9:34 AM Saturday17 - January 2026
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಕಾನೂನು ಶಾಲೆಗೆ ರಾಜ್ಯಪಾಲ ಗೆಹ್ಲೋಟ್ ಚಾಲನೆ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸರ್ವ ಸಜ್ಜು: ಜ.18ರಂದು ಶೋಭಾ ಯಾತ್ರೆ; ಶೀರೂರು ಶ್ರೀಗಳಿಂದ… ಕೊಡಗಿನ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.…

ಇತ್ತೀಚಿನ ಸುದ್ದಿ

ಮಸ್ಕಿ ಶ್ರೀ ಕರಿಬಸವೇಶ್ವರ ಜಾತ್ರಾ ಮಹೋತ್ಸವ: ರೈತ ಜಾತ್ರೆ ಮತ್ತು ಕೃಷಿ ಮೇಳ

11/08/2025, 20:44

ಮಸ್ಕಿ ಶ್ರೀ ಕರಿಬಸವೇಶ್ವರ ಜಾತ್ರಾ ಮಹೋತ್ಸವ: ರೈತ ಜಾತ್ರೆ ಮತ್ತು ಕೃಷಿ ಮೇಳ

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com

ಮಸ್ಕಿ ತಾಲೂಕಿನ ಗುಡೂರು ಶ್ರೀ ಕರಿಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ರೈತ ಜಾತ್ರಾ ಕೃಷಿ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮದಲ್ಲಿ ಮೊದಲಿಗೆ ಶಿವನ ವಾಹನ ನಂದಿ ಸ್ವರೂಪದ ಎತ್ತುಗಳಗನ್ನು ವರ್ಣರಂಜಿತವಾಗಿ ಸಿಂಗರಿಸಿಕೊಂಡು ಬಾಜಾ- ಭಜಂತ್ರಿ, ಮಹಿಳೆಯರು ಕಳಸ ಹಾಗೂ ನೂರಾರು ಶಾಲಾ ಮಕ್ಕಳ ಜಯ ಘೋಷಣೆಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೋಡೆತ್ತುಗಳ ಮೆರವಣಿಗೆ ಮಾಡಲಾಯಿತು.
ನಂತರ ದಿ. ತಿಮ್ಮನಗೌಡ ಪಾಟೀಲ್ ವೇದಿಕೆಯಲ್ಲಿ ರೈತ ಜಾತ್ರೆ ಕಾರ್ಯಕ್ರಮವನ್ನು ವಿಶೇಷವಾಗಿ ಗೋಮಾತೆಗೆ ಪೂಜೆ ಸಲ್ಲಿಸುವ ಮುಖಾಂತರ ಉದ್ಘಾಟನೆ ಮಾಡಲಾಯಿತು.
ದಿವ್ಯ ಸಾನಿಧ್ಯವನ್ನು ಯದ್ದಲದೊಡ್ಡಿಯ ಶ್ರೀ ಮ.ನಿ.ಪ್ರ ಮಹಾಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಬಸವರಾಜ ಬಿರಾದಾರ್ ಅವರು ಜೋಡೆತ್ತಿನ ಕೃಷಿ ಉಳಿದರೆ ಮಾತ್ರ ನಾಗರಿಕತೆ ಉಳಿಯಲು ಸಾಧ್ಯ. ಜೋಡೆತ್ತುಗಳನ್ನು ಹೊಂದಿರುವಂತ ರೈತರಿಗೆ ಸರ್ಕಾರವು ಮಾಸಿಕವಾಗಿ 11,000 ರೂಪಾಯಿ ಧನ ಸಹಾಯ ನೀಡುವ ಮೂಲಕ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು. ಜೋಡೆತ್ತಿನ ಕೃಷಿ ಮುಂಬರುವ ಚುನಾವಣೆಗಳ ಮುಖ್ಯ ವಿಷಯ ಆಗಲಿ ಎಂದು ಹೇಳಿದರು.
ಡಾ.ಬಸವಣ್ಣೆಪ್ಪ ಪ್ರಾಧ್ಯಾಪಕರು ಮಾತನಾಡಿ ಸಮಗ್ರ ಕೃಷಿಯ ಜೊತೆಗೆ ಸಾವಯವ ಕೃಷಿಯನ್ನು ಅಳವಡಿಸಿಕೊಂಡರೆ ರೈತರ ಆರ್ಥಿಕ ಮಟ್ಟವನ್ನು ದ್ವಿಗುಣಗೊಳಿಸುವ ಮೂಲಕ ರೈತರು ಸ್ವಾವಲಂಬಿಗಳಾಗಬಹುದು ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಡಾ.ವಾಣಿಶ್ರೀ ಯವರು ಆಹಾರದಲ್ಲಿ ಸಿರಿಧಾನ್ಯಗಳ ಬಳಕೆ ಹಾಗೂ ಮಹತ್ವ ತಿಳಿಸಿದರು.
ಡಾ. ಶಶಿಧರ ಸೊಪ್ಪಿಮಠ ರವರು ಪ್ರಾಣಿಗಳಿಗೆ ಪ್ರಥಮ ಚಿಕಿತ್ಸೆ ನೀಡುವ ವಿಧಾನ ಮತ್ತು ಪ್ರಾಣಿಗಳಿಂದ ನಮಗೆ ತೊಂದರೆಯಾದಾಗ ಮಾಡಬೇಕಾದ ಪ್ರಥಮ ಚಿಕಿತ್ಸಾ ಕ್ರಮಗಳನ್ನು ತಿಳಿಸಿದರು.
ಪ್ರಗತಿಪರ ರೈತರಾದ ಸೋಮನಗೌಡ ಮಾವಿನ ಮಡಗು ಮತ್ತು ಶರಣೇಗೌಡ ಕೆ.ಬಸಾಪುರ ಸಾವಯವ ಕೃಷಿ, ಮಿಶ್ರ ಬೆಳೆಗಳ ಪದ್ಧತಿ ಹಾಗೂ ಹೈನುಗಾರಿಕೆ ಮಹತ್ವಗಳ ಬಗ್ಗೆ ತಿಳಿಸಿದರು. ವೇದಿಕೆ ಮೇಲಿದ್ದ ಕೃಷಿ ತಜ್ಞರೊಂದಿಗೆ ರೈತರು ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಮತ್ತು ಕೃಷಿಯಲ್ಲಿ ಸಾಧನೆಗೈದ ರೈತರನ್ನು ಸನ್ಮಾನಿಸಲಾಯಿತು.
ಪ್ರಾಸ್ತಾವಿಕ ನುಡಿಯನ್ನು ಶಿವಕುಮಾರ ಹಿರೇಮಠ ಮಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಸೋಮಶೇಖರ ಪಾಟೀಲ್ ಶಿಕ್ಷಕರು, ಸ್ವಾಗತವನ್ನು ಶಂಕರಗೌಡ ಪಾಟೀಲ್ ಶಿಕ್ಷಕರು, ವಂದನಾರ್ಪಣೆಯನ್ನು ತಿರುಪತಿ ಮಿಲ್ಟ್ರಿ ಯವರು ನಿರ್ವಹಿಸಿದರು.
ವಿಶೇಷವಾಗಿ ಈ ರೈತ ಮೇಳದಲ್ಲಿ ಕೃಷಿಗೆ ಸಂಬಂಧಿಸಿದ ಪುರಾತನ ಸಾಮಗ್ರಿಗಳ ಸಂಗ್ರಹದ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಭಾರತೀ ಹಿರೇಮಠ ಶಿವಕುಮಾರ್ ವಕೀಲರು ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು