8:39 PM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಮಠ ಪರಂಪರೆಯ ಮಖಣಾಪುರದ ಶ್ರೀ ಗುರು ಸೋಮಲಿಂಗೇಶ್ವರ ದೇಗುಲ: 11ನೇ ಗುರು ಶ್ರೀ ದೇವೇಂದ್ರ ಒಡೆಯಾರ್ ಸ್ವಾಮೀಜಿ

25/10/2021, 11:59

ಭೀಮಣ್ಣ ಪೂಜಾರಿ ಶಿರನಾಳ ವಿಜಯಪುರ
info.reporterkarnataka@gmail.com

ರಾಜ್ಯದ ಮಠ ಪರಂಪರೆಯ ದೇವಸ್ಥಾನಗಳಲ್ಲಿ ವಿಜಯಪುರ ಜಿಲ್ಲೆಯ ಮಖಣಾಪುರದ ಶ್ರೀ ಗುರು ಸೋಮಲಿಂಗೇಶ್ವರ ದೇವಸ್ಥಾನ ಕೂಡ ಒಂದು. ಈ ದೇಗುಲಕ್ಕೆ ಸುಮಾರು 2 ಸಾವಿರ ಇತಿಹಾಸವಿದ್ದರೆ, ಗುರುಪೀಠಕ್ಕೆ, ಮಠ ಪರಂಪರೆಗೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಈಗಲಾಗಲೇ 10 ತಲೆಮಾರುಗಳನ್ನು ಕಂಡ ಮಠದಲ್ಲಿ 11ನೇ ಗುರುಗಳಾಗಿ ಶ್ರೀ ದೇವೇಂದ್ರ ಒಡೆಯಾರ್ ಸ್ವಾಮೀಜಿ ಕಾರ್ಯಭಾರ ನಡೆಸುತ್ತಿದ್ದಾರೆ.

ಭಕ್ತರ ಇಷ್ಟಾರ್ಥ ನೆರವೇರಿಸುವ ಸೋಮಲಿಂಗ ಜತೆಗೆ ಶ್ರೀ ದೇವೇಂದ್ರ ಒಡೆಯಾರ್ ಸ್ವಾಮೀಜಿ ಭಕ್ತ ಸೇವೆಯಿಂದ ಆರಂಭಗೊಂಡು ಭಕ್ತಿ ಸೇವೆಯನ್ನು ವಿಧಿವತ್ತಾಗಿ ನಡೆಸುತ್ತಿದ್ದಾರೆ. ಇದರಿಂದಲೇ ಒಡೆಯಾರ್ ಸ್ವಾಮೀಜಿ ಅಂದ್ರೆ ನಾಡಿನುದ್ಧಗಲಕ್ಕೂ ಪ್ರಸಿದ್ಧಿ ಮತ್ತು ಭಕ್ತರಿಗೆ ಅಚ್ಚುಮೆಚ್ಚು.

ದೇವಾಲಯದಲ್ಲಿ ಸೋಮೇಶ್ವರನಿಗೆ ನಿತ್ಯ ಪೂಜೆ ನಡೆಯುತ್ತದೆ. ಹಾಗೆ ಮಠದಲ್ಲಿ ಗುರುಪೀಠದ ಸೇವೆ, ನಿತ್ಯ ಪೂಜೆ ಸಾಂಗವಾಗಿ ನಡೆಯುತ್ತಿದೆ.

ಮಠದಲ್ಲಿ ಭಕ್ತರಿಗೆ ಸ್ವಾಮೀಜಿ ಪ್ರತಿ ದಿನ ಸಂಜೆ ದರ್ಶನ ಕೊಡುತ್ತಾರೆ. ಹರಕೆ ಹೊತ್ತ ಭಕ್ತರು ಇಲ್ಲಿಗೆ ಬಂದು ಗುರುಗಳ ಪಾದಪೂಜೆ ನೆರವೇರಿಸುತ್ತಾರೆ. ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಗುರುಗಳು ಸೋಮಲಿಂಗನಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಈಗಿನ 11ನೇ ತಲೆಮಾರಿನ ಶ್ರೀ ದೇವೇಂದ್ರ ಒಡೆಯಾರ್ ಸ್ವಾಮೀಜಿ ಅವರು ಗುರುಪೀಠವನ್ನು ಅಲಂಕರಿಸಿದ ಬಳಿಕ ಪೀಠಕ್ಕೆ ಹೊಸ ಕಳೆ ಬಂದಿದೆ. 10 ತಲೆಮಾರಿನಿಂದ ಹಿಂದಿನ ಗುರುಗಳು

ಮಠದಲ್ಲಿ ನಡೆದುಕೊಂಡು ಬರುತ್ತಿರುವ ಎಲ್ಲ ಧಾರ್ಮಿಕ ವಿಧಿ ವಿಧಾನಗಳನ್ನು ಶ್ರೀ ದೇವೇಂದ್ರ ಒಡೆಯಾರ್ ಸ್ವಾಮೀಜಿ ಚಾಚು ತಪ್ಪದೆ ಪಾಲಿಸಿ ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ. ಸಂಸಾರ ಪೀಠವಾದ ಇಲ್ಲಿನ ಮಠದ ದೇವೇಂದ್ರ ಒಡೆಯಾರ್ ಸ್ವಾಮೀಜಿ ದೇವರ ಮತ್ತು ಭಕ್ತರ ಇಷ್ಟಾರ್ಥಕ್ಕನುಗುಣವಾಗಿ ಮಠವನ್ನು ಮುನ್ನಡೆಸುತ್ತಿದ್ದಾರೆ.

ಸ್ವಾಮೀಜಿಯವರು ಸೋಮಲಿಂಗೇಶ್ವರನ ಅಪ್ಪಣೆಯಂತೆ ಅನಾಥರಿಗೆ ಆಶ್ರಮ ನಿರ್ಮಿಸಿದ್ದಾರೆ. ಅದರ ಜತೆಗೆ ಶಿವನ ಬೃಹತ್ ಲಿಂಗವನ್ನು ಪ್ರತಿಷ್ಠಾಪಿಸುವ ಸಂಕಲ್ಪ ಹೊಂದಿದ್ದಾರೆ. ಸುಮಾರು ಒಂದು ಎರಕೆ ಪ್ರದೇಶದಲ್ಲಿ 108 ಅಡಿ ಎತ್ತರದ ಬೃಹತ್ ಶಿವಲಿಂಗ ತಲೆ ಎತ್ತಿ ಇಡೀ ವಿಜಯಪುರ ಜಿಲ್ಲೆ ಮಾತ್ರವೇಕೆ ಇಡೀ ರಾಜ್ಯವನ್ನು ಪಾವನಗೊಳಿಸಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು