ಇತ್ತೀಚಿನ ಸುದ್ದಿ
ಮಸ್ಕಿ: ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಸಮಸ್ಯೆ ಶೀಘ್ರ ಇತ್ಯರ್ಥಪಡಿಸಲು ಆಗ್ರಹಿಸಿ ಮನವಿ
10/07/2022, 20:21
ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಮಸ್ಕಿ ರಾಯಚೂರು
info.reporterkarnataka@gmail.com
ಬೇಡ ಜಂಗಮರ ಪ್ರತಿಭಟನೆ ಬೆಂಗಳೂರಿನಲ್ಲಿ ನಡೆಯುತ್ತಿದ್ದರೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಎರಡು ದಿನದಲ್ಲಿ
ಸರ್ಕಾರದ ಮೌಖಿಕ ಆದೇಶ ಹೊರಡಿಸಲಿದೆ ಎಂದು ಮೂಗಿಗೆ ತುಪ್ಪ ಸವರಿ ಹೋಗಿದ್ದಾರೆ. ಆದರೆ ಇನ್ನು ಬೇಡ ಜಂಗಮರ ಕಡೆ ತಿರುಗು ನೋಡಿಲ್ಲ. ಹಾಗಾಗಿ ರಾಜ್ಯದಲ್ಲಿ ಎಲ್ಲ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಸ್ಕಿ ಮತ್ತು ರಾಯಚೂರು ತಹಶೀಲ್ದಾರರ ಮುಖಾಂತರ ಮನವಿ ಸಲ್ಲಿಸಲಾಯಿತು.
ಬಿ.ಡಿ.ಹಿರೇಮಠ, ಬೇಡ ಜಂಗಮ ಸಮಾಜ ಮಹಿಳಾ ಮುಖಂಡರು, ಯುವ ಮುಖಂಡರು ಮತ್ತು ಮಸ್ಕಿ ಕ್ಷೇತ್ರದ ಹಳ್ಳಿಗಳಿಂದ ಆಗಮಿಸಿದ ಜಂಗಮ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆ ಭಾಗವಹಿ ಜೈಕಾರ ಘೋಷಗಳನ್ನು ಕೂಗುತ್ತಾ ನೆಚ್ಚಿನ ಮಠದಿಂದ ಬ್ರಹ್ಮರಂಬ ದೇವಸ್ಥಾನ ಮುಖಾಂತರ ಕನಕ ವೃತ್ತ ವಾಲ್ಮೀಕಿ ಬಸವ ಸರ್ಕಲ್ ಮುಖಾಂತರ ಜಂಗಮರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನಾಕಾರ ಉದ್ದೇಶಿಸಿ ಘನಮಟ್ಟದಯ್ಯ ಸ್ವಾಮಿಗಳು ಮಾತನಾಡಿ, ಜಂಗಮ ಸಮಾಜದವರನ್ನು ಕಡೆಗಣಿಸಿ ಇಂದು ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ. ಸರ್ಕಾರ ಯಾವುದೇ ರೀತಿಯಿಂದ ನಮಗೆ ನೆರವಿ ಬರುತ್ತಿಲ್ಲ. ನಮ್ಮ ಹೋರಾಟ ನಿಲ್ಲುವುದಿಲ್ಲ. ನಮ್ಮ ಗುರಿ ತಲುಪುವ ತನಕ ನಮ್ಮ ಪ್ರತಿಭಟ ನಿರಂತರ. ಬಿಡಿ ಹಿರೇಮಠ ಅವರ ನೇತೃತ್ವದಲ್ಲಿ ನಿರಂತರ ಹೋರಾಟ ನಡೆಯುತ್ತಿದ್ದು ಪ್ರತಿ ಗ್ರಾಮ ತಾಲೂಕುಗಳಿಂದ ಜಿಲ್ಲೆಗಳಿಂದ ಅವರಿಗೆ ಬೆಂಬಲ ನೀಡುತ್ತಿದ್ದು ಸರಕಾರ ಮೌಕಕ್ಕೆ ಆದೇಶ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಕಾಣದ ಕೈಗಳಿಂದ ತಡೆ ಆಗಿದೆ. ನಮಗೆ ಸಿಗಬೇಕಾ ಸರ್ಟಿಫಿಕೇಟ್ ಸಿಗುವ ತನಕ ನಮ್ಮ ಪ್ರಾಣ ಹೋದರು ಬಿಡುವುದಿಲ್ಲ ಎಂದರು.
ಸಿದ್ದಲಿಂಗಯ್ಯ ಸೊಪ್ಪಿಮಠ ಮಾತನಾಡಿ,ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಸಮಸ್ಯೆಯನ್ನು ಶೀಘ್ರವಾಗಿ ಇತ್ಯಾರ್ಥ ಪಡಿಸುವ ಹಾಗೂ ಬೇಡ ಜಂಗಮರ ಹಕ್ಕೊತ್ತಾಯ ಮತ್ತು ಸತ್ಯ ಪ್ರತಿಪಾದನಾ ಹೋರಾಟಕ್ಕೆ ನಮ್ಮ ಬೆಂಬಲ ನೀಡುತ್ತೇವೆ. ಜುಲೈ 30 ರಂದು ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ನಮ್ಮ ಸಮಾಜದ ಹಿರಿಯ ವಕೀಲರು ಹೋರಾಟಗಾರರು ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟ ( ರಿ ) ರಾಜ್ಯ ಬೇಡ ಜಂಗಮರ ಅಧ್ಯಕ್ಷ ಬಿ.ಡಿ.ಹಿರೇಮಠ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಮಸ್ಕಿ ತಾಲೂಕು ಬೇಡ ಜಂಗಮ ಅಧ್ಯಕ್ಷ ಸಿದ್ದಲಿಂಗಯ್ಯ ಸೊಪ್ಪಿಮಠ, ಹಿರಿಯರಾದ ಘನಮಠದಯ್ಯ ಸಾಲಿಮಠ, ಕರಬಸಯ್ಯ,ಶಿವಕುಮಾರ್ ಶಾಸ್ತ್ರಿ, ಆದಯ್ಯಸ್ವಾಮಿ ಕ್ಯಾತನಟ್ಟಿ ಶಿವಶಂಕ್ರಯ್ಯ ಸ್ವಾಮಿ, ಶರಣಬಸವ ಸೊಪ್ಪಿಮಠ, ಶಿವಶಂಕರಯ್ಯ, ಗಚ್ಚಿನ ಹಿರೇಮಠದ ಈ ಅಮರಯ್ಯ ಹಿರೇಮಠ, ಪೂರ್ಣಿಮಾ ಪಾಟೀಲ್, ಶಾರದಮ್ಮ ಗಣಾಚಾರಿ, ಪಾರ್ವತಮ್ಮ, ಉಮಾದೇವಿ, ಅನ್ನಪೂರ್ಣಾ ಮಂಜುನಾಥ್ ಗಣಾಚಾರಿ, ಸಂಪಾದಕ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ, ವರದಿಗಾರ ಸಿದ್ದಯ್ಯ ಹೆಸರೂರು, ಆದಯ್ಯ ಸ್ವಾಮಿ,ದೇವಯ್ಯ ಸ್ವಾಮಿ, ಬೇಡ ಜಂಗಮ ಸಮಾಜದ ಮಹಿಳೆಯರು ಮತ್ತು ಹಿರಿಯರು ಯುವಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.