ಇತ್ತೀಚಿನ ಸುದ್ದಿ
ಮರವೂರು ಸೇತುವೆ ಕುಸಿತ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಲಿ: ಮಿಥುನ್ ರೈ ಆಗ್ರಹ
16/06/2021, 09:39
ಮಂಗಳೂರು(reporterkarnataka news): ಮರವೂರು ಸೇತುವೆ ಕುಸಿಯಲು ಕಾರಣದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯಬೇಕೆಂದು ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಿಥುನ್ ರೈ ಒತ್ತಾಯಿಸಿದರು.
ಡ್ರೆಜ್ಜಿಂಗ್ ನೆಪದಲ್ಲಿ ಇಲ್ಲಿ ಪ್ರತಿನಿತ್ಯ ಮರಳುಗಾರಿಕೆ ನಡೆಯುತ್ತಿರುವುದರಿಂದ ಮರವೂರು ಸೇತುವೆ ದುರಂತ ಸಂಭವಿಸಿದೆ. ಹೊಸ ಸೇತುವೆ ಕಾಮಗಾರಿ ಸಮರೋಪಾದಿಯಲ್ಲಿ ಮುಗಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.
ರೈಲ್ವೇ ಮಾರ್ಗ ಹಾಗೂ ಸೇತುವೆ ನಡುವೆ ಜೆಸಿಬಿಗಳನ್ನು ಉಪಯೋಗಿಸಿ ಕೆಲಸ ನಡೆಯುತ್ತಿದ್ದ ಸಂದರ್ಭ ಸ್ಥಳೀಯರು ವಿಚಾರಿಸಿದಾಗ ಹೂಳೆತ್ತುವ ಕೆಲಸ ಎಂದು ಗಣಿಗಾರಿಕೆ ಅಧಿಕಾರಿಗಳು ತಿಳಿಸಿದ್ದರು. ಆದರೆ ಹೂಳೆತ್ತುವ ಮಣ್ಣನ್ನು ಅಲ್ಲೇ ಸಮೀಪದ ಹೊಂಡಕ್ಕೆ ಹಾಕುವಂತೆ ಸ್ಥಳೀಯರು ಮನವಿ ಮಾಡಿದ್ದೆವು. ಆದರೆ ಅಲ್ಲಿ ಹೂಳೆತ್ತಿದ್ದ ಮಣ್ಣು ಹಾಕಲಾಗಿಲ್ಲ. ಬದಲಾಗಿ ಸುಮಾರು 700 ಲೋಡ್‌ನಷ್ಟು ಮರುಳು ಶೇಖರಣೆಯಾಗಿದೆ ಎಂದು ಸ್ಥಳೀಯರಾದ ಬಾಬು ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಿನಯರಾಜ್, ಶಾಲೆಟ್ ಪಿಂಟೋ, ಅನಿಲ್ ಕುಮಾರ್, ಮೆರಿಲ್ ರೇಗೋ, ಸವದ್ ಸುಳ್ಯ, ಸಿರಾಜ್, ಹನೀಫ್ ಉಪಸ್ಥಿತರಿದ್ದರು.