1:56 PM Thursday18 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ಮಸ್ಕಿ: ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಗುರುವರೇಣ್ಯ ಗ್ರಾಮೀಣ ವಿದ್ಯಾಪೀಠ ಸೇರಿದಂತೆ ಹಲವೆಡೆ ಪರಿಸರ ದಿನಾಚರಣೆ

06/06/2021, 08:57

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ಪರಿಸರವು ನಮ್ಮ ಭೂಮಿಯ ಮೇಲಿರುವ ಪ್ರತಿಯೊಂದು ಜೀವರಾಶಿಗೆ ಪ್ರಕೃತಿ ನೀಡಿರುವ ಅತ್ಯಂತ ಅಮೂಲ್ಯವಾದ ಕೊಡುಗೆಯಾಗಿದೆ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು, ಕಾಡುಗಳು, ಕೆರೆ, ಹಳ್ಳ, ನದಿ, ಸಾಗರ ಇತ್ಯಾದಿಗಳನ್ನು ನಾವು ಉಳಿಸಿಕೊಂಡು ಹೋಗುವುದು ಇಂದು ಅತ್ಯಗತ್ಯವಾಗಿದೆ. ನಾವೆಲ್ಲರೂ ಅವಲಂಬಿತರಾಗಿರುವ ಈ ಪರಿಸರ ಯುಗ ಯುಗಳವರೆಗೂ ಹೀಗೆಯೂ ಉಳಿಯಬೇಕಿದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಈ ಪರಿಸರವನ್ನು ಹಾಳು ಮಾಡದೆ ಉಳಿಕೊಂಡು ಹೋದಾಗ ಇಂದಿನ ಪರಿಸರ ದಿನಾಚರಣೆಗೆ ಒಂದು ಅರ್ಥ ಬರಲಿದೆ. 

ಗುರುವರೇಣ್ಯ ಗ್ರಾಮೀಣ ವಿದ್ಯಾಪೀಠದ ವಠಾರದಲ್ಲಿ ನಡೆದ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶ್ರೀ ಡಾ.ಶಿವಲಿಂಗ ಮುರುಘ ರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಶಿಕ್ಷಕರಾದ ಎಂ.ಜೆ. ಹಿರೇಮಠ,  ಎ.ಎನ್ . ದೊಡಮನಿ,  ಪುಂಡಲೀಕ ಕರಿಗನ್ನವರ,  ಎಸ್. ಬಿ. ನಾವಿ,  ಎಫ್. ಎಚ್. ದಬಾಡಿ ಭಾಗವಹಿಸಿದ್ದರು. ಶ್ರೀಗಳು ಸಾರ್ವಜನಿಕರನ್ನು, ಭಕ್ತಾದಿಗಳಿಗೆ ಮನೆಯಲ್ಲಿ ಇರಿ ಜಾಗೃತವಾಗಿರಿ ಎಂದು ಸಂದೇಶ ನೀಡಿದ್ದಾರೆ.

ಮಸ್ಕಿಯನ್ನು  ಹಸಿರುಗೊಳಿಸುವತ್ತ ಅಭಿನಂದನ್ ಸಂಸ್ಥೆಗೆ ಜೊತೆಯಾದ ಶಾಸಕ ಬಸನಗೌಡ ತುರ್ವಿಹಾಳ. ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಸ್ಕಿಯನ್ನು ಹಸಿರುಗೊಳಿಸುವ ನಿಟ್ಟಿನಲ್ಲಿ ಆರಂಭಿಸಿದ ಯೋಜನೆಯ ಭಾಗವಾಗಿ 10,001 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಶಾಸಕ ಬಸನಗೌಡ ತುರ್ವಿಹಾಳ ಚಾಲನೆ ನೀಡಿದರು. ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಮಸ್ಕಿಯ ಮುಖ್ಯ ರಸ್ತೆಯಲ್ಲಿ ನಿಸರ್ಗಮಾತೆಯ ಚಿತ್ರವನ್ನು ಬಿಡಿಸುವುದರ ಜೊತೆಗೆ ಪುಟಾಣಿ ಮಕ್ಕಳಿಗೆ ಸಸಿಗಳ ವೇಷಭೂಷಣ ತೊಡಿಸಿ ಜನರಲ್ಲಿ ಪರಿಸರದ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲಾಯಿತು. ಇದರೊಂದಿಗೆ ಕೋವಿಡ್ 19 ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕೊರೊನಾ ಹಾಗೂ ಯಮಧರ್ಮನ ವೇಷವನ್ನು ಪ್ರದರ್ಶಿಸಲಾಯಿತು. 

