ ಮಟ್ಟು ಬದನೆ, ಅರ್ಥತ್ ಉಡುಪಿ ಬದನೆಗೆ ಶತಮಾನಗಳ ಇತಿಹಾಸವಿದೆ.
ಈ ಬದನೇಕಾಯಿ ಬಗ್ಗೆ ತಿಂದು ಗೊತ್ತಿರಬಹುದೆ ಹೊರತು, ಅದಕ್ಕೆ ಒಂದು 300-400 ವರ್ಷಗಳ ಇತಿಹಾಸವಿದೆ ಎಂದು ಬಳಷ್ಟು ಮಂದಿಗೆ ಗೊತ್ತಿಲ್ಲ, ಅದರಲ್ಲೂ ಉಡುಪಿ ಮಠದ ನಂಟು ಖಂಡಿತ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಹಸಿರು ಬಣ್ಣದ ಚೆಂಡಿನ ಆಕಾರದ ಈ ಬದನೆ ಜೀವ ಪಡೆದದ್ದು ಉಡುಪಿ ಜಿಲ್ಲೆಯ ಮಟ್ಟು ಗ್ರಾಮದಲ್ಲಿ. 16ನೇ ಶತಮಾನದಲ್ಲೇ ಕ್ರಾಂತಿ ಮಾಡಿರುವ ಈ ಬದನೇಕಾಯಿ ತಳಿ ತರಕಾರಿ ಸಾಂಬಾರುಗೆ ಅದ್ಭುತ ರುಚಿ ನೀಡುತ್ತಿತ್ತು, ಒಮ್ಮೆ ಉಡುಪಿಯ ಸೋದೆ ಮಠದ ಶ್ರೀ ವಾದಿರಾಜ ತೀರ್ಥರು ಈ ಭಾಗದಲ್ಲಿ ಯಾತ್ರೆ ಮಾಡುತ್ತಿದ್ದ ಸಂದರ್ಭ ಈ ಭಾಗದಲ್ಲಿ ಬೆಳೆಯುವ ಈ ಬದನೆಯ ಪರಿಚಯ ಅವರಿಗಾಯಿತು. ಅಪರೂಪದ ಬದನೆ ತಳಿಯನ್ನು ಹೆಚ್ಚು ಬೆಳೆಸುವಂತೆ ರೈತರಿಗೆ ಪ್ರೋತ್ಸಾಹ ನೀಡಿದರಲ್ಲದೆ ಬೆಳೆಯುವ ಪದ್ಧತಿ ಅರಿತ ಯತಿಗಳು, ಗೊಬ್ಬರ ಈ ಬದನೆಗೆ ಅವಶ್ಯಕತೆ ಇರುವುದರಿಂದ ಉದ್ಯಾವರ ನದಿ ಮತ್ತು ಸ್ವರ್ಣ ನದಿ ತಟದಲ್ಲಿ ಹೆಚ್ಚಾಗಿ ಬೆಳೆಯುವಂತಾಗಲಿ ಎಂದು ರೈತರಿಗೆ ಆಶೀರ್ವದಿಸಿದರಂತೆ, ಅದ್ರಂತೆ ಮಟ್ಟು ಗ್ರಾಮದ ಬ್ರಾಂಡ್ ಆಗಿದ್ದ ಕಾರಣ ಗುಂಡಾಕರ ಈ ಬದನೇಕಾಯಿಗೆ ಮಟ್ಟು ಗುಳ್ಳ (ಗೋಲಾಕಾರ) ಎಂದು ನಾಮಕರಣ ಮಾಡಿದರಂತೆ, ಅದೇ ರೀತಿ ಸುಮಾರು 500 ಎಕರೆಗಳಲ್ಲಿ ಅಂದಿನ ಕಾಲದಲ್ಲೇ ರೈತರು ಬೆಳೆದು ಕ್ರಾಂತಿ ಮಾಡಿದರು ಎಂದು ಎಂದು ಸ್ಥಳೀಯ ಬೆಳೆಗಾರರು ಇಂದಿಗೂ ಹೇಳುತ್ತಾರೆ. ಅದಲ್ಲದೆ ಕೆಲವೆಡೆ ಇಂದಿಗೂ ವಾದಿರಾಜ ಗುಳ್ಳ ಎಂದೂ ಪ್ರಚಲಿತದಲ್ಲಿದೆ.
ವಾದಿರಾಜರು ಸುಬ್ರಮಣ್ಯ ಕ್ಷೇತ್ರಕ್ಕೆ ಯಾತ್ರೆ ಮಾಡುತ್ತಿದ್ದ ಸಂದರ್ಭದಲ್ಲಿ ಮಟ್ಟುವಿನಲ್ಲಿ ನಡೆದ ಕೃಷಿ ಕ್ರಾಂತಿ ಕನ್ನಡ ಜಿಲ್ಲೆಗೂ ಮುಟ್ಟುವಂತೆ ಬದನೆಯನ್ನು ಪರಿಚಯಿಸಿದರು. ಅಂದಿನ ವಾದಿರಾಜ ಯತಿಗಳ ಮಟ್ಟು ಬದನೆ ಕೃಷಿ ಕ್ರಾಂತಿಗೆ, 2011ರಲ್ಲಿ ಅಸಾಮಾನ್ಯ ರುಚಿ ಮತ್ತು ವಿಶಿಷ್ಟ ತಳಿ, ಮತ್ತು ವಿಶೇಷ ಸ್ಥಳಕ್ಕೆ ಭೌಗೋಳಿಕ ಸ್ಥಾನ ಮಾನ ದೊರೆತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು