ಇತ್ತೀಚಿನ ಸುದ್ದಿ
ಮಸ್ಕಿಯ ಕೂಲಿ ಕಾರ್ಮಿಕನ ಪುತ್ರಿಯ ಸಾಧನೆ: ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕಮಲಾಕ್ಷಿಗೆ ಚಿನ್ನದ ಪದಕ
11/01/2022, 15:31
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗಿ ರಾಯಚೂರು
info.reporterkarnataka@gmail.com
ಮಸ್ಕಿ ತಾಲೂಕಿನ ತೀರ್ಥಭಾವಿ ಗ್ರಾಮದ ಕೂಲಿ ಕಾರ್ಮಿಕನ ಮಗಳು ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದಿದ್ದಾಳೆ.
800 ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಕಮಲಾಕ್ಷಿ ಪ್ರಥಮ ಬಹುಮಾನ ಪಡೆಯುವ ಮೂಲಕ ಚಿನ್ನದ ಪದಕ ಪಡೆದು ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.
ಮಸ್ಕಿ ತಾಲೂಕಿನ ತೀರ್ಥಭಾವಿ ಗ್ರಾಮದ ದ್ಯಾಮನಗೌಡ- ನಾಗಮ್ಮ ಅವರ ಮಗಳಾದ ಕಮಲಾಕ್ಷಿಗೆ ಈ ದಂಪತಿ ಸಾಲಸೋಲ ಮಾಡಿ ಮಸ್ಕಿಯ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲು ಸೇರಿಸಿದ್ದರು. ಪ್ರಸ್ತುತ ಮಸ್ಕಿಯ ದೇವನಾಮಪ್ರಿಯ ಅಶೋಕ ಪದವಿ ಕಾಲೇಜಿನಲ್ಲಿ ಬಿಎ ಪದವಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಚಿನ್ನದ ಪದಕ ಪಡೆದ ಸಂತಸದಲ್ಲಿ ರಿಪೋರ್ಟರ್ ಕರ್ನಾಟಕ ಜತೆ ಮಾತನಾಡಿದ ಕಮಲಾಕ್ಷಿ, ತನಗೆ ವಿದ್ಯಾಭ್ಯಾಸದ ಜೊತೆಗೆ ರಾಜ್ಯಮಟ್ಟ ರಾಷ್ಟ್ರಮಟ್ಟದ ಚಾಂಪಿಯನ್ ಆಗಬೇಕೆಂಬ ಕನಸು ಇದೆ ಎಂದು ಹೇಳಿದ್ದಾಳೆ.