1:52 AM Saturday31 - January 2026
ಬ್ರೇಕಿಂಗ್ ನ್ಯೂಸ್
ಮೊದಲಿನಂತೆ ಸ್ವತಂತ್ರವಾಗಿ ಸಿನಿಮಾ ಮಾಡಲಾಗುತ್ತಿಲ್ಲ: ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಇಂದ್ರಿಯ ನಿಗ್ರಹಿಸುವುದೇ ನೈಜ ಜ್ಞಾನ; ಇದುವೇ ಜೀವನ ಮಾರ್ಗ : ಶೃಂಗೇರಿ ಶಾರದಾಪೀಠದ… ಗೃಹ ಸಚಿವರ ರಾಜೀನಾಮೆ, ಪೊಲೀಸ್ ಕಮೀಷನರ್ ಅಮಾನತಿಗೆ ಬಿಜೆಪಿ ಆಗ್ರಹ ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿ.ಜೆ. ರಾಯ್‌ ಗುಂಡಿಕ್ಕಿಕೊಂಡು ಆತ್ಮಹತ್ಯೆ: ಐಟಿ ದಾಳಿಗೆ ಹೆದರಿದರೇ… ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ತಂದೆ- ಮಗಳು ಜಸ್ಟ್ ಮಿಸ್: ಕೊಡಗಿನಲ್ಲಿ ತಪ್ಪಿದ ಭಾರಿ… ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ಮಾರ್ಚ್ 15: ಬೆಂಗಳೂರಿನಲ್ಲಿ ಪಂಚಮಸಾಲಿ ದುಂಡು ಮೇಜಿನ ಪರಿಷತ್; ಮೀಸಲಾತಿ ಹೋರಾಟಕ್ಕೆ ರೂಪುರೇಷೆ

13/03/2022, 10:18

ಬೆಂಗಳೂರು(reporterkarnataka.com):ಪಂಚಮ ಸಾಲಿ ದುಂಡು ಮೇಜಿನ ಪರಿಷತ್ತು ಹಾಗೂ  ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ( ಲಿಂಗಾಯತ ಗೌಡ ಮಲೆಗೌಡ ದೀಕ್ಷಾ ಲಿಂಗಾಯತ)ಮೀಸಲಾತಿ ಚಳುವಳಿಗಾರರ ಸಭೆ ಬೆಂಗಳೂರಲ್ಲಿ ಮಾರ್ಚ್15ರಂದು ಬೆಂಗಳೂರಿನ ರಾಜಭವನ ರಸ್ತೆಯಲ್ಕಿರುವ ಪರಾಗ್ ಹೊಟೇಲ್ ನಲ್ಲಿ ನಡೆಯಲಿದೆ. 

ಲಿಂಗಾಯತ ಪಂಚಮಸಾಲಿ ಮೀಸಲಾತಿಗಾಗಿ ಕೂಡಲಸಂಗಮ ಪ್ರಥಮ ಜಗದ್ಗುರುಗಳ ನೇತೃತ್ವದ ಸತ್ಯಾಗ್ರಹ ಸಂಧರ್ಭದಲ್ಲಿ ಸರಕಾರ ಕೊಟ್ಟ ಭರವಸೆಗೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ಕುರಿತು ಸಿದ್ದತಾ ಸಭೆ ನಡೆಯಲಿದೆ.

ಪಂಚಮಸಾಲಿ ಮೀಸಲಾತಿ ಪಾದಯಾತ್ರೆ ಪ್ರವರ್ತಕ, ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಧರ್ಮಕ್ಷೇತ್ರ ಕೂಡಲಸಂಗಮ ಇದರ ಪ್ರಥಮ ಜಗದ್ಗುರು ಶ್ರಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಉಪಸ್ಥಿತರಿರುವರು.

ಸಭೆಯಲ್ಲಿ ಹಾಲಿ -ಮಾಜಿ ಜನಪ್ರತಿನಿಧಿಗಳು,ಅ.ಭಾ.ಲಿಂ.ಪಂಚಮಸಾಲಿ ಟ್ರಸ್ಟ್ , ಯವ ಘಟಕ, ಪಂಚ ಸೇನಾ, ಮಹಿಳಾ ಚನ್ನಮ್ಮ ನ ಬಳಗ , ರೈತ ಘಟಕ, ಎಲ್ ಪಿ ವಿ ಪಿ ಘಟಕ, ವೈದ್ಯಕೀಯ ಘಟಕ, ಸಾಮಾಜಿಕ ಜಾಲತಾಣ ಘಟಕ , ಐಟಿಬಿಟಿ ಘಟಕ ,ಸಾಹಿತ್ಯ ಘಟಕ , ಕಾನೂನು ಘಟಕ, ದಾಸೊಹ ಘಟಕ ವಿವಿಧ ರಾಷ್ಟ್ರೀಯ, ರಾಜ್ಯ ,ಜಿಲ್ಲಾ ,ತಾಲೂಕು ,ನಗರ ಘಟಕಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.


ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್,  ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು, ಎಚ್ ಎಸ್ ಶಿವಶಂಕರ, ಮಾಜಿ ಮೇಯರ್ ಪುಟ್ಟರಾಜು, ಡಾ.ಬಿ.ಎಸ್.ಪಾಟೀಲ್ ನಾಗರಲ್ ಹುಲಿ,  ಕಿರಣ್ ಪಾಟೀಲ, ಶಿವಕುಮಾರ್ ಮೇಟಿ ಮುಂತಾದವರು ಉಪಸ್ಥಿತರಿರುವರು.

ಇತ್ತೀಚಿನ ಸುದ್ದಿ

ಜಾಹೀರಾತು