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ಅಭಿನಂದನ್ ಸಂಸ್ಥೆಯು ಈ ರೀತಿಯ ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದ್ದು. ಈ ಸಂಸ್ಥೆಯ ಕಾರ್ಯಗಳು ಹೀಗೆ ಮುಂದುವರೆಯಲಿ ಮತ್ತು ಜನರಲ್ಲಿ ಕೋವಿಡ್ 19 ನಿಯಮಗಳ ಕುರಿತು ಹಾಗೂ ಜನರಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮನವಿ ಮಾಡಿದರು.  ಮಸ್ಕಿಯ ತಹಸಿಲ್ದಾರ್ ಬಲರಾಮ್ ಕಟ್ಟಿಮನಿ, ಹಿರಿಯರಾದ ಮಹಾಂತೇಶ ಮಸ್ಕಿ, ಅಪ್ಪಾಜಿಗೌಡ, ಜಿಲಾನಿ ಖಾಜಿ, ಮಲ್ಲಯ್ಯ ಬಳ್ಳಾ, ಮಲ್ಲಿಕಾರ್ಜುನ ಪಾಟೀಲ್ ಯದಲದಿನ್ನಿ, ಹನುಮಂತಪ್ಪ ಮುದ್ದಾಪೂರ ಹಾಗೂ ಇನ್ನಿತರ ಮುಖಂಡರು ಮತ್ತು ಸಂಸ್ಥೆಯ ಅಭಿನಂದನ್ ಸಂಸ್ಥೆಯ ಕಾರ್ಯದರ್ಶಿಗಳಾದ ರಾಮಣ್ಣ ಹಂಪರಗುಂದಿ, ಸಂಸ್ಥೆಯ ಸದಸ್ಯರಾದ ಶೃತಿ ಹಂಪರಗುಂದಿ, ಮಲ್ಲಿಕಾರ್ಜುನ ಬಡಿಗೇರ್, ಅಮಿತ್ ಕುಮಾರ್ ಪುಟ್ಟಿ, ಕಾರ್ತಿಕ್ ಜೋಗೀನ್ ಹಾಗೂ ಇತರರು ಉಪಸ್ಥಿತರಿದ್ದರು.

ಮಕ್ಕಳ ಸೈನ್ಯ ವತಿಯಿಂದ ಗಿಡ ನೆಡುವ ಮೂಲಕ ಮುಖಾಂತರ ಪರಿಸರ ದಿನಾಚರಣೆ ಆಚರಿಸಲಾಯಿತು. ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸಲಾಯಿತು.

ಸಂತೆ ಕೆಲ್ಲೂರ ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯರು ಗವಿಸಿದ್ದಪ್ಪ ಸಾಹುಕಾರ್ ಮಕ್ಕಳಿಂದ ಸಸಿ ನೆಡುವ ಕಾರ್ಯಕ್ರಮ ನೆರವೇರಿಸಿದರು. ಇಂದಿನ ದಿನದಲ್ಲಿ ಗಾಳಿ ಗಿಡಮರಗಳಿಂದ ನಾವೆಲ್ಲರೂ ಬದುಕಿದ್ದೇವೆ. ಒಂದು ಯಾವುದೇ ಕೆಲಸ ಇಲ್ಲದಿದ್ದರೂ ನಮಗೆ ತೃಪ್ತಿ ಸಂತೋಷವಾದಾಗ ಗಿಡಮರಗಳನ್ನು ಬೆಳೆಸಬೇಕೆಂದು ತಿಳಿಸಿದರು.

ಮಸ್ಕಿ ನಗರದಲ್ಲಿ ಅಭಿನಂದನ ಶಿಕ್ಷಣ ಸಂಸ್ಥೆ ವತಿಯಿಂದ ನಡೆದ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಸ್ಕಿ ಶಾಸಕ  ಅರ್. ಬಸನಗೌಡ ತುರ್ವಿಹಾಳ, ಮಸ್ಕಿ ಹಿರಿಯ ಮುಖಂಡ ಅಪ್ಪಾಜಿಗೌಡ ಪಾಟೀಲ್,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ  ಪಾಟೀಲ್ ಯದ್ದಲದಿನ್ನಿ. ಅಭಿನಂದನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ  ರಾಮಣ್ಣ ಹಂಪರಗುಂದಿ, ಮುಖಂಡರಾದ ಹನುಮಂತಪ್ಪ ಮುದ್ದಾಪೂರು, ವೆಂಕಟರೆಡ್ಡಿಗೌಡ ಹಾಲಪುರ ಇತರರು ಇದ್ದರು. ಅಂಕುಶದೊಡ್ಡಿ ಗ್ರಾಮ ಪಂಚಾತಿಯಲ್ಲಿ ಪರಿಸರ ದಿನದ ನೆನಪಿನಲ್ಲಿ ಸಸಿ ಹಚ್ಚಲಾಯಿತು.

ಗ್ರಾಮ ಪಂಚಾಯತ್ ಸಿಬ್ಬಂದಿ ಸೇರಿದಂತೆ ಊರಿನ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರತಿಯೊಬ್ಬ ಯುವಕರು  ಗಿಡಮರಗಳನ್ನು ಬೆಳೆಸಬೇಕು. ಗಿಡಗಳಿಂದ ಗಾಳಿಯಿಂದ ಮನುಷ್ಯ ಬದುಕಲು ಸಾಧ್ಯ ಎಂದು ತಿಳಿಸಲಾಯಿತು.

ಸಂದರ್ಭದಲ್ಲಿ ತಾಪಂ ಎಡಿ ಮಂಜುನಾಥ ಜಾವುರ, ತಾಂತ್ರಿಕ ಸಹಾಯಕರಾದ ವೀರೇಶ, ವಿರುಪಣ್ಣ ಬನ್ನಿಗಿಡದ, ಗ್ರಂಥಪಾಲಕ ಗಂಗಾದರ ರಡ್ಡಿ ವಂದಲಿ, ಗ್ರಾಮ ಪಂಚಾಯತ್ ಸದಸ್ಯರಾದ ಬಸವರಾಜ ವಂದಲಿ, ಅಮರೇಶ ಹೊಸಮನಿ, ಲಿಂಗೇಶ ಚಿತಾಫುರ ಮಾನಯ್ಯ, ಅಮಣ್ಣರ ಯಂಕಣ್ಣ ನಾಯಕ ಪರುಶರಾಮ ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು