ಇತ್ತೀಚಿನ ಸುದ್ದಿ
ಮರಕಡ ಪ್ರಾಥಮಿಕ ಶಾಲೆ ನೂತನ 3 ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ: ವಿಕಾಸ ಶಾಲಾ ಕೊಠಡಿ ಯೋಜನೆಯಡಿ ಕಾಮಗಾರಿ
15/11/2022, 10:52
ಸುರತ್ಕಲ್ (reporter Karnataka.com): ಸುಮಾರು 41.70 ಲಕ್ಷ ರೂ ಅನುದಾನದಲ್ಲಿ ಮರಕಡದಲ್ಲಿರುವ ದ.ಕ.ಜಿ.ಪಂ.ಮಾ.ಹಿ.ಪ್ರಾ. ಶಾಲೆಯಲ್ಲಿ ನೂತನ ಮೂರು ಕೊಠಡಿಗಳ ನಿರ್ಮಾಣಕ್ಕೆ ವಿಕಾಸ ಶಾಲಾ ಕೊಠಡಿ ಯೋಜನೆಯಡಿಯಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.


ಈ ಸಂದರ್ಭದಲ್ಲಿ ಮೇಯರ್ ಜಯಾನಂದ ಅಂಚನ್, ಮನಪಾ ಸದಸ್ಯರಾದ ಲೋಹಿತ್ ಅಮೀನ್, ಶರತ್ ಕುಂಜತ್ತಬೈಲ್, ಅಧಿಕಾರಿಗಳು, ಗಣ್ಯರು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.














