ಇತ್ತೀಚಿನ ಸುದ್ದಿ
ಮಣೂರು: ಕುಡಿತದ ಅಮಲಿನಲ್ಲಿ ಮಧುವೆಂದು ಇಲಿ ಪಾಷಾಣ ಸೇವಿಸಿ ವ್ಯಕ್ತಿ ಸಾವು
21/07/2022, 12:16
ಬ್ರಹ್ಮಾವರ(reporterkarnataka.com):ಮಧು ಎಂದು ಇಲಿ ಪಾಷಾಣ ಸೇವಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಮಣೂರು ಗ್ರಾಮದ ಹೆಬ್ಬಾರ್ ಬೆಟ್ಟು ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಹೆಬ್ಬಾರ್ ಬೆಟ್ಟು ನಿವಾಸಿ ನಾರಾಯಣ ಖಾರ್ವಿ(58) ಮೃತದುರ್ದೈವಿ. ಇವರು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ವಿಪರೀತ ಕುಡಿತದ ಚಟ ಹೊಂದಿದ್ದರು. ಜುಲೈ 13ರಂದು ಕುಡಿತ ಅಮಲಿನಲ್ಲಿ ಮಧು ಎಂದು ತಿಳಿದು ಕಿಟಕಿಯ ಬಳಿಯಿದ್ದ ಇಲಿ ಪಾಶಾಣವನ್ನು ಸೇವಿಸಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಬಳಿಕ ಅಲ್ಲಿಂದ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..