ಇತ್ತೀಚಿನ ಸುದ್ದಿ
ಮಸ್ಕಿ: ಸತ್ಯಧ್ವನಿ ಪತ್ರಿಕೆ 4ನೇ ವರ್ಷದ ವಿಶೇಷಾಂಕ ಅನಾವರಣ; ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಶುಭ ಹಾರೈಕೆ
28/11/2021, 09:35
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗಿ ರಾಯಚೂರು
info.reporterkarnataka@gmail.com
ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕಾ ರಂಗಕ್ಕೆ ತನ್ನದೆಯಾದ ಇತಿಹಾಸವಿದೆ. ಸಮಾಜದಲ್ಲಿ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ. ಸಮಾಜದಲ್ಲಿ ಪತ್ರಿಕಾರಂಗಕ್ಕೆ ದೊಡ್ಡ ಗೌರವ ಇದೆ ಮತ್ತು ಪತ್ರಿಕೆಯು ನೊಂದವರ ಧ್ವನಿಯಾಗಬೇಕು ಎಂದು ಮಸ್ಕಿಯ ಶ್ರೀ ಷಟಸ್ಥಲ ಬ್ರಹ್ಮ ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಅಂತರಗಂಗೆ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ್ ಸಾರಥ್ಯದಲ್ಲಿ ಮೂಡಿಬರುವ ಸತ್ಯಧ್ವನಿ ಪತ್ರಿಕೆ 4ನೇ ವರ್ಷದ ವಿಶೇಷಾಂಕ ಅನಾವರಣಗೊಳಿಸಿ ಮಾತನಾಡಿದರು.
ಸಮಾಜ ಮೆಚ್ಚುವಂತಹ ಸತ್ಯ ಅಂಶಗಳ ಸುದ್ದಿಗಳು ಪತ್ರಿಕೆಯಿಂದ ಹೊರ ಬಂದಾಗ ಪತ್ರಿಕೆಗೆ ಗೌರವ ಸಿಗುತ್ತದೆ. ಅಂತಹ ನಿಟ್ಟಿನಲ್ಲಿ ಅಂತರಗಂಗೆ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ್ ಸಾರಥ್ಯದಲ್ಲಿ ಮೂಡಿಬರುವ ಸತ್ಯ ಧ್ವನಿ ಪತ್ರಿಕೆ ಕೆಲಸ ಮಾಡುತ್ತಿದೆ. ಸಾಲಿಮಠ ಅವರಿಂದ ಒಳ್ಳೆಯ ಸುದ್ದಿಗಳು ಸಮಾಜದಲ್ಲಿ ಬಿತ್ತರವಾಗಲಿ. ಸಮಾಜದಲ್ಲಿ ಒಳ್ಳೆಯ ಹೆಸರು ಪಡೆದುಕೊಳ್ಳಲಿ ಎಂದು ಹಾರೈಸಿದರು.
ಸಮಾಜದ ಅಧ್ಯಕ್ಷ ಸಿದ್ದಲಿಂಗಯ್ಯ ಸ್ವಾಮಿ ಸತ್ಯ ಮಠ ಮಾತನಾಡಿ, ನಮ್ಮ ಸಮಾಜದ ಪತ್ರಿಕೆಯ ಸಂಪಾದಕರಿಗೆ ಶುಭವಾಗಲಿ. ಸಮಾಜ ಮೆಚ್ಚುವಂತ ವರದಿಗಳು ಸತ್ಯ ಧ್ವನಿ ದಿನಪತ್ರಿಕೆಯಿಂದ ಹೊರಬರಲಿ ಎಂದರು.
ಸಮಾಜ ಹಾಗೂ ಪತ್ರಿಕೆಯ ಪರವಾಗಿ ಗಣ ಮಠದಯ್ಯ ಸ್ವಾಮಿ ಸಾಲಿಮಠ ಮಾತನಾಡಿ,ಪತ್ರಿಕಾರಂಗವೂ ತನ್ನದೆಯಾದ ಇತಿಹಾಸವನ್ನು ಒಳಗೊಂಡಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೆಗಳಲ್ಲಿ ನಿಖರ ಮತ್ತು ನೈಜ ಸುದ್ದಿಗಳು ಮೂಡಿದಾಗ ಸಮಾಜದಲ್ಲಿ ಪತ್ರಿಕೆಗಳಿಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಂಗಮ ಸಮಾಜ ಯುವ ಮುಖಂಡರು, ಸದಸ್ಯರು, ವೀರಶೈವ ಧರ್ಮದ ಮಸ್ಕಿಯ ಮುಖಂಡರು ಭಾಗವಹಿಸಿದ್ದರು.