ಇತ್ತೀಚಿನ ಸುದ್ದಿ
ಮಸ್ಕಿಯ ಅಶೋಕ ದೇವನಾಂಪ್ರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಟ್ಯಾಬ್ ವಿತರಣೆ
25/06/2021, 07:17
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗಿ
info.reporterkarnataka@gmail.com
ಮಸ್ಕಿಯ ಅಶೋಕ ದೇವನಾಂಪ್ರಿಯ ಸ್ನಾತಕೋತ್ತರ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಶಾಸಕರಿಂದ ಸ್ಮಾರ್ಟ್ ಟ್ಯಾಬ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಶಾಸಕ ಬಸವನಗೌಡ ತುರುವಿಹಾಳ, ವಿದ್ಯಾರ್ಥಿಗಳಿಗಾಗಿ ಸರಕಾರದಿಂದ ಆನ್ಲೈನ್ ಕ್ಲಾಸ್ ಇರುವುದರಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅನುಕೂಲ ಆಗಲಿ ಎಂದು ಹೇಳಿದರು.

ಪ್ರಿನ್ಸಿಪಾಲ್ ಪಂಪನಗೌಡ ಪಾಟೀಲ್ ಮಾತನಾಡಿ, ವಿದ್ಯಾರ್ಥಿ ಜೀವನಕ್ಕಾಗಿ ಸರಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್ ಟ್ಯಾಬ್ ಗಳನ್ನು ನೀಡುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಆನ್ಲೈನ್ ಕ್ಲಾಸುಗಳನ್ನು ಚೆನ್ನಾಗಿ ಮಾಡಿ ಜೀವನದಲ್ಲಿ ಮುಂದೆ ಬರಬೇಕು. ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕೆಂದು ನುಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ವೀರೇಶ್ ಮತ್ತು ಗಿರಿಜಾ ಮೇಡಂ ಸೇರಿದಂತೆ ಇನ್ನಿತರ ಉಪನ್ಯಾಸಕರು ಸೇರಿದಂತೆ ಮುಖಂಡರು ಭಾಗವಹಿಸಿದ್ದರು.














