7:46 PM Tuesday25 - November 2025
ಬ್ರೇಕಿಂಗ್ ನ್ಯೂಸ್
ಗಗನಯಾನಿಯಾಗಲು ದೈಹಿಕ, ಮಾನಸಿಕ ಆರೋಗ್ಯ ಬಹಳ ಮುಖ್ಯ: ಶುಭಾಂಶು ಶುಕ್ಲಾ Kodagu | ಅಪಘಾತಕ್ಕೆ ಈಡಾಗಿ ಗಂಭೀರ ಸ್ಥಿತಿಯಲ್ಲಿ ಪುತ್ರ: ನೊಂದ ತಾಯಿ ಕೆರೆಗೆ… ಅಕ್ರಮ‌ ಆಸ್ತಿ ಸಂಪಾದನೆ ಆರೋಪ: ಕೊಡಗು ಪಿಡಬ್ಲ್ಯುಡಿ ಎಂಜಿನಿಯರ್ ಕಚೇರಿ, ಮನೆ ಮೇಲೆ… Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಗೆ ನ.28ರಂದು ಪ್ರಧಾನಿ ಮೋದಿ ಭೇಟಿ: ಸಾರ್ವತ್ರಿಕ ರಜೆ ಘೋಷಿಸಲು ಶಾಸಕ ಯಶ್… ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ನಿಧನ: ಭಾರತೀಯ ಚಿತ್ರರಂಗದ ‘ಹೀ-ಮ್ಯಾನ್’ಗೆ ವಿದಾಯ ನಾನೇ 5 ವರ್ಷ ಸಿಎಂ ಎಂದು ಎದೆಬಡಿದುಕೊಳ್ಳುವ ಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು: ಬಸವರಾಜ… ಗೋಣಿಕೊಪ್ಪಲು ಸಮೀಪದ ಕೈಕೇರಿ ಬಳಿ ಹಿಟ್ ಅಂಡ್ ರನ್ ಕೇಸ್: ಅಪರಿಚಿತ ವ್ಯಕ್ತಿ… ಐಸಿಡಿಎಸ್ ಸುವರ್ಣ ಮಹೋತ್ಸವ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಆಹ್ವಾನ ನೀಡಿದ ಸಚಿವೆ ಲಕ್ಷ್ಮೀ…

ಇತ್ತೀಚಿನ ಸುದ್ದಿ

ಮಸ್ಕಿಯಲ್ಲಿ ಎಲ್ಲ ತಾಲೂಕು ಮಟ್ಟದ ಕಚೇರಿಗಳ ಆರಂಭ; ಕಂದಾಯ ಸಚಿವ ಸದನದಲ್ಲಿ ಭರವಸೆ: ಶಾಸಕ ತುರುವಿಹಾಳ

23/09/2021, 07:53

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ತಾಲೂಕು ಕೇಂದ್ರವಾಗಿ ಮಸ್ಕಿಯಲ್ಲಿ ಶೀಘ್ರದಲ್ಲಿ ಉಳಿದ ಎಲ್ಲ ತಾಲೂಕು ಮಟ್ಟದ ಕಚೇರಿಗಳು ಆರಂಭಿಸಲು ಸರಕಾರ ಕ್ರಮ ಕೈಗೊಂಡಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಸದನದಲ್ಲಿ ತಮಗೆ ಭರವಸೆ ನೀಡಿದ್ದಾರೆ ಎಂದು ಶಾಸಕ ಆರ್. ಬಸವನಗೌಡ ತುರುವಿಹಾಳ ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಹೊಸ ತಾಲೂಕು ಆರಂಭ ಹಿನ್ನೆಲೆಯಲ್ಲಿ 3 ತಾಲೂಕಿನ ಹಳ್ಳಿಗಳು ಒಳಗೊಂಡಿದ್ದು ನೂತನ ತಾಲೂಕಿಗೆ ಕಚೇರಿಗಳ ಒತ್ತಾಯಿಸಿದ್ದು ಸಾರ್ವಜನಿಕರು ತಮ್ಮ ಕೆಲಸಕಾರ್ಯಗಳಿಗೆ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಇನ್ನುಳಿದ ಆಡಳಿತ ಕಚೇರಿಗಳ ಆರಂಭದ ಜತೆಗೆ ಮಿನಿ ವಿಧಾನಸೌಧ ನಿರ್ಮಾಣಕ್ಕೂ ಸರಕಾರ ಮುಂದಾಗಬೇಕೆಂದು ಸರಕಾರಕ್ಕೆ ಒತ್ತಾಯಿಸಿದ್ದರು.

ಸರಕಾರ ಸಚಿವ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಉಳಿದ ತಾಲೂಕು ಕಚೇರಿಗಳ ಆರಂಭದ ಜತೆಗೆ ಮಿನಿ ವಿಧಾನಸೌಧ ನಿರ್ಮಾಣಕ್ಕೂ ಕ್ರಮಕೈಗೊಳ್ಳುವುದಾಗಿ ಕಂದಾಯ ಸಚಿವ ಆರ್ ಅಶೋಕ್ ಭರವಸೆ ನೀಡಿದ್ದಾರೆ. ನೂತನ ತಾಲೂಕಿನಲ್ಲಿ ಅಗತ್ಯವಿರುವ ಕಚೇರಿಗಳನ್ನು ಬೇಗ ಆರಂಭಿಸುವುದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ ಸದನದಲ್ಲಿ ಹೇಳಿದರು. 

ಇತ್ತೀಚಿನ ಸುದ್ದಿ

ಜಾಹೀರಾತು